June 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದುಬೈಯ SMMC ನೂತನ ಸಾರಥಿಯಾಗಿ ಅಗ್ರಾರ್ ಚರ್ಚ್ ನ ಬೊನಿಫಾಸ್ ಕಾರ್ಲೋ ಆಯ್ಕೆ – ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ!

ದುಬೈ ಇಲ್ಲಿನ ಸೈಂಟ್ ಮೇರಿಸ್ ಕ್ಯಾಥೊಲಿಕ್ ಚರ್ಚ್‌ನ ಕೊಂಕಣಿ ಸಮುದಾಯದ ಹೆಮ್ಮೆಯ ಸಂಸ್ಥೆಯಾದ ಎಸ್‌ಎಮ್‌ಎಮ್‌ಸಿ (SMMC) ಗೆ 2026-28ರ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಸಂಸ್ಥೆಯ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ವಿಕ್ಟರ್ ಫೆರ್ನಾಂಡಿಸ್ OFM ಕ್ಯಾಪ್ ಅವರ ಮಾರ್ಗದರ್ಶನದಲ್ಲಿ ನಡೆದ ವಿಶೇಷ ಕೊಂಕಣಿ ಪೂಜಾ ವಿಧಿಯ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮಂಗಳೂರು ಹಾಗೂ ಉಡುಪಿ ಧರ್ಮಕ್ಷೇತ್ರಗಳ ವಿವಿಧ ಚರ್ಚ್ ಗಳಿಗೆ ಸೇರಿದ ಈ ನೂತನ ತಂಡವನ್ನು ಪ್ರಸಿದ್ಧ ಸಾಮಾಜಿಕ ಧುರಿನ ಬೊನಿಫಾಸ್ ಕಾರ್ಲೋ ಅವರು ಸಂಯೋಜಕರಾಗಿ ಮುನ್ನಡೆಸಲಿದ್ದಾರೆ.

ನೂತನ ಕಾರ್ಯಕಾರಿ ಸಮಿತಿ ಪಟ್ಟಿ (2026-2028)

ಮುಖ್ಯ ನಾಯಕತ್ವ ಹಾಗೂ ಪದಾಧಿಕಾರಿಗಳು:

* ಆಧ್ಯಾತ್ಮಿಕ ನಿರ್ದೇಶಕರು – ವಂದನೀಯ ಫಾದರ್ ವಿಕ್ಟರ್ ಫೆರ್ನಾಂಡಿಸ್ (ನೆಲ್ಲಿಕಾರು)

* ಸಂಯೋಜಕರು (Coordinator) – ಬೊನಿಫಾಸ್ ಕಾರ್ಲೋ (ಅಗ್ರಾರ್)

* ಉಪ ಸಂಯೋಜಕರು – ಕೆವಿನ್ ಮಿಲನ್ ಸಿಕ್ವೇರಾ (ಅಲ್ಲಿಪಾದೆ)

* ಕಾರ್ಯದರ್ಶಿ – ವೀಣಾ ಜೆ. ಡಿಸೋಜ (ಉದ್ಯಾವರ)

* ಕೋಶಾಧಿಕಾರಿ – ಪ್ರವೀಣ್ ಸಿಕ್ವೇರಾ (ಸಿದ್ದಕಟ್ಟೆ)

ಧಾರ್ಮಿಕ ಮತ್ತು ಪ್ರಾರ್ಥನಾ ವಿಭಾಗ:

* ಧಾರ್ಮಿಕ ವಿಧಿವಿಧಾನಗಳ ಸಂಯೋಜಕರು – ಅನೂಶ್ ಡಿಸೋಜ (ಬಜಾಲ್)

* ಸಹ ಧಾರ್ಮಿಕ ಮತ್ತು ಸಾಮಾಜಿಕ ಸಂಪರ್ಕ ಸಂಯೋಜಕರು – ಸಂದೀಪ್ ಮಥಾಯಸ್ (ಉಡುಪಿ)

* ಯೂಕರಿಸ್ಟಿಕ್ ಮಿನಿಸ್ಟ್ರಿ ಸಂಯೋಜಕರು – ಪ್ರೀಮಾ ಮಾರ್ಟಿಸ್ (ಮೂಡುಬೆಳ್ಳೆ)

* ಪ್ರಾರ್ಥನಾ ತಂಡ – ಜೆ.ಎಮ್.ಜೆ. ಪ್ರಾರ್ಥನಾ ತಂಡ (ಸಂಯೋಜಕರು)

ಸ್ವಯಂಸೇವಕರು, ಮಾಧ್ಯಮ ಮತ್ತು ಸಾಂಸ್ಕೃತಿಕ ವಿಭಾಗ:

* ಸ್ವಯಂಸೇವಕರ ಸಂಯೋಜಕರು – ನ್ಯೂಟನ್ ಬ್ರಿಟ್ಟೋ (ಹೊನ್ನಾವರ)

* ಸಹ ಸ್ವಯಂಸೇವಕರ ಸಂಯೋಜಕರು – ಅಶ್ವಿನಿ ಡಿಸೋಜ (ಕಾರ್ಕಳ ಟೌನ್)

* ಮಾಧ್ಯಮ ಸಂಯೋಜಕರು – ಜೇಸನ್  ಮಿರಾಂಡಾ (ಸಂಸಿ)

* ಕ್ರೀಡೆ ಮತ್ತು ಸಾಂಸ್ಕೃತಿಕ ಸಂಯೋಜಕರು – ನಿಲೇಶ್ ಜಾಯ್ ಡಯಾಸ್ (ಪುತ್ತೂರು)

* ಸಹ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಯೋಜಕರು – ಡೆನ್ಜಿಲ್ ರಾಲ್ಫ್ ಮೊರಾಸ್ (ಪಲ್ದಾನೆ)

* ಕೊಂಕಣ್ ಯುವ ಸಂಯೋಜಕರು – ಅಶ್ವಿನ್ ಪಿಂಟೋ (ಮೊಗರ್ನಾಡ್)

ಸಮುದಾಯದ ಒಗ್ಗಟ್ಟಿಗೆ ಶ್ರಮಿಸುವುದೇ ನಮ್ಮ ಗುರಿ – ಬೊನಿಫಾಸ್ ಕಾರ್ಲೋ

“ನನ್ನ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿ ನೀಡಿದ ಸಮುದಾಯಕ್ಕೆ ಕೃತಜ್ಞತೆಗಳು. ಮುಂಬರುವ ದಿನಗಳಲ್ಲಿ ಕೊಂಕಣಿ ಸಂಸ್ಕೃತಿಯ ರಕ್ಷಣೆ, ಯುವಜನರ ಏಳಿಗೆ, ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸು ಹಾಗೂ ಜನಕಲ್ಯಾಣ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು.”

ನಿಸ್ವಾರ್ಥ ಸೇವೆಗೆ ಫಾದರ್ ವಿಕ್ಟರ್ ಶ್ಲಾಘನೆ:

ಕಾರ್ಯಕ್ರಮದಲ್ಲಿ ಮಾತನಾಡಿದ ವಂದನೀಯ ಫಾದರ್ ವಿಕ್ಟರ್ ಫೆರ್ನಾಂಡಿಸ್ ಅವರು, ಇದುವರೆಗೆ ಸೇವೆ ಸಲ್ಲಿಸಿದ ನಿರ್ಗಮಿತ ಸಮಿತಿಯ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ನೂತನ ತಂಡವು ಅದೇ ನಮ್ರತೆ, ಬದ್ಧತೆ ಮತ್ತು ಉತ್ಸಾಹದಿಂದ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

UAE ಯಲ್ಲಿರುವ ಮಂಗಳೂರು ಮೂಲದ ಕೊಂಕಣಿ ಕ್ಯಾಥೊಲಿಕ್ ವಲಸಿಗರನ್ನು ಒಟ್ಟುಗೂಡಿಸುವಲ್ಲಿ ಮತ್ತು ಅವರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಗುರುತನ್ನು ಉಳಿಸುವಲ್ಲಿ 2013 ರಲ್ಲಿ ಆರಂಭವಾದ SMMC ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ.

You may also like

News

ಲಘು ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ತುರ್ತು ಸಿಪಿಆರ್ ನೀಡಿ ಜೀವ ಉಳಿಸಿದ ಬಂಟ್ವಾಳ ನಗರ ಠಾಣೆಯ ‘ನೈಟ್ ಬೀಟ್’ ಸಿಬ್ಬಂದಿಗಳು

ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾದ ಸಿಬ್ಬಂದಿಗಳಾದ ವಿನೋದ್ ಹಾಗೂ ಜಯಗಣೇಶ್ ರಾತ್ರಿ ಇಡೀ ಜಗತ್ತು ಮಲಗಿರುವಾಗ ಸಾರ್ವಜನಿಕರ ರಕ್ಷಣೆಗಾಗಿ ಗಸ್ತು ತಿರುಗುವ ಪೊಲೀಸರು, ಕೇವಲ ಕಾನೂನು
News

ಮಂಗಳೂರಿನ ಜೆಪ್ಪು ಮತ್ತು ಮಿಲಾಗ್ರಿಸ್‌ನಲ್ಲಿ ಭಕ್ತಿಸಾಗರ – ಸಂತ ಅಂತೋನಿಯವರ ವಾರ್ಷಿಕ ಹಬ್ಬದ ಸಂಭ್ರಮ

ಕಳೆದುಹೋದ ವಸ್ತುಗಳನ್ನಷ್ಟೇ ಅಲ್ಲ, ಕಳೆದುಹೋದ ದೈವತ್ವವನ್ನು ಹುಡುಕಿಕೊಳ್ಳಿ – ಬಿಷಪ್ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಜಗತ್ಪ್ರಸಿದ್ಧ ಪವಾಡ ಪುರುಷ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವವು ನಗರದ

You cannot copy content of this page