May 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತಾಕೊಡೆಯಲ್ಲಿ ಮಹಿಳೆಯರಿಗಾಗಿ 5 ದಿವಸಗಳ ಕೌಶಲ್ಯ ತರಬೇತಿಯ ಉದ್ಘಾಟನೆ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಬ್ಯಾಂಕ್ ಒಫ್ ಬರೋಡ ಮೂಡಬಿದ್ರಿ ಶಾಖೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಪವಿತ್ರ ಶಿಲುಬೆಯ ದೇವಾಲಯ ತಾಕೊಡೆ  ಹಾಗೂ ಸ್ತ್ರೀ ಸಂಘಟನೆ ತಾಕೊಡೆ ಘಟಕ ಇವರ ಜಂಟಿ ಆಶ್ರಯದಲ್ಲಿ ಆಗಸ್ಟ್ 4 ಸೋಮವಾರದಿಂದ ಆಗಸ್ಟ್ 8 ಗುರುವಾರದ ತನಕ 5 ದಿವಸಗಳ ಸೀರೆಗೆ ಗೊಂಡೆ ಹಾಕುವ ಕೌಶಲ್ಯ ತರಬೇತಿಯ ಉದ್ಘಾಟನಾ ಸಮಾರಂಭ ತಾಕೊಡೆ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮೊದಲಿಗೆ ಮಹಿಳೆಯರು ಪ್ರಾರ್ಥನಾ ಗೀತೆ ಹಾಡಿ ದೇವರ ಅನುಗ್ರಹ ಬೇಡಿದರು. ನಂತರ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ರಾಜ್ ರವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಹಿಳೆಯರು  ತರಬೇತಿಯಿಂದ ಕೌಶಲ್ಯ   ಕಲಿತು  ಸ್ವಾವಲಂಬನೆ ಜೀವನ ಸಾಗಿಸಲು ಪ್ರಯತ್ನ ಪಡಬೇಕು, ಬ್ಯಾಂಕ್ ಗಳು ಸ್ವ ಉದ್ಯೋಗ ಮಾಡಲು ಸಾಲ ಸೌಲಭ್ಯ ನೀಡುತ್ತದೆ. ಎಲ್ಲರೂ ಇದರ ಪ್ರಯೋಜನ ಪಡೆಯಲು ಕರೆ ನೀಡಿದರು. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ತಾಪಕರಾದ ಜೀವನ್ ಕೊಲ್ಯ ಮಾತನಾಡಿ ಮಹಿಳೆಯರು ಸ್ವ ಉದ್ಯೋಗ ತರಬೇತಿಯ ಪ್ರಯೋಜನ ಪಡೆದು ಸಣ್ಣ ಸಣ್ಣ ಉದ್ದಿಮೆ ಪ್ರಾರಂಭ ಮಾಡಿ ಉಳಿತಾಯ ಮಾಡಿ ಯಶಸ್ಸು ಗಳಿಸಲು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಕೊಡೆ ದೇವಾಲಯದ ಧರ್ಮ ಗುರುಗಳಾದ ವಂದನೀಯ ಫಾದರ್ ರೋಹನ್ ಲೋಬೊ ಮಾತನಾಡುತ್ತಾ ಸ್ವ ಉದ್ಯೋಗ ತರಬೇತಿಯಿಂದ ಮಹಿಳೆಯರು ಉತ್ತಮ ಜೀವನ ನಡೆಸಲು ಸಾಧ್ಯವಿದೆ, ಇಂಥ ತರಬೇತಿಗಳಿಗೆ ನಮ್ಮ ಸದಾ ಬೆಂಬಲವಿದೆ ಎಂದು ತಿಳಿಸಿ ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಶುಭ ಕೋರಿದರು. ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಆಲ್ವಿನ್ ಪಿಂಟೋ, ಆಯೋಗಗಳ ಸಂಯೋಜಕ ಪಾವ್ಲ್ ಡಿಸೋಜ, ಬೆಥೆನಿ ಕಾನ್ವೆಂಟ್ ಸುಪೀರಿಯರ್ ಭಗಿನಿ ರೀನಾ, ತರಬೇತುದಾರ ಶುಭ ಲಕ್ಷ್ಮೀ ಮೂಡಬಿದಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ತ್ರೀ ಸಂಘಟನೆ ಅಧ್ಯಕ್ಷೆ ಐವಿ ಕ್ರಾಸ್ತ ಸ್ವಾಗತಿಸಿ, ಸಹ ಕಾರ್ಯದರ್ಶಿ ಶೆರಿ ನಜೆರೆತ್ ಧನ್ಯವಾದಗೈದರು. ಲೀಜಾ ರೊಡ್ರಿಗಸ್  ಕಾರ್ಯಕ್ರಮ ನಿರೂಪಿಸಿದರು. 30 ಮಹಿಳೆಯರು 5 ದಿನದ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

You may also like

News

ಮಿಲಾಗ್ರಿಸ್ ಚರ್ಚ್ ನ ಪ್ರದಾನ ಧರ್ಮಗುರು ಫಾದರ್ ಐವನ್ ಮೈಕಲ್ ರೊಡ್ರಿಗಸ್ ಕಥೊಲಿಕ್ ಸಭಾ ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಕ – ಬಿಷಪ್ ಆದೇಶ

ಜೂನ್ 1ರಂದು ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಅವರಿಂದ ಅಧಿಕಾರ ಸ್ವೀಕಾರ ಭೇಟಿ ಮಾಡಿ ಹೂ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ
News

ಸಾಮಾಜಿಕ ಜಾಲತಾಣಗಳೆಲ್ಲವೂ ಸತ್ಯವಲ್ಲ, ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ – ವಿದ್ಯಾರ್ಥಿಗಳಿಗೆ ಪಿ.ಬಿ. ಹರೀಶ್ ರೈ ಕರೆ

“ಮಾಧ್ಯಮಗಳು ಸಮಾಜದ ನೈಜ ಪ್ರತಿಬಿಂಬವಾಗಿದ್ದು, ಸತ್ಯವನ್ನು ಸಾರ್ವಜನಿಕರ ಮುಂದೆ ಅನಾವರಣಗೊಳಿಸುವುದು ಅವುಗಳ ಪ್ರಮುಖ ಜವಾಬ್ದಾರಿಯಾಗಿದೆ,” ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಪ್ರತಿಪಾದಿಸಿದ್ದಾರೆ. ನಗರದ

You cannot copy content of this page