September 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

SC, ST ಸಾಧಕರ ಗುರುತಿಸುವಿಕೆಗೆ ಅರ್ಜಿ ಆಹ್ವಾನ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡ (ST) ಸಮುದಾಯದ ವಿವಿಧ ಕ್ಷೇತ್ರಗಳ ಪ್ರೇರಣಾದಾಯಕ ಸಾಧಕರ ಬದುಕು ಮತ್ತು ಸಾಧನೆಗಳನ್ನು ದಾಖಲಿಸಿ, ಯುವಜನರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಮಂಗಳೂರು ಅರ್ಜಿ ಆಹ್ವಾನಿಸಿದೆ.

ಉದ್ಯಮ, ಸಮಾಜ ಸೇವೆ, ಶಿಕ್ಷಣ, ಕಲೆ, ಕ್ರೀಡೆ, ಸಾಹಿತ್ಯ, ಕೃಷಿ, ವೃತ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ಸ್ವಂತ ಪರಿಶ್ರಮ, ಧೈರ್ಯ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಬದ್ಧತೆಯಿಂದ ಸಾಧನೆ ಮಾಡಿರುವ ಎಸ್‌ಸಿ, ಎಸ್‌ಟಿ ಸಮುದಾಯದ ವ್ಯಕ್ತಿಗಳ ಕುರಿತು ಬರಹಗಳನ್ನು ಸಲ್ಲಿಸಬಹುದಾಗಿದೆ.

ಸಾಧಕರ ಕುರಿತು ಒಂದರಿಂದ ಎರಡು ಪುಟಗಳ ಸಂಕ್ಷಿಪ್ತ ಬರಹದಲ್ಲಿ ಹೆಸರು, ವಿಳಾಸ, ಶಿಕ್ಷಣ ಹಾಗೂ ಕುಟುಂಬ ಹಿನ್ನೆಲೆ, ಎದುರಿಸಿದ ಸವಾಲುಗಳು, ಸಾಧನೆಗಳು ಮತ್ತು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಹಾಗೂ ಪ್ರೇರಣೆಯ ಸಂದೇಶವನ್ನು ಒಳಗೊಂಡಿರಬೇಕು. ಸಾಧನೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಕೂಡ ಕಳುಹಿಸಬಹುದು. ಸ್ವತಃ ತಮ್ಮ ಕುರಿತು ಅಥವಾ ಪರಿಚಯದಲ್ಲಿರುವ ಅರ್ಹ ಸಾಧಕರ ಕುರಿತು ಬರಹ ಸಲ್ಲಿಸಲು ಅವಕಾಶವಿದೆ.

ಸ್ವೀಕರಿಸಲಾದ ಬರಹಗಳಲ್ಲಿ ನೈಜ ಮಾಹಿತಿ, ವೈಶಿಷ್ಟ್ಯತೆ, ಗುಣಮಟ್ಟ ಹಾಗೂ ಪ್ರೇರಣಾದಾಯಕ ಮೌಲ್ಯ ಹೊಂದಿರುವ ಬರಹಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಉತ್ತಮ ಬರಹಗಳಿಗೆ ಟ್ರಸ್ಟ್ ವತಿಯಿಂದ ಗೌರವ ಸಂಭಾವನೆ ನೀಡಲಾಗುವುದಲ್ಲದೆ, ಟ್ರಸ್ಟ್‌ನ ಪ್ರಕಟಣೆ ಅಥವಾ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸುವ ಸಾಧ್ಯತೆಯೂ ಇದೆ.

ಬರಹಗಳನ್ನು ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಅಗತ್ಯ ದಾಖಲೆಗಳು ಮತ್ತು ಛಾಯಾಚಿತ್ರಗಳೊಂದಿಗೆ ಅಧ್ಯಕ್ಷರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಉರ್ವ ಗಾಂಧಿನಗರ, ಅಶೋಕನಗರ ಅಂಚೆ, ಮಂಗಳೂರು–575006 ವಿಳಾಸಕ್ಕೆ 2026 ಅಕ್ಟೋಬರ್ 15ರೊಳಗೆ ಕಳುಹಿಸಬೇಕು ಎಂದು ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

News

ಕರಾವಳಿಯಲ್ಲಿ ಹೈಕೋರ್ಟ್ ಪೀಠ – ಸಾಧ್ಯಾಸಾಧ್ಯತೆ ಪರಿಶೀಲನೆಗೆ 3 ಸದಸ್ಯರ ಸಮಿತಿ ರಚಿಸಿದ ಕರ್ನಾಟಕ ಹೈಕೋರ್ಟ್

ಮಂಗಳೂರು ಅಥವಾ ಉಡುಪಿಯಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಅಥವಾ ಶಾಶ್ವತ ಪೀಠವನ್ನು ಸ್ಥಾಪಿಸುವ ಬಹುಕಾಲದ ಬೇಡಿಕೆಗೆ ಸಂಬಂಧಿಸಿದಂತೆ ಪ್ರಮುಖ ಸಾಂಸ್ಥಿಕ ಬೆಳವಣಿಗೆಯೊಂದು ನಡೆದಿದೆ. ಕರಾವಳಿ ಭಾಗದಲ್ಲಿ ಪೀಠ
News

NITK Surathkal Hosts National Conclave to Strengthen Innovation and Entrepreneurship Across NITs

Over 50 Delegates from 30 NITs Discuss Research Translation, Technology Licensing and Startup Incubation The National Institute of Technology Karnataka

You cannot copy content of this page