October 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಲ್ಲಿಪಾದೆ ಸೈಂಟ್ ಜೋನ್ಸ್ ಶಾಲೆಗೆ SSLC ಪರೀಕ್ಷೆಯಲ್ಲಿ ಶೇ.100 ಫಲಿತಾಂಶ – ಪೂರ್ವಿ ಶೆಟ್ಟಿ ಪ್ರಥಮ

ಅಭಿನಂದನೆ ಸಲ್ಲಿಸಿದ ಚರ್ಚ್ ಧರ್ಮಗುರು ಫಾದರ್ ರೋಬರ್ಟ್ ಡಿಸೋಜ

ಬಂಟ್ವಾಳ ತಾಲೂಕು ಅಲ್ಲಿಪಾದೆಯ ಸೈಂಟ್ ಜೋನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ. ಒಟ್ಟು 48 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು, ಶಾಲೆಗೆ ಹೆಮ್ಮೆ ತಂದಿದ್ದಾರೆ.

ವಿದ್ಯಾರ್ಥಿನಿ ಪೂರ್ವಿ ಶೆಟ್ಟಿ 607 ಅಂಕಗಳೊಂದಿಗೆ (97.12%) ಪ್ರಥಮ ಸ್ಥಾನ ಪಡೆದಿದ್ದಾರೆ. ಪೂರ್ವಿ ಜಿ. ಹಾಗೂ ಶೋಧನ್ ಇಬ್ಬರೂ 600 ಅಂಕಗಳೊಂದಿಗೆ (96%) ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.

ಇತರ ವಿದ್ಯಾರ್ಥಿಗಳಲ್ಲಿ ಅಕ್ಷಯಾ (599 – 95.84%), ಆ್ಯರನ್ ಡಿಸೋಜ (596 – 95.36%), ಪ್ರಾಪ್ತಿ (595 – 95.20%), ಅನುಷಾ ವಿ.ಎಸ್. (590 – 94.40%), ನಂದಿತಾ ಹಾಗೂ ಸಾನ್ವಿ ವಿ. ಜೈನ್ (579 – 92.64%), ಕ್ಯಾಲ್ವಿನಾ ಲೋಬೊ (572 – 91.52%), ಜನ್ವಿತ್ (569 – 91.04%), ಕಾವ್ಯ (568 – 90.88%), ಜಸ್ಮಿತಾ ಮತ್ತು ಯಶ್ವಿತ್ (566 – 90.56%), ಚಿಂತನ್ (565 – 90.40%), ಎಂ. ಅನುಷ್ಕಾ (561 – 89.76%), ಸಿಂಚನಾ (560 – 89.60%), ಮೀರಾ ಆರ್. (556 – 88.96%), ಅಶಿತಾ (554 – 88.64%), ದೀಪಾ ಶೆನೊಯ್ ಹಾಗೂ ಗ್ರೀಷ್ಮಾ (553 – 88.48%), ಚಿತ್ರೇಶ್ (552 – 88.32%), ರಕ್ಷಾ (546 – 87.36%), ಅನ್ವಿತಾ (535 – 85.60%), ದಿಗಂತ್ (533 – 85.28%), ಎಂ.ತ್ವಾಹಿಬ್ (526 – 84.16%), ಪವನ್ (521 – 83.36%), ಎಂ.ಎ. ಹಾಸ್ವಿಲ್ (519 – 83.04%), ಪ್ರಾಪ್ತಿ (514 – 82.24%), ತನ್ವಿ (513 – 82.08%), ದೀಕ್ಷಾ (511 – 81.76%), ಅರ್ವಿನ್ ಲೋಬೊ (509 – 81.44%) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಒಟ್ಟು ಫಲಿತಾಂಶದಲ್ಲಿ 26 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 15 ಪ್ರಥಮ ಶ್ರೇಣಿ ಹಾಗೂ 7 ದ್ವಿತೀಯ ಶ್ರೇಣಿ ಪಡೆದಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅಲ್ಲಿಪಾದೆ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ರೋಬರ್ಟ್ ಡಿಸೋಜ, ಶಾಲಾ ಸಂಚಾಲಕಿ ಭಗಿನಿ ನರ್ಸಿಜಾ ಸಿಕ್ವೇರಾ, ಮುಖ್ಯ ಶಿಕ್ಷಕಿ ಭಗಿನಿ ದೀಪಾ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

You may also like

News

ಹಿರಿಯ ಆಟೋ ಚಾಲಕ, ಕಬಡ್ಡಿ ಪಟು ಶುಕುರು ಸಾಹೇಬ್ ನಿಧನ

ಬಂಟ್ವಾಳ: ನೇರಳಕಟ್ಟೆ ಸಮೀಪದ ಭಗವಂತಕೋಡಿ ನಿವಾಸಿ, ಹಿರಿಯ ಆಟೋ ಚಾಲಕ ಹಾಗೂ ಉತ್ತಮ ಕಬಡ್ಡಿ ಪಟುವಾಗಿದ್ದ 58 ವರ್ಷ ಪ್ರಾಯದ ಶುಕುರು ಸಾಹೇಬ್ ಅವರು ಹೃದಯಾಘಾತದಿಂದ ಇಂದು
News

6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ್ – ಡಾ. ಸುಧಾ ಯಾದವ್‌ ಅವರಿಗೆ ಕರ್ನಾಟಕದ ಹೊಣೆ

ಕರ್ನಾಟಕ ಸೇರಿದಂತೆ ದೇಶದ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ. ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ

You cannot copy content of this page