November 8, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

‘ನಿರುದ್ಯೋಗಿಗಳ ಕನಸುಗಳಿಗೆ ಹೊಸ ದಿಕ್ಕು’ – ಸೈಂಟ್ ಜೋಸೆಫ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಕೇರಿಯರ್ ಎಕ್ಸ್‌ಪೊ 2025 ಯಶಸ್ವಿ

“ಭರವಸೆಯ ಯಾತ್ರಿಕರಾಗಿ ಮುಂದೆ ಸಾಗೋಣ– ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ಸಮಿತಿ, ಯುವ ಆಯೋಗ, ವಾಮಂಜೂರು ಸೈಂಟ್ ಜೋಸೆಫ್ ಇಂಜಿನೀಯರಿಂಗ್ ಕಾಲೇಜು ಹಾಗೂ ಕರ್ನಾಟಕ ಪ್ರಾದೇಶಿಕ ಯುವ ಆಯೋಗ KRYC ಇವರ ಇವರ ಸಹಯೋಗದಲ್ಲಿ “ಕೇರಿಯರ್ ಎಕ್ಸ್‌ಪೊ 2025” ನವೆಂಬರ್ 1 ಶನಿವಾರ ಮತ್ತು 2ರಂದು ಭಾನುವಾರ ಆಯೋಜಿಸಲಾದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಕರ್ನಾಟಕ ಮತ್ತು ಕೇರಳದ ಸುಮಾರು 3,000ಕ್ಕೂ ಹೆಚ್ಚು ಯುವಜನರು ಹಾಗೂ ಭಾರತದ ನಾನಾ ಭಾಗಗಳಿಂದ ಬಂದ ಸುಮಾರು 200ಕ್ಕೂ ಹೆಚ್ಚು ಕಂಪನಿಗಳ ಪಾಲ್ಗೊಳ್ಳುವಿಕೆಯಿಂದ ಈ ಎಕ್ಸ್‌ಪೊ ಪ್ರಾದೇಶಿಕ ಮಟ್ಟದ ಅತ್ಯಂತ ದೊಡ್ಡ ಯುವಕೇಂದ್ರಿತ ಉದ್ಯೋಗ ವೇದಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

“ಯುವಕರಿಂದ ಯುವಕರಿಗಾಗಿ – ಪ್ರೇರಣೆಯ ವೇದಿಕೆ

ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸೈಂಟ್ ಜೋಸೆಫ್ ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ರಿಯೋ ಡಿಸೋಜ ಮಾತನಾಡಿ, “ಯುವಕರು ಯುವಕರಿಗಾಗಿ ಉದ್ಯೋಗ ಮೇಳ ಆಯೋಜಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಉದ್ಯೋಗ ಹುಡುಕುತ್ತಿರುವ ಯುವಜನತೆಗೆ ತಮ್ಮ ಸಾಮರ್ಥ್ಯವನ್ನು ಗುರುತಿಸಲು ಹಾಗೂ ತಕ್ಕ ಕೆಲಸವನ್ನು ಆಯ್ಕೆ ಮಾಡಲು ಸಹಾಯಕವಾಗುತ್ತವೆ. ಈ ವೇದಿಕೆ ಕೇವಲ ಉದ್ಯೋಗಾವಕಾಶವಲ್ಲ, ಅದು ಯುವ ಮನಸ್ಸುಗಳಿಗೆ ಆತ್ಮವಿಶ್ವಾಸ ನೀಡುವ ತರಬೇತಿ ಕೇಂದ್ರವೂ ಆಗಿದೆ,” ಎಂದು ಹೇಳಿದರು.

ಭರವಸೆಯ ಯಾತ್ರಿಕರಾಗಿ ಮುಂದೆ ಸಾಗೋಣ

ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಧರ್ಮಕ್ಷೇತ್ರದ ದರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರು ಯುವಜನತೆಗೆ ನೀಡಿದ ಪ್ರೇರಣಾದಾಯಕ ಸಂದೇಶದಲ್ಲಿ “3,000 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಮತ್ತು 200 ಕ್ಕೂ ಹೆಚ್ಚು ಕಂಪನಿಗಳು ಒಂದೇ ವೇದಿಕೆಯಲ್ಲಿ ಸೇರುವುದೇ ಭರವಸೆಯ ಸಂಕೇತ. ಕೆಲಸದ ಕೊರತೆಯಿಂದ ನಿರಾಸೆಗೊಳ್ಳದೆ, ಇಂತಹ ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ ನಿಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ. ಪ್ರತಿಯೊಂದು ಯುವಜನತೆ ಭರವಸೆಯ ಯಾತ್ರಿಕನಾಗಲಿ. ಕೆಲಸದ ಹಾದಿಯಲ್ಲಿ ನಂಬಿಕೆಯೊಂದಿಗೆ ಮುಂದೆ ಸಾಗಲಿ,” ಎಂದು ಆಶೀರ್ವದಿಸಿದರು. “ಉದ್ಯೋಗ ಕೇವಲ ಜೀವನೋಪಾಯವಲ್ಲ, ಅದು ಸೇವೆಯ ಮಾರ್ಗವೂ ಆಗಬೇಕು. ನಿಮ್ಮ ಕೌಶಲ್ಯಗಳ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಉತ್ಸಾಹ ಇರಲಿ,” ಎಂದು ಯುವಜನತೆಗೆ ಸಂದೇಶ ನೀಡಿದರು.

 

 

ಯುವಶಕ್ತಿಯ ಪ್ರದರ್ಶನ:

ಎರಡು ದಿನಗಳ ಕಾಲ SJEC ಆವರಣ ಚಟುವಟಿಕೆಗಳಿಂದ ಕಂಗೊಳಿಸಿತು. ಯುವಕರು ನೇಮಕಾತಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಸಂದರ್ಶನಗಳಲ್ಲಿ ಪಾಲ್ಗೊಂಡು, ತಮ್ಮ ವೃತ್ತಿಜೀವನದ ಹೊಸ ದಾರಿಗಳನ್ನು ಅನ್ವೇಷಿಸಿದರು. ಕೈಗಾರಿಕಾ ತಜ್ಞರೊಂದಿಗೆ ನಡೆದ ಚರ್ಚೆಗಳು ಯುವಕರಲ್ಲಿ ಹೊಸ ಚೈತನ್ಯ ತುಂಬಿದವು.

ಕಾರ್ಯಕ್ರಮದಲ್ಲಿ KRYC ಮತ್ತು ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ನಿರ್ದೇಶಕರಾದ ವಂದನೀಯ ಫಾದರ್ ಅಶ್ವಿನ್ ಕಾರ್ಡೋಜ, ಸೈಂಟ್ ಜೋಸೆಫ್ ಇಂಜಿನೀಯರಿಂಗ್ ಕಾಲೇಜಿನ ಸಹ ನಿರ್ದೇಶಕರಾದ ವಂದನೀಯ ಫಾದರ್ ಕೆನೆತ್ ಕ್ರಾಸ್ತಾ, KRYC ಸಂಯೋಜಕಿ ವಿಲೀನಾ ಗೊನ್ಸಾಲ್ವಿಸ್, ICYM ಕೇಂದ್ರೀಯ ಅಧ್ಯಕ್ಷ ವಿಜೋಯ್ ಅಶ್ವಿನ್ ಕಾರ್ಡೋಜಾ,  ಕಾರ್ಯದರ್ಶಿ ಮಾರಿಯಾ ಡಿಸಿಲ್ವ, ಮಂಗಳೂರು ಧರ್ಮಕ್ಷೇತ್ರದ ಯುವ ಆಯೋಗದ ಸಂಯೋಜಕ ಜೈಸನ್ ಕ್ರಾಸ್ತಾ, ಸೈಂಟ್ ಜೋಸೆಫ್ ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿ ಸಂಯೋಜಕ ರೂಬನ್ ಸಲ್ಡಾನ್ಹಾ, ನಿರ್ದೇಶಕರಾದ ವಂದನೀಯ ಫಾದರ್ ವಿಲ್ಫ್ರೆಡ್ ರೊಡ್ರಿಗಸ್, KRYC ಲೇಡಿ ಎನಿಮೇಟರ್ ಸಿಸ್ಟರ್ ಮೊಲಿ ಹಾಗೂ ಕಾರ್ಯದರ್ಶಿ ಜೆಸಿಕಾ ಸಾಂಥುಮಾಯೋರ್ ಉಪಸ್ಥಿತರಿದ್ದರು.

ಯುವಶಕ್ತೀಕರಣದ ಸೇತುವೆ ಕೇರಿಯರ್ ಎಕ್ಸ್‌ಪೊ 2025 : ಯುವ ಜನರ ಆಶಯಗಳು ಮತ್ತು ಅವಕಾಶಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿ, ಯುವ ಶಕ್ತೀಕರಣದ ನವ ದಿಶೆಯನ್ನು ಎಕ್ಸ್ ಪೊ ತೋರಿಸಿತು. ICYM ಮತ್ತು SJEC ಅವರ ಯುವಜನ ಹಿತದ ದೃಢಬದ್ಧತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿತು.

You may also like

News

ಮಾಣಿ ಗ್ರಾಮದಲ್ಲಿ ಹಳೆ ಮನೆ ದುರಸ್ತಿ ಪರವಾನಗಿ ಪಡೆದು ಸರಕಾರಿ ಜಮೀನಿನ ಮೇಲೆ ಅಕ್ರಮವಾಗಿ ನಿರ್ಮಿಸಿದ ಐಶಾರಾಮಿ ಬಂಗ್ಲೆ

ಯಾವುದೇ ದಾಖಲೆಗಳಿಲ್ಲದೆ ಸರಕಾರಕ್ಕೆ ವಂಚನೆ ಮಾಡಿದ್ದನ್ನು ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ಅತಿಕ್ರಮಿತ ಕಟ್ಟಡ ಕೂಡಲೇ ತೆರವುಗೊಳಿಸಲು ಲೂಸಿಯಾ ಮೆಟಿಲ್ಡಾ ಪಿಂಟೊರವರಿಗೆ ಬಂಟ್ವಾಳ ತಹಶೀಲ್ದಾರ್ ನೋಟಿಸ್ ಜಾರಿ ಮಾಣಿ
News

ನಕಲಿ ದಾಖಲೆ ಪ್ರಕರಣದಲ್ಲಿ ಆರೋಪಿ ಅಬ್ದುಲ್ ಹಾಶೀಮ್ ಬಂಧನ

ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯವನ್ನು ವಂಚಿಸಿದ ಭೂಪ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ 34 ವರ್ಷ ಪ್ರಾಯದ ಅಬ್ದುಲ್ ಹಾಶೀಮ್  ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ನವೆಂಬರ್ 6ರಂದು

You cannot copy content of this page