October 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಗಳನ್ನೇ ಕೊಂದ ತಾಯಿ ನೇಣಿಗೆ ಶರಣು – ವೈಟ್‌ಫೀಲ್ಡ್‌ನಲ್ಲಿ ಕೌಟುಂಬಿಕ ದುರಂತ

ಸಿಲಿಕಾನ್ ಸಿಟಿಯ ವೈಟ್‌ಫೀಲ್ಡ್‌ನ ಇಮ್ಮಡಿಹಳ್ಳಿಯಲ್ಲಿ ಮರುಕಳಿಸದಂತಹ ದಾರುಣ ಘಟನೆಯೊಂದು ನಡೆದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿಯೊಬ್ಬರು ತನ್ನ ಸ್ವಂತ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ವರದಿಯಾಗಿದೆ.

ಘಟನೆಯ ಹಿನ್ನೆಲೆ:

ಮೃತ ಮಹಿಳೆಯನ್ನು 45 ವರ್ಷ ಪ್ರಾಯದ ಸುವರ್ಣ ಎಂದು ಗುರುತಿಸಲಾಗಿದ್ದು, ಮೃತ ಪುತ್ರಿ ಕಾರುಣ್ಯ ಎನ್ನಲಾಗಿದೆ. ಸುವರ್ಣ ಅವರ ಪತಿ ಚಂದ್ರಶೇಖರ್ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಈ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ, ಮಗಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಸುವರ್ಣ ಹತ್ಯೆ ಮಾಡಿದ್ದಾರೆ. ಮಗಳು ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ನಂತರ, ಅವರು ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.

ಪತ್ತೆಯಾಗಿದ್ದು ಹೇಗೆ?

ಕೆಲಸದ ನಡುವೆ ಪತಿ ಚಂದ್ರಶೇಖರ್ ಅವರು ಪತ್ನಿಗೆ ಪದೇ ಪದೇ ಕರೆ ಮಾಡಿದ್ದಾರೆ. ಆದರೆ ಸುವರ್ಣ ಅವರು ಕರೆ ಸ್ವೀಕರಿಸದಿದ್ದಾಗ ಆತಂಕಗೊಂಡ ಚಂದ್ರಶೇಖರ್, ಕೂಡಲೇ ತಮ್ಮ ಸಹೋದರನಿಗೆ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾರೆ. ಸಹೋದರ ಮನೆಗೆ ಬಂದು ನೋಡಿದಾಗ ಈ ಭಯಾನಕ ದೃಶ್ಯ ಬೆಳಕಿಗೆ ಬಂದಿದೆ.

ಪೊಲೀಸ್ ತನಿಖೆ ಮತ್ತು ಪ್ರಾಥಮಿಕ ಮಾಹಿತಿ:

ಮಾಹಿತಿ ತಿಳಿದ ತಕ್ಷಣ ವೈಟ್‌ಫೀಲ್ಡ್ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

* ಖಿನ್ನತೆಯ ಶಂಕೆ: ಸುವರ್ಣ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ.

* ಡೆತ್ ನೋಟ್: ಸದ್ಯಕ್ಕೆ ಯಾವುದೇ ಆತ್ಮಹತ್ಯೆ ಪತ್ರ (ಡೆತ್ ನೋಟ್) ಸಿಕ್ಕಿಲ್ಲ.

* ಪ್ರಕರಣ: ಪೊಲೀಸರು ಒಂದು ಕೊಲೆ ಹಾಗೂ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

You may also like

News

ಕಳ್ಳತನ ಪ್ರಕರಣ – ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವಿಟ್ಲ ಪೊಲೀಸರಿಂದ ಬಂಧನ

ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಕೇರಳದ ಮಲಪ್ಪುರಂ ನಿವಾಸಿ ರಂಶೀದ್‌ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ
News

Father Muller Medical College Hospital Showcases Green Healthcare Initiatives at NABH National Patient Safety Conference in Delhi

Selected for a national-level presentation, FMMCH highlights sustainable environmental practices, responsible resource management and resilience in healthcare delivery Father Muller

You cannot copy content of this page