ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಘೋಷಣೆ
ಸಮಾಜಸೇವೆ, ಕಲೆ, ಕ್ರೀಡೆ, ವ್ಯವಹಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದ 94 ಸಾಧಕರಿಗೆ ಗೌರವ

ದಕ್ಷಿಣ ಕನ್ನಡ ಜಿಲ್ಲಾ ಆಡಳಿತವು 2025ನೇ ವರ್ಷದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.
ಪ್ರಮುಖ ಪ್ರಶಸ್ತಿ ಪುರಸ್ಕೃತರು: ಕನ್ನಡ ನಾಡಿನ ಸಾಂಸ್ಕೃತಿಕ ಆತ್ಮವನ್ನು ಪ್ರತಿ ಬಿಂಬಿಸುವ ಪ್ರಶಸ್ತಿಗಳು
ಸಿಸ್ಟರ್ ಲೂಸಿಯಾನಾ ಪಿಂಟೊ– ಮರ್ಸಿ ದಿ ಹೋಮ್ ಫಾರ್ ಆರ್ಫನ್ಸ್, ಪಾನೀರ್, ದೇರಳಕಟ್ಟೆ: ಸಮಾಜಸೇವೆ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ

ಸತೀಶ್ ಇರಾ – ಪತ್ರಿಕೋಧ್ಯಮ ಕ್ಷೇತ್ರ

ಡಾ. ಹೆಚ್. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ – ಕ್ರೀಡಾ, ಶೈಕ್ಷಣಿಕ / ಧಾರ್ಮಿಕ ಕ್ಷೇತ್ರ

ರೆಮೊನಾ ಎವೆಟ್ ಪಿರೇರಾ – ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ

ಪೀಟರ್ ಜೆರಿ ರೊಡ್ರಿಗಸ್ ಬಂಟ್ವಾಳ – ಸಾಮಾಜಿಕ ಕ್ಷೇತ್ರದಲ್ಲಿ ಸೇವೆ

ಒಟ್ಟು 94 ವಿಭಿನ್ನ ಕ್ಷೇತ್ರಗಳ ಸಾಧಕರಿಗೆ 2025ನೇ ವರ್ಷದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಪ್ರದಾನವಾಗಲಿವೆ. ಈ ಪ್ರಶಸ್ತಿಗಳನ್ನು ನಾಳೆ ನವೆಂಬರ್ 1ರಂದು ಶನಿವಾರ ಮಂಗಳೂರು ನೆಹರೂ ಮೈದಾನದಲ್ಲಿ ನಡೆಯುವ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ವಿತರಿಸಲಾಗುತ್ತದೆ.






ಕನ್ನಡ ನಾಡಿನ ಆತ್ಮಸಾಕ್ಷಾತ್ಕಾರ:
ರಾಜ್ಯೋತ್ಸವ ಪ್ರಶಸ್ತಿಗಳು ಕನ್ನಡ ನಾಡಿನ ಸಾಂಸ್ಕೃತಿಕ ಆತ್ಮವನ್ನು ಪ್ರತಿಬಿಂಬಿಸುವಂತಿವೆ. ಸಮಾಜಸೇವೆ, ಕಲೆ, ಕ್ರೀಡೆ, ಭಾಷಾ ಪ್ರಚಾರ, ವ್ಯವಹಾರ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಸಾಧಕರನ್ನು ಗೌರವಿಸುವ ಮೂಲಕ ಜಿಲ್ಲಾಡಳಿತವು ಕನ್ನಡ ನಾಡಿನ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.





