July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಅವರ ಪ್ರಬಲ ವಾದವನ್ನು ಎತ್ತಿಹಿಡಿದ ಸುಳ್ಯ ನ್ಯಾಯಾಲಯ – ಆರೋಪಿ ದೋಷಮುಕ್ತ!

ದೀರ್ಘಕಾಲದ ವಿಚಾರಣೆಯ ನಂತರ, ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಆರೋಪಿಯನ್ನು ದೋಷಮುಕ್ತಗೊಳಿಸಿ ಸುಳ್ಯ ನ್ಯಾಯಾಲಯವು ಆದೇಶ ಹೊರಡಿಸಿದೆ. ಈ ಮೂಲಕ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.

ಪ್ರಕರಣದ ಹಿನ್ನೆಲೆ:

ಬೆಳ್ಳಾರೆ ವಿದ್ಯಾಬೋಧಿನೀ ಅನಿದಾನಿತ ಪ್ರೌಢ ಶಾಲೆಯಲ್ಲಿ ಕಲಿಯುತ್ತಿದ್ದ ಒಬ್ಬ ವಿಧ್ಯಾರ್ಥಿಯು ಧರಿಸಿದ್ದ ಶಾಲಾ ಸಮವಸ್ತ್ರದ ಪ್ಯಾಂಟ್ ಶಾಲೆಯ ಶಿಸ್ತಿಗೆ ಅನುಗುಣವಾಗಿ ಇರುವುದಿಲ್ಲ ಎಂಬ ಕಾರಣಕ್ಕೆ ಶಾಲಾ ಅಧ್ಯಾಪಕರು ಹಲ್ಲೆ ನಡೆಸಿದ್ದಾರೆ ಎಂಬಂತಹ ಆರೋಪದ ದೂರಿನಂತೇ ಬೆಳ್ಳಾರೆ ಪೊಲೀಸರು ಶಿಕ್ಷಕರ ವಿರುದ್ದ ಬಾಲಾಪರಾಧಿ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ಧಾಖಲಿಸಿಕೊಂಡು, ಪ್ರಥಮ ವರ್ತಮಾನ ವರದಿ ಸಲ್ಲಿಸಿ ತದನಂತರ ಮುಂದುವರಿದು ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ನಂತರ ನ್ಯಾಯಾಲಯದಿಂದ ಶಿಕ್ಷಕರಿಗೆ ಸಮನ್ಸ್ ಜಾರಿಯಾಗಿದ್ದು, ನ್ಯಾಯಾಲಯದ ಮುಂದೆ ಹಾಜರಾದಂತಹ ಸದ್ರಿಯವರು ತನ್ನ ವಿರುದ್ಧ ಸಲ್ಲಿಸಿದಂತಹ ಪ್ರಕರಣ ಪೂರ್ವಾಗ್ರಹ ಪೀಡಿತವಾದಂತಹದ್ದು, ತಾನು ಯಾವುದೇ ಆರೋಪಿತ ಕೃತ್ಯ ಎಸೆಗಿರುವುದಿಲ್ಲ, ಸದ್ರಿ ದೂರಿನಲ್ಲಿ ಸುಮಾರು ಏಳು ತಿಂಗಳುಗಳ ವಿಳಂಬವಿರುತ್ತದೆ. ಈ ವಿಳಂಬದ ಬಗ್ಗೆಯೂ ಯಾವುದೇ ಸೂಕ್ತವಾದ ಸಮಜಾಯಿಸುವಿಕೆ ಇರುವುದಿಲ್ಲ, ಅಷ್ಟು ಮಾತ್ರವಲ್ಲದೇ ಬಾಲಾಪರಾಧಿ ತಡೆ ಕಾಯ್ದೆಯ ಅಡಿಯಲ್ಲಿ ಸಲ್ಲಿಸಿರುವಂತಹ ಸದ್ರಿ ದೂರನ್ನು ಕಾನೂನಿನ ಚೌಕಟ್ಟಿನಲ್ಲಿ ಸದ್ರಿ ಆರೋಪಿತ ದೂರನ್ನು ಪರಿಗಣಿಸಿ ನ್ಯಾಯಾಧಿಶರ ಪೂರ್ವಾನುಮತಿ ಇಲ್ಲದೆ ನೇರವಾಗಿ ಪ್ರಥಮ ವರ್ತಮಾನ ವರದಿಯನ್ನು ಧಾಖಲಿಸಿಕೊಳ್ಳುವರೇ ಅವಕಾಶವಿರುವುದಿಲ್ಲ, ಆದರೆ ಈ ಪ್ರಕರಣದಲ್ಲಿ ಪೊಲೀಸರು ತನಿಖಾಧಿಕಾರಿಗಳು, ಪ್ರಕಣವನ್ನು ನೇರವಾಗಿ ಸ್ವೀಕರಿಸಿ, ದೂರಿನ ಅನ್ವಯ ನೇರವಾಗಿ ಈ ಪ್ರಕರಣವನ್ನು ಅಸಂಜೇಯ ಪ್ರಕರಣವೆಂದು ಪರಿಗಣಿಸದೆ ಪ್ರಥಮ ವರ್ತಮಾನ ವರದಿಯನ್ನು ಧಾಖಲಿಸಿಕೊಂಡು ಮುಂದುವರಿದು ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಯಾವುದೇ ರೀತಿಯಲ್ಲಿ ಅಂತಿಮ ವರದಿಯನ್ನು ಸಲ್ಲಿಸುವಂತಹ ಕಾನೂನಾತ್ಮಕ ಅಧಿಕಾರವನ್ನು ಹೊಂದಿರುವುದಿಲ್ಲ. ತನ್ನ ವಿರುದ್ಧದ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡು ವಿಚಾರರಣೆಯನ್ನು ಮುಂದುವರಿಸಿ ವಿಚಾರಣೆಯನ್ನು ಮಾಡಿದರೂ ತನ್ನನ್ನು ಶಿಕ್ಷೆಗೆ ಒಳಪಡಿಸುವಂತಹ ಯಾವುದೇ ಸಂಭವನೀಯತೆ ಇರುವುದಿಲ್ಲ ಮತ್ತು ಇದು ಸರಿಪಡಿಸಲಾರದ ಕಾನೂನಿನ ನ್ಯೂನ್ಯತೆಯಾಗಿದ್ದು ಈ ಹಿನ್ನಲೆಯಲ್ಲಿ ಆರೋಪಿಯನ್ನು ಶಿಕ್ಷೆಗೆ ಒಳಪಡಿಸುವಂತಹ ಯವುದೇ ಸಾಧ್ಯತೆ ಇರುವುದಿಲ್ಲ. ಎಂಬಿತ್ಯಾದಿ ಹಲವು ವಿಚಾರಗಳ ಕುರಿತಂತೆ ವಿವರಿಸಿ ಅದುದರಿಂದ ಮುಂದಿನ ತನಿಖೆಯನ್ನು ಸ್ಥಗಿತಗೊಳಿಸಿ ಆರೋಪಿಯನ್ನು ದೋಷಮುಕ್ತಗೊಳಿಸಬೇಕಾಗಿ ಕೋರಿಕೊಂಡು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು ಸರಿ ಅರ್ಜಿಯನ್ನು ಸರಕಾರಿ ವಕೀಲರು ಪ್ರಬಲವಾಗಿ ವಿರೋಧಿಸಿದ್ದರು. ತನಿಖಾಧಿಕಾರಿಗಳು ಸಲ್ಲಿಸಿದ್ದ ದೋಷಾರೋಪಣ ಪಟ್ಟಿಯ ಆಧಾರದ ಮೇಲೆ ವಾದ-ಪ್ರತಿವಾದಗಳು ನಡೆದಿದ್ದವು. ಆದರೆ, ವಿಚಾರಣೆಯ ಹಂತದಲ್ಲಿ ಪ್ರಾಸಿಕ್ಯೂಷನ್ ಮಂಡಿಸಿದ ಸಾಕ್ಷ್ಯಗಳು ಆರೋಪವನ್ನು ಸಾಬೀತುಪಡಿಸಲು ವಿಫಲವಾದವು.

ನ್ಯಾಯಾಲಯದ ಅವಲೋಕನ:

ಪ್ರಕರಣದ ಎಲ್ಲಾ ಮಗ್ಗಲುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನ್ಯಾಯಾಧೀಶರು, ಆರೋಪಿಯ ವಿರುದ್ಧ ಕೇಳಿಬಂದಿರುವ ದೂರುಗಳಲ್ಲಿ ಸ್ಪಷ್ಟತೆ ಇಲ್ಲದಿರುವುದನ್ನು ಗಮನಿಸಿದರು. ತನಿಖೆಯಲ್ಲಿನ ಲೋಪದೋಷಗಳು ಮತ್ತು ಸಂಶಯಾಸ್ಪದ ಅಂಶಗಳನ್ನು ನ್ಯಾಯಾಲಯವು ಎತ್ತಿ ತೋರಿಸಿತು. “ಯಾವುದೇ ವ್ಯಕ್ತಿಯನ್ನು ಕೇವಲ ಅನುಮಾನದ ಮೇಲೆ ಶಿಕ್ಷಿಸಲು ಸಾಧ್ಯವಿಲ್ಲ, ಕಾನೂನಿನ ಚೌಕಟ್ಟಿನಲ್ಲಿ ಪ್ರಬಲ ಸಾಕ್ಷ್ಯಗಳು ಅತ್ಯಗತ್ಯ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವಕೀಲರ ವಾದಕ್ಕೆ ಜಯ:

ಆರೋಪಿಯ ಪರವಾಗಿ ವಾದ ಮಂಡಿಸಿದ ಪುತ್ತೂರು ಬೊಳ್ವಾರಿನ ಕಜೆ ಲಾ ಚೇಂಬರ್ಸ್ ಇದರ ಮುಖ್ಯುಸ್ಥ, ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಅವರು ಸುದೀರ್ಘ ಹಾಗೂ ತರ್ಕಬದ್ಧ ವಾದವನ್ನು ಮಂಡಿಸಿ ಘಟನೆಯಲ್ಲಿ ಆರೋಪಿಯ ನೇರ ಪಾತ್ರವಿಲ್ಲ ಎಂಬ ಅಂಶವನ್ನು ಅವರು ದಾಖಲೆಗಳ ಸಮೇತ ಸಾಬೀತುಪಡಿಸಿದರು.

ಅಂತಿಮ ಆದೇಶ:

ವಕೀಲರಾದ ಮಹೇಶ್ ಕಜೆ ಅವರ ಪ್ರಬಲ ವಾದವನ್ನು ಎತ್ತಿಹಿಡಿದ ಸುಳ್ಯ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಶಿವಣ್ಣ ಅವರು ಪ್ರಕರಣದ ವಿಚಾರಣೆಯನ್ನು ಸ್ಥಗಿತಗೊಳಿಸಿ ಆರೋಪಿಯನ್ನು ದೋಷಮುಕ್ತ (Acquittal) ಎಂದು ಘೋಷಿಸಿ ಆದೇಶ ನೀಡಿದರು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page