July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರೋಟರಿ ಕ್ಲಬ್ ಮಡಂತ್ಯಾರ್‌ಗೆ ‘ಗ್ಲೋಬಲ್ ಎಕ್ಸಲೆನ್ಸ್’ ಗರಿ – ಮೈಸೂರಿನಲ್ಲಿ ಐತಿಹಾಸಿಕ ಸಾಧನೆ!

ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಮಡಂತ್ಯಾರ್ ರೋಟರಿ ಕ್ಲಬ್, ತನ್ನ ಸೇವಾ ಬದ್ಧತೆಗೆ ಸಂದ ಅತ್ಯುನ್ನತ ಗೌರವವಾಗಿ ಜಿಲ್ಲಾ ರೋಟರಿ ಪ್ರಶಸ್ತಿ ಸಮಾರಂಭದಲ್ಲಿ ಪ್ರತಿಷ್ಠಿತ ‘ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್’ ಮುಡಿಗೇರಿಸಿಕೊಂಡು ಹೊಸ ಇತಿಹಾಸ ಬರೆದಿದೆ.

ಜೂನ್ 20ರಂದು ಮೈಸೂರಿನಲ್ಲಿ ನಡೆದ ರೋಟರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಸಣ್ಣ ಕ್ಲಬ್‌ಗಳ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಡಂತ್ಯಾರ್ ಕ್ಲಬ್‌ಗೆ ಈ ಗೌರವ ಸಂದಿದೆ. ಕಳೆದ ಆರು ವರ್ಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿರುವ ಕ್ಲಬ್, ಕಳೆದ ಮೂರು ವರ್ಷಗಳಿಂದ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಾ ಬಂದು, ಇದೀಗ 2025–26ನೇ ಸಾಲಿನಲ್ಲಿ ಈ ಅತ್ಯುನ್ನತ ಫಲಕವನ್ನು ತನ್ನದಾಗಿಸಿಕೊಂಡಿದೆ.

ನಾಯಕತ್ವ ಮತ್ತು ಸಂಘಟಿತ ಶಕ್ತಿ:

2025-2026ನೇ ರೋಟರಿ ವರ್ಷದಲ್ಲಿ ಅಧ್ಯಕ್ಷರಾದ ರೋ. ಪಿ.ಯಚ್.ಎಫ್. ಮಾಕ್ಸಿಮ್ ಅಲ್ಬುಕರ್ಕ್ ಅವರ ಸಮರ್ಥ ನಾಯಕತ್ವ, ಕಾರ್ಯದರ್ಶಿ ರೋ. ಪಿ.ಯಚ್.ಎಫ್. ವಾಸುದೇವ ಗೌಡ ಅವರ ಕಾರ್ಯದಕ್ಷತೆ, ಹಿರಿಯ ಸದಸ್ಯರ ಮಾರ್ಗದರ್ಶನ ಹಾಗೂ ಸರ್ವ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯಿಂದ ಕ್ಲಬ್ ಈ ಗಮನಾರ್ಹ ಮೈಲಿಗಲ್ಲು ತಲುಪಿದೆ.

ಒಂದೇ ವರ್ಷದಲ್ಲಿ ಕ್ಲಬ್ ಹಮ್ಮಿಕೊಂಡ ಯೋಜನೆಗಳ ವಿವರ ಹೀಗಿದೆ:

* ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು: 55

* ಸಮುದಾಯ ಸೇವಾ ಯೋಜನೆಗಳು: 98

* ಕ್ಲಬ್ ಸೇವಾ ಚಟುವಟಿಕೆಗಳು: 23

* ಒಟ್ಟು ವೆಚ್ಚ ಮಾಡಿದ ಮೊತ್ತ: ₹30 ಲಕ್ಷಕ್ಕೂ ಅಧಿಕ

ಸದಸ್ಯತ್ವ ವೃದ್ಧಿಯಲ್ಲೂ ದಾಖಲೆ ಬರೆದಿರುವ ಕ್ಲಬ್, 14 ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದ್ದು, ‘ಮೈ ರೋಟರಿ’ಯಲ್ಲಿ ಶೇ.100ರಷ್ಟು ನೋಂದಣಿ ಪೂರ್ಣಗೊಳಿಸಿದೆ. ಮೂವರು ಹೊಸ PHF (ಪಾಲ್ ಹ್ಯಾರಿಸ್ ಫೆಲೋ) ಸದಸ್ಯರ ಸೇರ್ಪಡೆಯೊಂದಿಗೆ ರೋಟರಿ ದತ್ತಿನಿಧಿಗೂ ಮಹತ್ತರ ಕೊಡುಗೆ ನೀಡಲಾಗಿದೆ.

ಸಮಾಜದ ಕಣ್ಣೊರೆಸಿದ ಶಾಶ್ವತ ಯೋಜನೆಗಳು:

ಈ ಸಾಲಿನಲ್ಲಿ ರೋಟರಿ ಕ್ಲಬ್ ಹಮ್ಮಿಕೊಂಡ ಹಲವು ಜನಪರ ಕಾರ್ಯಗಳು ಸಾರ್ವಜನಿಕರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿವೆ:

* ಆರ್ಥಿಕವಾಗಿ ಹಿಂದುಳಿದ ಮಹಿಳೆಗೆ ಉಚಿತ ಮನೆ ನಿರ್ಮಾಣ.

* ವಿಕಲಚೇತನ ಬಡ ಮಹಿಳೆಗೆ ಕೃತಕ ಕಾಲು ಜೋಡಣೆ.

* ಪಾರೆಂಕಿಯಲ್ಲಿ ಅಮೃತ ಗಾರ್ಡನ್ ಅಭಿವೃದ್ಧಿ ಹಾಗೂ ಸಾಲುಮರದಲ್ಲಿ ಬಸ್ ನಿಲ್ದಾಣ ನಿರ್ಮಾಣ.

* ಕೊಮ್ಮಿನಡ್ಕ ಅಂಗನವಾಡಿಗೆ ಮೇಲ್ಛಾವಣಿ ಹಾಗೂ ಕುರ್ಚಿ-ಮೇಜುಗಳ ದಾನ.

* ಶಾಲೆಗಳಿಗೆ ಧ್ವನಿವರ್ಧಕ ಹಾಗೂ ಗಾರ್ಡಿಯನ್ ಎಂಜಲ್ಸ್ ಶಾಲೆಗೆ ಪೋಡಿಯಂ ವಿತರಣೆ.

* ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಾಲಕಿಯರಿಗೆ ಮಾಸಿಕ ಆರೋಗ್ಯ ಜಾಗೃತಿ ಮತ್ತು ಸ್ಯಾನಿಟರಿ ಪ್ಯಾಡ್ ವಿತರಣೆ.

ಪ್ರಶಸ್ತಿ ಪ್ರದಾನ ವೈಭವ:

ಮೈಸೂರಿನ ಅದ್ಧೂರಿ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ರೋ. ರಾಮಕೃಷ್ಣ ಪಿ.ಕೆ, ನಿಯೋಜಿತ ಜಿಲ್ಲಾ ಗವರ್ನರ್ ರೋ. ಸತೀಶ್ ಬೋಳಾರ್, ನಾಮ ನಿರ್ದೇಶಿತ ಜಿಲ್ಲಾ ಗವರ್ನರ್ (2027-28) ರೋ. ಯಶಸ್ವಿ ಸೋಮಶೇಖರ್, ನಿಕಟ ಪೂರ್ವ ಜಿಲ್ಲಾ ಗವರ್ನರ್ ರೋ. ವಿಕ್ರಮ್ ದತ್ತ, ಅಸಿಸ್ಟೆಂಟ್ ಜಿಲ್ಲಾ ಗವರ್ನರ್ ಜಯಕುಮಾರ್ ಶೆಟ್ಟಿ ಹಾಗೂ ZL. ರೋ. ಪ್ರಕಾಶ್ ಬಾಳಿಗ ಅವರ ಉಪಸ್ಥಿತಿಯಲ್ಲಿ ಅಧ್ಯಕ್ಷ ರೋ. ಮ್ಯಾಕ್ಸಿಮ್ ಅಲ್ಬುಕರ್ಕ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಹಸ್ತಾಂತರಿಸಲಾಯಿತು.

ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿ ಕಾರ್ಯದರ್ಶಿ ರೋ. ವಾಸುದೇವಾ ಗೌಡ, ಖಜಾಂಜಿ ರೋ. ಸುರೇಶ ಸೋಣಂದೂರು, ನಿಯೋಜಿತ ಅಧ್ಯಕ್ಷ (2026-27) ರೋ. ಪ್ರಶಾಂತ್‌ ಶೆಟ್ಟಿ ಮೂಡಯೂರು, ನಿಕಟ ಪೂರ್ವ ಅಧ್ಯಕ್ಷ ರೋ. ನಿತ್ಯಾನಂದ ಬಿ. ಹಾಗೂ ಹಿರಿಯ ಸದಸ್ಯರಾದ ರೋ. ಫ್ರಾನ್ಸಿಸ್, ರೋ. ಹೆರಾಲ್ಡ್ ಮೋನಿಸ್, ರೋ. ದಿನಾಕರ್ ಶೆಟ್ಟಿ, ರೋ. ಉದಯ ಕುಮಾರ್ ಜೈನ್, ರೋ. ತುಳಸಿ ದಾಸ್ ಪೈ ಮತ್ತು ಅಶೋಕ್ ಉಪಸ್ಥಿತರಿದ್ದರು. ದಾನಿಗಳ ಬೆಂಬಲ, ಸದಸ್ಯರ ಶ್ರಮ ಮತ್ತು ಸಮಾಜದ ಸಹಕಾರದಿಂದ ಮೂಡಿಬಂದ ಈ ಯಶಸ್ಸು ಮಡಂತ್ಯಾರ್ ರೋಟರಿ ಕ್ಲಬ್ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತದ್ದಾಗಿದೆ.

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page