August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಲ್ಲಾಪು–ತೊಕ್ಕೊಟ್ಟು ಪ್ರದೇಶದಲ್ಲಿ ಮ್ಯಾಂಗ್ರೋವ್ ನೆಡುವ ಅಭಿಯಾನ – ಯುವಕರಿಂದ 5000 ಗಿಡಗಳ ನೆಡುವಿಕೆ

ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ಸಮಿತಿಯ ಮುಂದಾಳತ್ವ

ಮಂಗಳೂರು ಧರ್ಮಕ್ಷೇತ್ರದ ಭಾರತೀಯ ಕಥೋಲಿಕ ಯುವ ಸಂಚಲನ, ಮಂಗಳೂರು ಅರಣ್ಯ ಇಲಾಖೆ ವಿಭಾಗ ಹಾಗೂ ಐಸಿವೈಎಮ್ ಇಸಿಡಿ, ಸಿಟಿ ಮತ್ತು ಮಂಗಳೂರು ದಕ್ಷಿಣ ವಲಯದ ಸಹಯೋಗದಲ್ಲಿ ಕಲ್ಲಾಪು–ತೊಕ್ಕೊಟ್ಟು ಪರಿಸರದಲ್ಲಿ ಮ್ಯಾಂಗ್ರೋವ್ ಪ್ಲಾಂಟೇಶನ್ ಡ್ರೈವ್ ಯಶಸ್ವಿಯಾಗಿ ನಡೆಯಿತು. ಮೇ 3ರಂದು ಭಾನುವಾರ ಬೆಳಿಗ್ಗೆ 6ರಿಂದ 8.30 ಗಂಟೆಯವರೆಗೆ ನಡೆದ ಈ ಅಭಿಯಾನದಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ RFO ರಾಜೇಶ್, ಐಸಿವೈಎಮ್ ಕೇಂದ್ರೀಯ ಸಮಿತಿಯ ನಿರ್ದೇಶಕರಾದ ವಂದನೀಯ ಫಾದರ್ ಆಶ್ವಿನ್ ಕಾರ್ಡೊಜ, ಅಧ್ಯಕ್ಷ ವಿಜೋಯ್ ಹಾಗೂ ಕಾರ್ಯದರ್ಶಿ ಮರಿಯ ಸೇರಿದಂತೆ ಹಲವು ಯುವಕ-ಯುವತಿಯರು ಭಾಗವಹಿಸಿ ಸುಮಾರು 5000 ಮ್ಯಾಂಗ್ರೋವ್ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಿದರು.

ಈ ಅಭಿಯಾನವು ಕರಾವಳಿ ಪರಿಸರ ಸಂರಕ್ಷಣೆ ಹಾಗೂ ಜೈವ ವೈವಿಧ್ಯತೆಯನ್ನು ಉಳಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

You may also like

News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ
News

ಸಂಚಾರ ನಿಯಮ ಉಲ್ಲಂಘನೆ – ಪುತ್ತೂರಿನಲ್ಲಿ ಗ್ಲಾಸ್ ಸ್ಟಿಕ್ಕರ್ ಅಳವಡಿಸಿದ ಹಾಗೂ ನಂಬರ್ ಪ್ಲೇಟ್ ಮರೆಮಾಚಿದ ವಾಹನಗಳಿಗೆ ಪೊಲೀಸರ ದಂಡ!

ಪುತ್ತೂರು: ವಾಹನಗಳ ಗ್ಲಾಸ್‌ಗಳಿಗೆ ದಟ್ಟವಾದ ಸ್ಟಿಕ್ಕರ್ ಅಳವಡಿಸಿ ಚಾಲನೆಗೆ ಅಡ್ಡಿಪಡಿಸುತ್ತಿದ್ದ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ಹಾಕಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ

You cannot copy content of this page