October 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಯುಎಇ ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್ ನೂತನ ಸಾರಥಿ – ಅಧ್ಯಕ್ಷರಾಗಿ ಡೊನಾಲ್ಡ್ ನೊರೊನ್ಹಾ ಆಯ್ಕೆ

ಗಲ್ಫ್ ನಾಡಿನಲ್ಲಿ ಸಮಾಜ ಸೇವೆ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ‘ಯುಎಇ ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್’ (ULF) ಸಂಸ್ಥೆಯ 2026-28ನೇ ಸಾಲಿನ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ನೊರೊನ್ಹಾ ಅಲ್ಲಿಪಾದೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಸ್ಥೆಯ ಮಹಾಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಜರುಗಿತು.

ನೂತನ ಪದಾಧಿಕಾರಿಗಳ ಪಟ್ಟಿ:

ಸಂಸ್ಥೆಯ ವಿವಿಧ ಜವಾಬ್ದಾರಿಗಳಿಗೆ ಆಯ್ಕೆಯಾದ ಪ್ರಮುಖರ ವಿವರ ಹೀಗಿದೆ:

ಅಧ್ಯಕ್ಷರು – ಡೊನಾಲ್ಡ್ ನೊರೊನ್ಹಾ ಅಲ್ಲಿಪಾದೆ

ಪ್ರಧಾನ ಕಾರ್ಯದರ್ಶಿ – ಜೆವಿತಾ ರೋಡ್ರಿಗಸ್ ಸುರತ್ಕಲ್

ಜೊತೆ ಕಾರ್ಯದರ್ಶಿ – ಗ್ಲೆವೀನಾ ಅರನ್ಹಾ ಅತ್ತೂರು

ಕೋಶಾಧಿಕಾರಿ – ರಾಯ್ ಡಿಸೋಜ ಲೊರೆಟ್ಟೊ

ಸಾಂಸ್ಕೃತಿಕ ಕಾರ್ಯದರ್ಶಿ – ಸಿಲ್ವಿಯಾ ನೊರೊನ್ಹಾ ಲೊರೆಟ್ಟೊ

ಕ್ರೀಡಾ ಕಾರ್ಯದರ್ಶಿ – ವಿನೋದ್ ಪಿಂಟೋ ಲೊರೆಟ್ಟೊ

ಮಾಧ್ಯಮ ಸಂಯೋಜಕಿ – ಪ್ರೀತಿ ಡಿಸೋಜ ಕೋರ್ಡೆಲ್

ವಿದೇಶಿ ಸಂಯೋಜಕರು – ಗ್ರೆಟ್ಟಾ ಫೆರ್ನಾಂಡಿಸ್ (ಅಂಜಲೋರ್) ಮತ್ತು ಸಚಿನ್ ನೊರೊನ್ಹಾ (ಲೊರೆಟ್ಟೊ)

ನಾಯಕತ್ವಕ್ಕೆ ಕೃತಜ್ಞತೆ:

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಸ್ಥೆಯನ್ನು ಅತ್ಯುತ್ತಮ ನಾಯಕತ್ವ ಹಾಗೂ ಸಮರ್ಪಿತ ಸೇವೆಯ ಮೂಲಕ ಮುನ್ನಡೆಸಿದ ನಿರ್ಗಮನ ಅಧ್ಯಕ್ಷ ರೂಪೇಶ್ ಪಿಂಟೋ ಹಾಗೂ ಅವರ ಇಡೀ ತಂಡಕ್ಕೆ ಯುಎಲ್ಎಫ್ ಸಭೆಯಲ್ಲಿ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

ಸೇವಾ ಹಾದಿಯಲ್ಲಿ ‘ಯು ಎಲ್ ಫ್’ :

“ಏಕತೆ ಮತ್ತು ಸೇವೆ” ಎಂಬ ಉದಾತ್ತ ಧ್ಯೇಯವಾಕ್ಯದೊಂದಿಗೆ 2019ರ ನವೆಂಬರ್‌ನಲ್ಲಿ ಯುಎಇಯಲ್ಲಿ ಅಸ್ತಿತ್ವಕ್ಕೆ ಬಂದ ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್ (ULF), ಇಂದು ಸಮುದಾಯ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸದೃಢವಾಗಿ ಬೆಳೆದಿದೆ. ಕೊಂಕಣಿ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಸಂಸ್ಥೆ ಆಯೋಜಿಸುವ “ಕೊಂಕಣ್ ಉಡ್ಕಾನಾ” ಕಾರ್ಯಕ್ರಮ ಸೌಂಡ್ ಮಾಡಿದೆ. ಇದರೊಂದಿಗೆ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣ, ವೈದ್ಯಕೀಯ ನೆರವು, ಸ್ವಗ್ರಾಮದಲ್ಲಿ ಬಡವರಿಗೆ ಮನೆ ನಿರ್ಮಾಣ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಮತ್ತು ವೀಸಾ ಸಹಾಯ ಒದಗಿಸುವ ಮೂಲಕ ಸಂಸ್ಥೆಯು ಸಮಾಜ ಸೇವೆಯಲ್ಲಿ ಅಪೂರ್ವ ಛಾಪನ್ನು ಮೂಡಿಸಿದೆ.

You may also like

News

ಮಂಡ್ಯ ASP ತಿಮ್ಮಯ್ಯ ಇನ್ನಿಲ್ಲ – ಪೊಲೀಸ್ ಇಲಾಖೆಯಲ್ಲಿ ಶೋಕ

ಉಡುಪಿ, ಮಣಿಪಾಲ, ಕೋಟದಲ್ಲೂ ಸೇವೆ ಸಲ್ಲಿಸಿದ್ದ ಅಧಿಕಾರಿ ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ (ASP) ತಿಮ್ಮಯ್ಯ ಅವರು ಅನಾರೋಗ್ಯದಿಂದ ಇಂದು ಅಕ್ಟೋಬರ್ 10ರಂದು ಶನಿವಾರ ನಿಧನರಾಗಿದ್ದಾರೆ.
News

ಬೆಳ್ತಂಗಡಿಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು–2026

ಯುವ ಸಮುದಾಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು–2026 ಕಾರ್ಯಕ್ರಮ ಅಕ್ಟೋಬರ್ 8ರಂದು

You cannot copy content of this page