October 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರು – ನವೀಕೃತ ಬದ್ರಿಯಾ ಜುಮ್ಮಾ ಮಸೀದಿ ಲೋಕಾರ್ಪಣೆ ಹಾಗೂ ಸ್ವಲಾತ್ ವಾರ್ಷಿಕೋತ್ಸವ

ಏಪ್ರಿಲ್ 25 ಮತ್ತು 26ರಂದು ವಿಜೃಂಭಣೆಯಿಂದ ನಡೆಯಲಿರುವ ಕಾರ್ಯಕ್ರಮ

ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿರುವ ನವೀಕೃತ ಬದ್ರಿಯಾ ಜುಮ್ಮಾ ಮಸೀದಿಯ ಉದ್ಘಾಟನಾ ಸಮಾರಂಭ ಮತ್ತು ಬೃಹತ್ ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಇದೇ ಏಪ್ರಿಲ್ 25 ಮತ್ತು 26ರಂದು (ಶನಿವಾರ ಮತ್ತು ಭಾನುವಾರ) ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

ಕಾರ್ಯಕ್ರಮದ ವಿವರಗಳು:

  • ಏಪ್ರಿಲ್ 25 ಶನಿವಾರ: ಮಗ್ರಿಬ್ ನಮಾಜಿನ ಬಳಿಕ ಖ್ಯಾತ ವಾಗ್ಮಿ ಬಹು| ಹಂಝ ಮಿಸ್ಬಾಹಿ ಓಟ್ಟಪದವು ಅವರಿಂದ ಧಾರ್ಮಿಕ ಪ್ರಭಾಷಣ ಜರುಗಲಿದೆ.
  • ಏಪ್ರಿಲ್ 26 ಭಾನುವಾರ: ಮಗ್ರಿಬ್ ನಮಾಜಿನ ನಂತರ ನವೀಕೃತ ಮಸೀದಿಯ ಭವ್ಯ ಉದ್ಘಾಟನೆ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮ ನಡೆಯಲಿದೆ.

ಗಣ್ಯರ ಉಪಸ್ಥಿತಿ:

ಈ ಪುಣ್ಯ ಕಾರ್ಯಕ್ರಮದ ನೇತೃತ್ವವನ್ನು ಬಹು| ಸಯ್ಯಿದ್ ಇಬ್ರಾಹಿಂ ಬಾದುಷಾ ತಂಙಳ್ ಬುಖಾರಿ ಅಲ್-ಅಝ್‌ಹರಿ ಆನೆಕಲ್ ಅವರು ವಹಿಸಲಿದ್ದಾರೆ. ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಅವರ ಗೌರವ ಉಪಸ್ಥಿತಿಯು ಈ ಸಂದರ್ಭದಲ್ಲಿ ಇರಲಿದೆ.

ಸಭಾ ಕಾರ್ಯಕ್ರಮ:

  • ಅಧ್ಯಕ್ಷತೆ: ಎಸ್. ಎ. ಇಸ್ಮಾಯಿಲ್ ಸೂರಿಕುಮೇರು.
  • ಉದ್ಘಾಟನೆ: ಖತೀಬ್ ಕಲಂದರ್ ಶಾಫಿ ಮದನಿ.
  • ಸ್ವಾಗತ: ಮುಅಲ್ಲಿಂ ಆಶಿಕ್ ಹಿಶಾಮಿ.
  • ನಿರೂಪಣೆ: ಸದರ್ ಮುಶ್ತಾಕ್ ಫೈಝಿ ಅಲ್ ಮಅ್‌ಬರಿ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ವಿವಿಧ ಮಸೀದಿಗಳ ಉಮರಾ ಮುಖಂಡರು, ಧಾರ್ಮಿಕ ಪಂಡಿತರು ಹಾಗೂ ಪ್ರಮುಖ ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಜಮಾಅತ್ ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

News

CODP Organises October Camp in Mangaluru to Promote Children’s Holistic Development

The Child Sponsorship Programme (CSP) of the Canara Organisation for Development and Peace (CODP), Mangaluru, organised its October Camp for
News

‘ಪೊಲೀಸ್–ATS’ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಬೆದರಿಕೆ – ಪುತ್ತೂರಿನ ವ್ಯಕ್ತಿಗೆ ₹1.31 ಕೋಟಿ ವಂಚನೆ

ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ಮುಂಬೈ ಪೊಲೀಸ್ ಹಾಗೂ ATS ಅಧಿಕಾರಿಗಳೆಂದು ಪರಿಚಯಿಸಿಕೊಂಡು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ₹1,31,50,000 ಹಣ ವಂಚಿಸಿರುವ ಘಟನೆ ನಡೆದಿದೆ. ಆರೋಪಿಗಳು

You cannot copy content of this page