October 23, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಕೀಲರ ಹಿತಾಸಕ್ತಿ ರಕ್ಷಣೆಗೆ ಹೊಸ ವೇದಿಕೆ – ದಕ್ಷಿಣ ಕನ್ನಡದಲ್ಲಿ AILC ಜಿಲ್ಲಾ ಘಟಕ ಅಸ್ತಿತ್ವಕ್ಕೆ

ಅಧ್ಯಕ್ಷರಾಗಿ ಸಿದ್ದಿಕ್ ಹಾಜಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ತಾಜುದ್ದೀನ್ ಆಯ್ಕೆ

ವಕೀಲರ ಹಕ್ಕುಗಳ ರಕ್ಷಣೆ, ವೃತ್ತಿಪರ ಸಮಸ್ಯೆಗಳ ಪರಿಹಾರ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ವಕೀಲರ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್‌ನ (AILC) ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ರಚಿಸಲಾಗಿದೆ. ನೂತನ ಘಟಕದ ಅಧ್ಯಕ್ಷರಾಗಿ ಅಡ್ವೊಕೇಟ್ ಸಿದ್ದಿಕ್ ಹಾಜಿ (ಪುತ್ತೂರು) ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೊಕೇಟ್ ತಾಜುದ್ದೀನ್ (ಮಂಗಳೂರು) ಆಯ್ಕೆಯಾಗಿದ್ದಾರೆ.

ಮಂಗಳೂರಿನ ಲಾಲ್‌ಬಾಗ್‌ನಲ್ಲಿ ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್ ಕರ್ನಾಟಕದ ಕರಾವಳಿ ಜಿಲ್ಲೆಗಳ ವಕೀಲರ ವೇದಿಕೆಯ ಸಭೆ ನಡೆಯಿತು. ಕೌನ್ಸಿಲ್ ಕರ್ನಾಟಕದ ಅಧ್ಯಕ್ಷ ಅಡ್ವೊಕೇಟ್ ಬಾಲನ್ (ಬೆಂಗಳೂರು ಹೈಕೋರ್ಟ್) ಅವರ ನಿರ್ದೇಶನದಂತೆ ನಡೆದ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹೈಕೋರ್ಟ್‌ನ ನ್ಯಾಯವಾದಿ ಅಬ್ದುಲ್ ಮಜೀದ್ ಖಾನ್ ವಹಿಸಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ: ಜಿಲ್ಲಾ ಘಟಕದ ಪದಾಧಿಕಾರಿಗಳಾಗಿ ಆಯ್ಕೆಯಾದವರು

  • ಅಧ್ಯಕ್ಷರು: ಅಡ್ವೊಕೇಟ್ ಸಿದ್ದಿಕ್ ಹಾಜಿ, ಪುತ್ತೂರು
  • ಉಪಾಧ್ಯಕ್ಷರು: ಅಡ್ವೊಕೇಟ್ ಜೀಶಾನ್ ಅಲಿ, ಮಂಗಳೂರು ಮತ್ತು ಅಡ್ವೊಕೇಟ್ ಗ್ರೆಗೋರಿ ಡಿಸೋಜ, ಪುತ್ತೂರು
  • ಪ್ರಧಾನ ಕಾರ್ಯದರ್ಶಿ: ಅಡ್ವೊಕೇಟ್ ತಾಜುದ್ದೀನ್, ಮಂಗಳೂರು
  • ಕಾರ್ಯದರ್ಶಿ: ಅಡ್ವೊಕೇಟ್ ರಶೀದ್, ಸುಳ್ಯ
  • ಖಜಾಂಚಿ: ಅಡ್ವೊಕೇಟ್ ಇಜ್ಹಾಜ್, ಬಂಟ್ವಾಳ

 

ವಕೀಲರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ:

ಸಭೆಯಲ್ಲಿ ವಕೀಲರ ಹಕ್ಕುಗಳು, ವೃತ್ತಿಪರ ಸಮಸ್ಯೆಗಳು, ನ್ಯಾಯಾಂಗ ಕ್ಷೇತ್ರದಲ್ಲಿ ಎದುರಾಗುತ್ತಿರುವ ಸವಾಲುಗಳು ಹಾಗೂ ಸಂಘಟನೆಯನ್ನು ಬಲಪಡಿಸುವ ಕುರಿತು ಚರ್ಚಿಸಲಾಯಿತು. ಕರಾವಳಿ ಭಾಗದ ವಕೀಲರನ್ನು ಒಗ್ಗೂಡಿಸಿ, ಅವರ ವೃತ್ತಿಪರ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರವನ್ನು ಮತ್ತಷ್ಟು ಬಲಪಡಿಸುವುದು ಜಿಲ್ಲಾ ಘಟಕ ರಚನೆಯ ಪ್ರಮುಖ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಭೆಯಲ್ಲಿ ಕೌನ್ಸಿಲ್‌ನ ರಾಜ್ಯ ಸಮಿತಿ ಸದಸ್ಯರಾದ ಅಡ್ವೊಕೇಟ್ ಸಾಹಿರಾ ಕೆ. ಜುಬೈರ್ (ಬೆಂಗಳೂರು) ಹಾಗೂ ಅಡ್ವೊಕೇಟ್ ಅಶ್ರಫ್ ಕೆ. (ಪುತ್ತೂರು) ಉಪಸ್ಥಿತರಿದ್ದರು.

You may also like

News

ಅಕ್ಟೋಬರ್ 24ರಂದು ಧರ್ಮಸ್ಥಳದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

ವಿಶೇಷ ಪೂಜೆ ಮತ್ತು ಹಿರಿಯ ನೌಕರರಿಗೆ ಸನ್ಮಾನ – ಎರಡು ತಿಂಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಸಂಭ್ರಮದ ಸಮಾರೋಪ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.
News

65% Burns Survivor Gets a Second Chance at Life at Father Muller

In a remarkable story of resilience, advanced medical care and teamwork, a patient who sustained 65% deep thermal burns has

You cannot copy content of this page