October 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

MLC ಐವನ್ ಡಿಸೋಜ ಶಿಫಾರಸು – 8 ಜನ ಫಲಾನುಭವಿಗಳಿಗೆ 4.15 ಲಕ್ಷ ರೂಪಾಯಿ ಮುಖ್ಯಮಂತ್ರಿ ಪರಿಹಾರ ನಿಧಿ ಬಿಡುಗಡೆ

ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರ ವಿಶೇಷ ಶಿಫಾರಸಿನ ಮೇರೆಗೆ, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 8 ಮಂದಿ ಅರ್ಹ ಅರ್ಜಿದಾರರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಟ್ಟು 4,15,502 ರೂಪಾಯಿ ಪರಿಹಾರ ಧನ ಮಂಜೂರಾಗಿದ್ದು, ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.

ಮಂಗಳೂರಿನಲ್ಲಿರುವ ವಿಧಾನ ಪರಿಷತ್ ಸದಸ್ಯರ ಕಚೇರಿಯಲ್ಲಿ ಪರಿಹಾರ ಧನದ ಬಿಡುಗಡೆ ಪತ್ರವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಸಹಾಯಧನ ಪಡೆದ ವಿವರಗಳು ಈ ಕೆಳಗಿನಂತಿವೆ:

 

ಫಲಾನುಭವಿಗಳ ವಿವರ:

* ಅರುಣಾ ಐ., ಸುರತ್ಕಲ್: 95,290 ರೂಪಾಯಿ

* ನಬಿಸಾ, ಸುಳ್ಯ: 79,747 ರೂಪಾಯಿ

* ಕುಮಾರಿ ಪಾಯಲ್ ಸುವರ್ಣ, ಕುಲಶೇಖರ: 62,788 ರೂಪಾಯಿ

* ಅಬ್ದುಲ್ ಖಾದರ್, ಮಂಗಳೂರು: 59,066 ರೂಪಾಯಿ

* ಪುಷ್ಪಲತಾ, ಕುದ್ರೋಳಿ: 31,893 ರೂಪಾಯಿ

* ಹೈದರ್ ಅಬ್ದುಲ್ ರೆಹಮಾನ್: 32,835 ರೂಪಾಯಿ

* ರಂಜಿತ್ ಜಿ.: 25,000 ರೂಪಾಯಿ

* ಹಮೀದ್, ಮಂಗಳೂರು: 22,685 ರೂಪಾಯಿ

* ಮಾಲತಿ ಕುಂದರ್, ಮಂಗಳೂರು: 6,193 ರೂಪಾಯಿ

ಅನಾರೋಗ್ಯದಿಂದ ಸಂಕಷ್ಟಕ್ಕೀಡಾದ ಬಡ ಕುಟುಂಬಗಳಿಗೆ ಈ ಪರಿಹಾರ ಧನವು ಚಿಕಿತ್ಸಾ ವೆಚ್ಚ ಭರಿಸಲು ಆಸರೆಯಾಗಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

You may also like

News

ಮಂಗಳೂರು ಪ್ರೆಸ್ ಕ್ಲಬ್‌ನ ನವೀಕೃತ ‘ಅಕ್ಷರ ಸಭಾಂಗಣ’ ಉದ್ಘಾಟನೆ

ಮಾಧ್ಯಮದ ನೈತಿಕ ಮೌಲ್ಯಗಳ ರಕ್ಷಣೆ ಪತ್ರಕರ್ತರ ಹೊಣೆ – ಡಾ. ಎಂ. ಮೋಹನ್ ಆಳ್ವ ರಾಜಕೀಯ, ಶಿಕ್ಷಣ, ಆರೋಗ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮೌಲ್ಯಗಳು ಮತ್ತು ಪಾವಿತ್ರ್ಯತೆ
News

ಗಂಜಿಮಠ ಗ್ರಾಮ ಪಂಚಾಯತ್ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವುದೇ ಗ್ರಾಮ ಪಂಚಾಯತ್ ವ್ಯವಸ್ಥೆಯ ಉದ್ದೇಶ – ಡಾ. ಭರತ್ ಶೆಟ್ಟಿ ಗುರುಪುರ ಗಂಜಿಮಠ ಗ್ರಾಮ ಪಂಚಾಯತ್‌ನ ನೂತನ ಕಟ್ಟಡ ನಿರ್ಮಾಣಕ್ಕೆ

You cannot copy content of this page