August 7, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

7 ವರ್ಷ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಉಮ್ಮರ್ ನವಾಫ್ ಬಂಧನ

ಸುಮಾರು 7 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾಗೂ 30ಕ್ಕೂ ಹೆಚ್ಚು ವಾರಂಟ್ಗಳು ಜಾರಿಯಾಗಿದ್ದ ವಾರಂಟ್ ಆರೋಪಿ 33 ವರ್ಷ ಪ್ರಾಯದ ಉಮ್ಮರ್ ನವಾಫ್ ಅವರನ್ನು ಮಂಗಳೂರು ದಕ್ಷಿಣ ಉಪವಿಭಾಗದ ವಿಶೇಷ ಕರ್ತವ್ಯ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಂಡಿದೆ.

ಬಂಧಿತ ಆರೋಪಿ ಉಮ್ಮರ್ ನವಾಫ್, ಮೂಲತಃ ಮಾರ್ಗತಲೆ, ಉಳ್ಳಾಲ ತಾಲೂಕು ನಿವಾಸಿಯಾಗಿದ್ದು, ಪ್ರಸ್ತುತ ನಾಜಿಯಾ ಮಂಜೀಲ್, ಗೇರುಕಟ್ಟೆ, ಕುಂಡಪ್ಪು, ಮಂಜೇಶ್ವರ, ಪಾವೂರು ಅಂಚೆ, ಕಾಸರಗೋಡು ಜಿಲ್ಲೆಯಲ್ಲಿ (ಕೇರಳ)  ವಾಸವಾಗಿದ್ದಾನೆ.

ಆರೋಪಿಯ ವಿರುದ್ಧ 13ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಹಲವು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ ವಿವಿಧ ನ್ಯಾಯಾಲಯಗಳು 30ಕ್ಕೂ ಅಧಿಕ ವಾರಂಟ್ಗಳನ್ನು ಜಾರಿಗೊಳಿಸಿದ್ದವು. ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ವಿಶೇಷ ಕರ್ತವ್ಯ ತಂಡವು ಆಗಸ್ಟ್ 2ರಂದು ಭಾನುವಾರ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.

ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಮುಖ ಪ್ರಕರಣಗಳು

  • ಉಳ್ಳಾಲ ಪೊಲೀಸ್ ಠಾಣೆ: ಕ್ರೈಂ ನಂ. 222/2017 – ಕಲಂ 143, 147, 148, 341, 504, 506, 324, 307 ಐಪಿಸಿ.
  • ಉಳ್ಳಾಲ ಪೊಲೀಸ್ ಠಾಣೆ: ಕ್ರೈಂ ನಂ. 23/2017 – ಕಲಂ 427 ಐಪಿಸಿ ಹಾಗೂ 2(a), 2(b) KPDLP ಕಾಯ್ದೆ.
  • ಉಳ್ಳಾಲ ಪೊಲೀಸ್ ಠಾಣೆ: ಕ್ರೈಂ ನಂ. 247/2014 – ಕಲಂ 448, 395 ಐಪಿಸಿ.
  • ಉಳ್ಳಾಲ ಪೊಲೀಸ್ ಠಾಣೆ: ಕ್ರೈಂ ನಂ. 289/2017 – ಕಲಂ 504, 506, 364(A), 387, 395, 149 ಐಪಿಸಿ.
  • ಉಳ್ಳಾಲ ಪೊಲೀಸ್ ಠಾಣೆ: ಕ್ರೈಂ ನಂ. 276/2015 – ಕಲಂ 143, 144, 148, 448, 451, 452, 326, 307, 397, 506, 149 ಐಪಿಸಿ.
  • ಉಳ್ಳಾಲ ಪೊಲೀಸ್ ಠಾಣೆ: ಕ್ರೈಂ ನಂ. 206/2012 – ಕಲಂ 143, 144, 148, 323, 427, 504, 506, 149 ಐಪಿಸಿ.
  • ಉಳ್ಳಾಲ ಪೊಲೀಸ್ ಠಾಣೆ: ಕ್ರೈಂ ನಂ. 27/2017 – ಕಲಂ 387 ಐಪಿಸಿ.
  • ಉಳ್ಳಾಲ ಪೊಲೀಸ್ ಠಾಣೆ: ಕ್ರೈಂ ನಂ. 103/2021 – ಕಲಂ 364 ಐಪಿಸಿ.
  • ಉಳ್ಳಾಲ ಪೊಲೀಸ್ ಠಾಣೆ: ಕ್ರೈಂ ನಂ. 71/2023 – ಕಲಂ 504, 506, 307, 324, 427 ಐಪಿಸಿ.
  • ಉಳ್ಳಾಲ ಪೊಲೀಸ್ ಠಾಣೆ: ಕ್ರೈಂ ನಂ. 183/2017 – ಕಲಂ 143, 147, 148, 448, 504, 324, 323, 506, 427 r/w 149 ಐಪಿಸಿ.
  • ಉಳ್ಳಾಲ ಪೊಲೀಸ್ ಠಾಣೆ: ಕ್ರೈಂ ನಂ. 159/2023 – ಕಲಂ 341, 394, 307 r/w 34 ಐಪಿಸಿ.
  • ಪಣಂಬೂರು ಪೊಲೀಸ್ ಠಾಣೆ: ಕ್ರೈಂ ನಂ. 158/2012 – ಕಲಂ 379 ಐಪಿಸಿ.
  • ಬರ್ಕೆ ಪೊಲೀಸ್ ಠಾಣೆ: ಕ್ರೈಂ ನಂ. 04/2015 – ಕಲಂ 353, 427 r/w 34 ಐಪಿಸಿ.

ಪ್ರೋಕ್ಲಮೇಶನ್ ಹಾಗೂ ಎಲ್.ಪಿ.ಸಿ. ಆದೇಶ

ಆರೋಪಿಯ ವಿರುದ್ಧ ದಾಖಲಾಗಿರುವ ಉಳ್ಳಾಲ ಪೊಲೀಸ್ ಠಾಣೆ ಕ್ರೈಂ ನಂ. 206/2012, 27/2017 ಹಾಗೂ 183/2017 ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದಂತೆ ಪ್ರೋಕ್ಲಮೇಶನ್ (Proclamation) ಜಾರಿಗೊಂಡಿತ್ತು. ಅಲ್ಲದೆ ಉಳ್ಳಾಲ ಪೊಲೀಸ್ ಠಾಣೆ ಕ್ರೈಂ ನಂ. 276/2015 ಪ್ರಕರಣದಲ್ಲಿ ನ್ಯಾಯಾಲಯವು ಎಲ್.ಪಿ.ಸಿ. (Long Pending Case) ಎಂದು ಘೋಷಿಸಿತ್ತು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

You may also like

News

ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕಿ, ಹಿರಿಯ ಮಾಧ್ಯಮ ತಜ್ಞೆ ಡಾ. ವಹೀದಾ ಸುಲ್ತಾನ ನಿಧನ

ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (MCJ) ವಿಭಾಗದ ನಿವೃತ್ತ ಮುಖ್ಯಸ್ಥೆ ಹಾಗೂ ಹಿರಿಯ ಪ್ರಾಧ್ಯಾಪಕಿ 70 ವರ್ಷ ಪ್ರಾಯದ ಡಾ. ವಹೀದಾ ಸುಲ್ತಾನಾ ಅವರು
News

ಮೈಸೂರು ಧರ್ಮಕ್ಷೇತ್ರದ ಸಹ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಗ್ರೇಶಿಯನ್ ರೊಡ್ರಿಗಸ್ ನೇಮಕ

ಮೈಸೂರು ಧರ್ಮಕ್ಷೇತ್ರದ ಸಹ ಸಾರ್ವಜನಿಕ ಸಂಪರ್ಕಾಧಿಕಾರಿ (Associate Public Relations Officer – APRO)ಯಾಗಿ ಗ್ರೇಶಿಯನ್ ರೊಡ್ರಿಗಸ್ ಅವರನ್ನು ನೇಮಕಗೊಳಿಸಲಾಗಿದೆ. ಈ ಕುರಿತು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ

You cannot copy content of this page