October 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದುಬೈ ಕನ್ನಡಿಗರ ಆಶಾಕಿರಣ, ಬಂಟ್ವಾಳದ ಸಮಾಜಸೇವಕ ಆಂಬ್ರೋಜ್ ಡಿಸಿಲ್ವಾ ವಿಧಿವಶ – ಆಗಸ್ಟ್ 21ಕ್ಕೆ ಅಂತ್ಯಕ್ರಿಯೆ

ಮೂರು ದಶಕಗಳಿಗೂ ಹೆಚ್ಚು ಕಾಲ ವಿದೇಶದಲ್ಲಿ ನೆಲೆಸಿ, ಹಲವಾರು ಯುವಕರ ಬಾಳಿಗೆ ಆಸರೆಯಾಗಿದ್ದ ಅಮ್ಟಾಡಿ ನಿವಾಸಿ 56 ವರ್ಷ ಪ್ರಾಯದ ಆಂಬ್ರೋಜ್ ಡಿಸಿಲ್ವಾ ಅವರು ಅಲ್ಪಕಾಲದ ಅನಾರೋಗ್ಯದಿಂದ ಆಗಸ್ಟ್ 19ರಂದು ಬುಧವಾರ ನಿಧನರಾದರು.

ದುಬೈನಲ್ಲಿ ಸತತ 33 ವರ್ಷಗಳ ಕಾಲ ಉನ್ನತ ಹುದ್ದೆಯಲ್ಲಿದ್ದ ಆಂಬ್ರೋಜ್ ಅವರು, ಕರಾವಳಿ ಭಾಗದ 50ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಗೆ ದುಬೈನಲ್ಲಿ ಉದ್ಯೋಗ ಒದಗಿಸಿ ಅವರ ಕುಟುಂಬಗಳಿಗೆ ನೆರವಾಗಿದ್ದರು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದ್ದ ಅವರು, ಸಮಾಜಮುಖಿ ಕಾರ್ಯಗಳ ಮೂಲಕ ಪ್ರೀತಿಪಾತ್ರರಾಗಿದ್ದರು.

ಮೂರು ತಿಂಗಳ ಹಿಂದಷ್ಟೇ ಸೇವೆಯಿಂದ ನಿವೃತ್ತಿಗೊಂಡು ಸ್ವಗ್ರಾಮ ಅಮ್ಟಾಡಿಗೆ ಆಗಮಿಸಿದ್ದ ಅವರು, ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅಂತ್ಯಕ್ರಿಯೆಯ ವಿವರ:

ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಆಗಸ್ಟ್ 21ರಂದು, ಶುಕ್ರವಾರ ನೆರವೇರಲಿವೆ.

* ಮಧ್ಯಾಹ್ನ 3:00 ಗಂಟೆಗೆ: ‘ಜಾಸ್ ವಿಲ್ಲೆ’ ನಿವಾಸದಿಂದ ಅಂತಿಮ ಯಾತ್ರೆ ಪ್ರಾರಂಭ.

* ಮಧ್ಯಾಹ್ನ 3:30 ಗಂಟೆಗೆ: ಬಂಟ್ವಾಳದ ಮೊಡಂಕಾಪ್ ಬಾಲ ಯೇಸು ದೇವಾಲಯದಲ್ಲಿ ಪವಿತ್ರ ಬಲಿಪೂಜೆ ಹಾಗೂ ಅಂತ್ಯಕ್ರಿಯೆ.

You may also like

News

ನೈನಾಡಿನಲ್ಲಿ ಪಾದುವಾ ಕಾಲೇಜಿನ 7 ದಿನಗಳ NSS ಶಿಬಿರಕ್ಕೆ ಚಾಲನೆ

“ಸೇವೆಯ ಮೂಲಕ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಕಲಿಯುತ್ತಾರೆ” –  ಫಾದರ್ ಅರುಣ್ ವಿಲ್ಸನ್ ಲೋಬೊ ಪಾದುವಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ಏಳು
News

ಕ್ಷಿಪಣಿ ದಾಳಿ ಬೆನ್ನಲ್ಲೇ ಸೌದಿಯಲ್ಲಿರುವ ಭಾರತೀಯರಿಗೆ ತುರ್ತು ಎಚ್ಚರಿಕೆ

‘ಸುರಕ್ಷಿತ ಸ್ಥಳದಲ್ಲಿರಿ, ದೃಢೀಕರಿಸದ ವಿಡಿಯೋ–ಸುದ್ದಿ ಹಂಚಿಕೊಳ್ಳಬೇಡಿ’ ಎಂದು ರಾಯಭಾರ ಕಚೇರಿ ಸೂಚನೆ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಯೆಮೆನ್‌ನ

You cannot copy content of this page