October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬೋಂದೆಲ್ ಸಂತ ಲಾರೆನ್ಸ್ ಪುಣ್ಯಕ್ಷೇತ್ರದಲ್ಲಿ ಆಗಸ್ಟ್ 10ರಂದು ವಿಜೃಂಭಣೆಯಿಂದ ನಡೆಯಲಿರುವ ವಾರ್ಷಿಕ ಮಹೋತ್ಸವ

ವೈದ್ಯಕೀಯ ಸಹಾಯ ನಿಧಿಗೆ ಸಹಾಯ ಹಸ್ತ ನೀಡಲು ರೆಕ್ಟರ್ ಫಾದರ್ ಬೇಸಿಲ್ ವಾಸ್  ಕರೆ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪ್ರಸಿದ್ಧ ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಮತ್ತು ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬವು 2026ರ ಆಗಸ್ಟ್ 10ರಂದು ಸೋಮವಾರ ವಿಜೃಂಭಣೆಯಿಂದ ನಡೆಯಲಿದೆ. “ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಿರಿ” (ಯೋಹಾನ 15:12) ಎಂಬ ಧ್ಯೇಯವಾಕ್ಯದೊಂದಿಗೆ ಹಾಗೂ ಬಡವರ ಸೇವೆಗೆ ಒತ್ತು ನೀಡುವ ಸಂದೇಶದೊಂದಿಗೆ ಈ ಬಾರಿಯ ಉತ್ಸವವನ್ನು ಆಯೋಜಿಸಲಾಗಿದೆ.

ಸಂತ ಲಾರೆನ್ಸರ ದಾನಧರ್ಮದ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ, ಈ ವರ್ಷ ‘ವೈದ್ಯಕೀಯ ನೆರವು ನಿಧಿ’ ಸ್ಥಾಪನೆ ಮಾಡಲಾಗಿದ್ದು, ನಿರ್ಗತಿಕರು ಹಾಗೂ ಬಡ ರೋಗಿಗಳಿಗೆ ಸಹಾಯ ಮಾಡಲು ಉದಾರ ದೇಣಿಗೆ ನೀಡುವಂತೆ ಚರ್ಚ್ ಆಡಳಿತ ಮಂಡಳಿ ಕರೆ ನೀಡಿದೆ.

ಮುಖ್ಯ ಕಾರ್ಯಕ್ರಮಗಳ ವೇಳಾಪಟ್ಟಿ:

ಜುಲೈ 25 ಶನಿವಾರ : ಸ್ವಚ್ಛತಾ ಅಭಿಯಾನ – ಚರ್ಚ್‌ನ ವಿವಿಧ ಆಯೋಗಗಳಿಂದ ಸ್ವಚ್ಛತಾ ಕಾರ್ಯಕ್ರಮ, ಉದ್ಘಾಟನೆ: ಡಾ. ಜಿ. ಸಂತೋಷ್ ಕುಮಾರ್, KAS.

ಜುಲೈ 26 ಭಾನುವಾರ ಸಂಜೆ 4:30:  ಹೊರೆ ಕಾಣಿಕೆ ಮೆರವಣಿಗೆ – ಮೌಂಟ್ ಕಾರ್ಮೆಲ್ ಶಾಲಾ ಮೈದಾನದಿಂದ ಚಾಲನೆ, MLC ಪಿ.ವಿ. ಮೋಹನ್ ಅವರಿಂದ.

ಆಗಸ್ಟ್ 1 ಶನಿವಾರ – ಬೆಳಿಗ್ಗೆ 10:00 : ಧ್ವಜಾರೋಹಣ & ನೊವೇನಾ ಚಾಲನೆ, ಅತೀ ವಂದನೀಯ ಫಾದರ್ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರಿಂದ ಧ್ವಜಾರೋಹಣ.

ಆಗಸ್ಟ್ 1 ರಿಂದ 9 ತಾರೀಕಿನ ತನಕ  ಒಂಬತ್ತು ದಿನಗಳ ‘ನೊವೇನಾ’  ಬೆಳಿಗ್ಗೆ 10:30 – ಊಟದ ವ್ಯವಸ್ಥೆ ಮತ್ತು ಸಂಜೆ 5:30 – ಆಶೀರ್ವದಿಸಿದ ರೊಟ್ಟಿ ವಿತರಣೆ.

ಆಗಸ್ಟ್ 8 ಶನಿವಾರ : ಸ್ತುತಿ, ಆರಾಧನೆ ಮತ್ತು ಗುಣಪಡಿಸುವ ಪ್ರಾರ್ಥನೆ – ಬ್ರದರ್ ಪ್ರಕಾಶ್ ನೇತೃತ್ವದಲ್ಲಿ ಆರಾಧನೆ ಹಾಗೂ ರೋಗಿಗಳು/ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ.

ಆಗಸ್ಟ್ 9 ಭಾನುವಾರ – ಮಧ್ಯಾಹ್ನ 12:00 : ಮಲಯಾಳಂ ಬಲಿಪೂಜೆ – ಪುಣ್ಯಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶೇಷ ಮಲಯಾಳಂ ಭಾಷೆಯಲ್ಲಿ ಪೂಜೆ.

ಆಗಸ್ಟ್ 10 ಸೋಮವಾರ – ಬೆಳಿಗ್ಗೆ 10:30 : ಹಬ್ಬದ ಪ್ರಧಾನ ದಿವ್ಯ ಬಲಿಪೂಜೆ – ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನಾ ಅವರಿಂದ.

ಆಗಸ್ಟ್ 10 ಸೋಮವಾರ – ಸಂಜೆ 5:30: ಸಮಾರೋಪ ಬಲಿಪೂಜೆ – ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಅವರಿಂದ.

ನೊವೇನಾ ದಿನಗಳಲ್ಲಿ ಪೂಜಾರ್ಪಣೆ ನಡೆಸಲಿರುವ ವಿವಿಧ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರು:

* ಆಗಸ್ಟ್ 8 ಸಂಜೆ 5:30 : ನಿವೃತ್ತ ಆರ್ಚ್‌ಬಿಷಪ್ ಅತೀ ವಂದನೀಯ ಡಾ. ಬರ್ನಾರ್ಡ್ ಮೊರಾಸ್.

* ಆಗಸ್ಟ್ 9 ಬೆಳಿಗ್ಗೆ 10:30 : ನಿವೃತ್ತ ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ.

* ಆಗಸ್ಟ್ 9 ಸಂಜೆ 5:30 : ಬರೇಲಿ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಇಗ್ನೇಷಿಯಸ್ ಪಾವ್ಲ್ ಡಿಸೋಜ.

ಭಕ್ತರಿಗಾಗಿ ಲಭ್ಯವಿರುವ ಸೌಲಭ್ಯಗಳು:

* ಆರೋಗ್ಯ ಸೇವೆ: ಫಾದರ್ ಮುಲ್ಲರ್ ಆಸ್ಪತ್ರೆ ತಂಡದಿಂದ ತುರ್ತು ಆಂಬ್ಯುಲೆನ್ಸ್ ಹಾಗೂ ಉಚಿತ ವೈದ್ಯಕೀಯ ನೆರವು.

* ಸಹಾಯ ಕೇಂದ್ರಗಳು: ಮತದಾರರ ಗುರುತಿನ ಚೀಟಿ ಸೇವಾ ಕೇಂದ್ರ.

* ಸ್ಟಾಲ್‌ಗಳು: ‘ಆಮ್ಚೊ ಸಂದೇಶ್’ ಕೊಂಕಣಿ ಮಾಸಿಕ, ಎಸ್‌ವಿಪಿ ಸಂಘ, ದೈವಿಕ್ ಅಮೃತ್ ತೀರ್ಥಯಾತ್ರೆ ಮಾಹಿತಿ ಕೇಂದ್ರ ಹಾಗೂ ಧಾರ್ಮಿಕ ಲೇಖನಗಳ ಮಳಿಗೆಗಳು.

* ಉಪಾಹಾರ: ICYM, YCS ಹಾಗೂ ಮಹಿಳಾ ಸಂಘಗಳ ನೇತೃತ್ವದಲ್ಲಿ ಆಹಾರ/ಪಾನೀಯಗಳ ಸ್ಟಾಲ್.

ಇಂದು ಜುಲಾಯಿ 24ರಂದು ಶುಕ್ರವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಬೋಂದೆಲ್ ಪುಣ್ಯಕ್ಷೇತ್ರದ ರೆಕ್ಟರ್ ವಂದನೀಯ ಫಾದರ್ ಬೇಸಿಲ್ ವಾಸ್, ವಂದನೀಯ ಫಾದರ್ ಪೀಟರ್ ಗೊನ್ಸಾಲ್ವಿಸ್ – ಪ್ರಾಂಶುಪಾಲರು, ಸೈಂಟ್ ಲೋರೆನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ವಂದನೀಯ ಫಾದರ್ ಲೋರೆನ್ಸ್ ಕುಟಿನ್ಹಾ – ಸಹಾಯಕ ಧರ್ಮಗುರುಗಳು ಬೋಂದೆಲ್ ಪುಣ್ಯಕ್ಷೇತ್ರ, ಜೋನ್ ಡಿಸಿಲ್ವಾ – ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರು, ಜೇಸನ್ ಫೆರ್ನಾಂಡಿಸ್, ಮೀನಾ ಬರ್ಬೋಜ ಹಾಗೂ ಎಲಿಯಾಸ್ ಫೆರ್ನಾಂಡಿಸ್ – ಮಾಧ್ಯಮ ಸಂಯೋಜಕರು ಉಪಸ್ಥಿತರಿದ್ದು ಎಲ್ಲಾ ವಿಶ್ವಾಸಿಗಳನ್ನು ಮತ್ತು ಭಕ್ತಾದಿಗಳನ್ನು ಈ ಪವಿತ್ರ ಮಹೋತ್ಸವಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.

You may also like

News

ಮಂಡ್ಯ ASP ತಿಮ್ಮಯ್ಯ ಇನ್ನಿಲ್ಲ – ಪೊಲೀಸ್ ಇಲಾಖೆಯಲ್ಲಿ ಶೋಕ

ಉಡುಪಿ, ಮಣಿಪಾಲ, ಕೋಟದಲ್ಲೂ ಸೇವೆ ಸಲ್ಲಿಸಿದ್ದ ಅಧಿಕಾರಿ ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ (ASP) ತಿಮ್ಮಯ್ಯ ಅವರು ಅನಾರೋಗ್ಯದಿಂದ ಇಂದು ಅಕ್ಟೋಬರ್ 10ರಂದು ಶನಿವಾರ ನಿಧನರಾಗಿದ್ದಾರೆ.
News

ಬೆಳ್ತಂಗಡಿಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು–2026

ಯುವ ಸಮುದಾಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು–2026 ಕಾರ್ಯಕ್ರಮ ಅಕ್ಟೋಬರ್ 8ರಂದು

You cannot copy content of this page