July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಳವಾರು ಪೇಜಾರ್ ಸಂತ ಜೋಸೆಫರ ಚರ್ಚ್ – ಮಾರ್ಚ್ 31ರಂದು 242ನೇ ಐತಿಹಾಸಿಕ ‘ಪವಿತ್ರ ಶಿಲುಬೆಯ ಹಾದಿ’

ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಡಾ. ರೊನಾಲ್ಡ್ ಡಿಸೋಜ ಅವರಿಂದ ಪತ್ರಿಕಾ ಗೋಷ್ಠಿ

ಸುಮಾರು ಎರಡುವರೆ ಶತಮಾನಗಳ ಭವ್ಯ ಇತಿಹಾಸವಿರುವ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಕಳವಾರಿನ ಸಂತ ಜೋಸೆಫರ ದೇವಾಲಯದಲ್ಲಿ ಈ ವರ್ಷ 242ನೇ ಚಾರಿತ್ರಿಕ ಪವಿತ್ರ ಶಿಲುಬೆಯ ಹಾದಿ ಕಾರ್ಯಕ್ರಮವು ಮಾರ್ಚ್ 31ರಂದು ಮಂಗಳವಾರ ಅತ್ಯಂತ ಭಕ್ತಿಭಾವದಿಂದ ನಡೆಯಲಿದೆ. ಯೇಸು ಕ್ರಿಸ್ತರ ಕಷ್ಟಾನುಭವದ ಸ್ಮರಣೆಗಾಗಿ ನಡೆಯುವ ಈ ವರ್ಷದ ಕಾರ್ಯಕ್ರಮವು “ಯಾತನೆ ಪಡುವ ಪ್ರಭು ಕ್ರಿಸ್ತರ ಶರೀರವನ್ನು ಸ್ಪರ್ಶಿಸಲು ಯಾತ್ರಿಕ ಪಯಣ” ಎಂಬ ಧ್ಯೇಯವಾಕ್ಯದೊಂದಿಗೆ ಜರುಗಲಿದೆ.

ದಿನದ ಕಾರ್ಯಕ್ರಮಗಳ ವಿವರ:

* ಬೆಳಿಗ್ಗೆ 10:00 – ಅಪರಾಹ್ನ 3:00: ನಿರಂತರ ಪ್ರಾರ್ಥನೆ, ಸ್ತುತಿ ಆರಾಧನೆ ಮತ್ತು ವಾಕ್ಯದ ಮನನ. (ಮಂಗಳೂರು ಧರ್ಮಕ್ಷೇತ್ರದ ಕ್ಯಾರಿಸ್ಮಾಟಿಕ್ ಸಂಚಾಲನ ತಂಡದಿಂದ)

* ಅಪರಾಹ್ನ 3:00: ದೇವರ ಕೃಪೆಯ ಭಕ್ತಿಯಾಚರಣೆ.

* ಅಪರಾಹ್ನ 3:30: ಪರಮ ಪವಿತ್ರ ಪ್ರಸಾದದ ಆರಾಧನೆ ಹಾಗೂ ಆಂತರಿಕ ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ. (ನೇತೃತ್ವ: ವಂದನೀಯ ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್)

* ಸಂಜೆ 5:00: ಪವಿತ್ರ ಬಲಿಪೂಜೆ.

* ಸಂಜೆ 6:00: ಚಾರಿತ್ರಿಕ ‘ಶಿಲುಬೆಯ ಹಾದಿ’ ಭಕ್ತಿಯಾಚರಣೆ.

* ಸಂಜೆ 7:30 (ಸುಮಾರು): ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರಿಂದ ಪ್ರವಚನ.

ರಾತ್ರಿ 9 ಗಂಟೆಗೆ ಕಾರ್ಯಕ್ರಮವು ಮುಕ್ತಾಯಗೊಳ್ಳಲಿದ್ದು, ಬಳಿಕ ಆಗಮಿಸಿದ ಎಲ್ಲಾ ವಿಶ್ವಾಸಿಗಳಿಗೆ ರಾತ್ರಿಯ ಭೋಜನದ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಪಾದಯಾತ್ರೆ:

ಈ ಭಕ್ತಿ ಪಯಣದ ಭಾಗವಾಗಿ ಭಕ್ತಾದಿಗಳಿಗಾಗಿ ಎರಡು ಕಡೆಗಳಿಂದ ಪಾದಯಾತ್ರೆಯನ್ನು ಆಯೋಜಿಸಲಾಗಿದೆ:

* ಮಧ್ಯಾಹ್ನ 2:45ಕ್ಕೆ: ಬಜಪೆ ಚೆಕ್ ಪೋಸ್ಟ್‌ನಿಂದ ಕಳವಾರು ಚರ್ಚ್‌ಗೆ.

* ಮಧ್ಯಾಹ್ನ 3:30ಕ್ಕೆ: ಜೋಕಟ್ಟೆ ಕೆಬಿಎಸ್‌ನಿಂದ ಕಳವಾರು ಚರ್ಚ್‌ಗೆ.

ಐತಿಹಾಸಿಕ ಹಿನ್ನೆಲೆ:

241 ವರ್ಷಗಳ ಹಿಂದೆ ವಿಭೂತಿ ಬುಧವಾರದಂದು ಆರಂಭಗೊಂಡ ಈ ಪವಿತ್ರ ಯಾತ್ರೆಯು, ಇಂದು ನಾಡಿನಾದ್ಯಂತದ ಸಾವಿರಾರು ಭಕ್ತರನ್ನು ಆಕರ್ಷಿಸುವ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿ ಬೆಳೆದು ಬಂದಿದೆ ಎಂದು ಇಂದು, ಮಾರ್ಚ್ 27ರಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಕಳವಾರು ಪೇಜಾರ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಡಾ. ರೊನಾಲ್ಡ್ ಡಿಸೋಜ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಪೇಜಾರ್ ವಲಯದ ಶ್ರೇಷ್ಠ ಗುರು ವಂದನೀಯ ಫಾದರ್ ರುಡಾಲ್ಫ್ ರವಿ ಡೇಸಾ, ಕಳವಾರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಕ್ಲಿಫರ್ಡ್ ಡಿಸೋಜ, ಕಾರ್ಯದರ್ಶಿ ಸಿಲ್ವಿಯಾ ಪೆರಿಸ್, ಸಿಲಾ ಎಡ್ವಟೈಸರ್ಸ್ ಇದರ ವಾಲ್ಟರ್ ಮೊಂತೇರೊ ಮತ್ತು ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

You may also like

News

41 ಬಾರಿ ವಾರೆಂಟ್ ಜಾರಿಯಾಗಿದ್ದ ಖತರ್ನಾಕ್ ಆರೋಪಿ ನೆಲ್ಸನ್ ಕೊನೆಗೂ ಪುತ್ತೂರು ಪೊಲೀಸರ ವಶಕ್ಕೆ!

ಕಳೆದ 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ಬರೋಬ್ಬರಿ 41 ಬಾರಿ ದಸ್ತಗಿರಿ ವಾರೆಂಟ್ ಆದೇಶವಾಗಿದ್ದ ದರೋಡೆ ಪ್ರಕರಣದ ಪ್ರಮುಖ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಕೇರಳದಲ್ಲಿ
News

SJEC’s Nikhil A. Poojary to Represent India at International Yoga Championship

Saint Joseph Engineering College (SJEC) Vamanjoor has added another feather to its cap with the outstanding achievement of Nikhil A.

You cannot copy content of this page