October 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಿಯುಸಿ ಫಲಿತಾಂಶ – ನೇರಳಕಟ್ಟೆಯ ಆಯಿಷಾ ಹೈಫಾ ಮತ್ತು ಮಹಮ್ಮದ್ ಶಫೀರ್‌ ವಿಶಿಷ್ಟ ಶ್ರೇಣಿಯ ಸಾಧನೆ

2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಕುಕ್ಕೆರಬೆಟ್ಟಿನ ಇಬ್ಬರು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ (Distinction) ತೇರ್ಗಡೆಯಾಗಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಆಯಿಷಾ ಹೈಫಾ ಸಾಧನೆ:

ನೇರಳಕಟ್ಟೆ ಕುಕ್ಕೆರಬೆಟ್ಟು ನಿವಾಸಿಗಳಾದ ಮಹಮ್ಮದ್ ಮತ್ತು ಬುಶ್ರಾ ದಂಪತಿಯ ಪುತ್ರಿ ಆಯಿಷಾ ಹೈಫಾ ಒಟ್ಟು 600 ಅಂಕಗಳಿಗೆ 560 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಇವರು ಕಲ್ಲಡ್ಕದ ಅನುಗ್ರಹ ವುಮೆನ್ಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.

ಮಹಮ್ಮದ್ ಶಫೀರ್ ಸಾಧನೆ:

ನೇರಳಕಟ್ಟೆ ಕುಕ್ಕೆರಬೆಟ್ಟು ನಿವಾಸಿಗಳಾದ ಕೆ.ಬಿ.ಸಲೀಂ ಹಾಜಿ ಹಾಗೂ ಸೌದಾ ದಂಪತಿಗಳ ಪುತ್ರ ಮಹಮ್ಮದ್ ಶಫೀರ್ ಒಟ್ಟು 600 ಅಂಕಗಳಿಗೆ 544 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪುತ್ತೂರಿನ ಸುಧಾನಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.

ಗ್ರಾಮದ ಈ ಇಬ್ಬರು ಪ್ರತಿಭೆಗಳ ಶೈಕ್ಷಣಿಕ ಸಾಧನೆಗೆ ನೇರಳಕಟ್ಟೆ ಹಾಗೂ ಕುಕ್ಕೆರಬೆಟ್ಟು ಗ್ರಾಮಸ್ಥರು, ಶಿಕ್ಷಕರು ಮತ್ತು ಹಿತೈಷಿಗಳು ಹರ್ಷ ವ್ಯಕ್ತಪಡಿಸಿ, ಶುಭಾಶಯಗಳನ್ನು ಕೋರಿದ್ದಾರೆ.

You may also like

News

CODP Organises October Camp in Mangaluru to Promote Children’s Holistic Development

The Child Sponsorship Programme (CSP) of the Canara Organisation for Development and Peace (CODP), Mangaluru, organised its October Camp for
News

‘ಪೊಲೀಸ್–ATS’ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಬೆದರಿಕೆ – ಪುತ್ತೂರಿನ ವ್ಯಕ್ತಿಗೆ ₹1.31 ಕೋಟಿ ವಂಚನೆ

ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ಮುಂಬೈ ಪೊಲೀಸ್ ಹಾಗೂ ATS ಅಧಿಕಾರಿಗಳೆಂದು ಪರಿಚಯಿಸಿಕೊಂಡು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ₹1,31,50,000 ಹಣ ವಂಚಿಸಿರುವ ಘಟನೆ ನಡೆದಿದೆ. ಆರೋಪಿಗಳು

You cannot copy content of this page