September 21, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೆಡಿಕಲ್ ಬಂದ್ – ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಂಗಳೂರಿನಲ್ಲಿ ಪರ್ಯಾಯ ವ್ಯವಸ್ಥೆ; ಈ ನಂಬರ್‌ಗಳಿಗೆ ಕರೆ ಮಾಡಿ

ಆನ್‌ಲೈನ್ ಮೂಲಕ ಔಷಧಿಗಳ ಮಾರಾಟವನ್ನು ವಿರೋಧಿಸಿ ನಾಳೆ ಮೇ 20ರಂದು ಬುಧವಾರ ಮೆಡಿಕಲ್ ಅಂಗಡಿಗಳ ಬಂದ್‌ಗೆ ಕರೆ ನೀಡಲಾಗಿದೆ. ಆದರೆ, ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ತುರ್ತು ಔಷಧಿಗಳ ಕೊರತೆಯಾಗದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಸಹಾಯಕ ಔಷಧ ನಿಯಂತ್ರಕರ ಕಚೇರಿ ವಿಶೇಷ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದೆ. ಬಂದ್ ದಿನದಂದು ಜಿಲ್ಲೆಯ ಹಲವು ಪ್ರಮುಖ ಫಾರ್ಮಸಿಗಳು ಮತ್ತು ಆಸ್ಪತ್ರೆಯ ಒಳಗಿನ ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ತೆರೆದಿರುವ ಪ್ರಮುಖ ಔಷಧಿ ಕೇಂದ್ರಗಳು:

ಬಂದ್‌ನಿಂದ ವಿನಾಯಿತಿ ಪಡೆದು ಸಾರ್ವಜನಿಕರ ಸೇವೆಗೆ ಲಭ್ಯವಿರುವ ಮೆಡಿಕಲ್ ಅಂಗಡಿಗಳ ವಿವರ ಇಲ್ಲಿದೆ:

* ಅಪೋಲೋ ಫಾರ್ಮಸಿ: ಜಿಲ್ಲೆಯಾದ್ಯಂತ ಒಟ್ಟು 38 ಶಾಖೆಗಳು ತೆರೆದಿರುತ್ತವೆ.

* ಮೆಡ್ ಪ್ಲಸ್ ಫಾರ್ಮಸಿ: ಒಟ್ಟು 48 ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

* ಪ್ರಧಾನಮಂತ್ರಿ ಜನೌಷಧಿ ಕೇಂದ್ರ: ಬರೋಬ್ಬರಿ 130 ಕೇಂದ್ರಗಳು ಸಾರ್ವಜನಿಕರಿಗೆ ಲಭ್ಯವಿರಲಿವೆ.

* ಆಸ್ಪತ್ರೆಗಳ ಮೆಡಿಕಲ್ ಅಂಗಡಿಗಳು: ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಆವರಣದಲ್ಲಿರುವ ಎಲ್ಲಾ ಔಷಧಿ ಅಂಗಡಿಗಳು 24X7 ಕಾರ್ಯನಿರ್ವಹಿಸಲಿವೆ.

ತುರ್ತು ಮಾಹಿತಿಗಾಗಿ ಸಂಪರ್ಕ ಸಂಖ್ಯೆಗಳು:

ಔಷಧಿಗಳ ಲಭ್ಯತೆಯ ಬಗ್ಗೆ ಮಾಹಿತಿ ಪಡೆಯಲು ಸಾರ್ವಜನಿಕರು ಆಯಾ ಭಾಗದ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ:

ಮಂಗಳೂರು ನಗರ –  9108466827

ಮುಲ್ಕಿ, ಕಿನ್ನಿಗೋಳಿ, ಮೂಡಬಿದ್ರಿ – 6364908172, 7625081353

ಬಂಟ್ವಾಳ, ಬಿ.ಸಿ. ರೋಡ್, ವಿಟ್ಲ – 9187234432

ನೋಡಲ್ ಅಧಿಕಾರಿಗಳ ಸಂಪರ್ಕ: ಬಂದ್ ಸಂದರ್ಭದಲ್ಲಿ ಯಾವುದೇ ತುರ್ತು ನೆರವು ಅಥವಾ ದೂರುಗಳಿಗಾಗಿ ಮಂಗಳೂರಿನ ಸಹಾಯಕ ಡ್ರಗ್ಸ್ ನಿಯಂತ್ರಕರನ್ನು (ನೋಡಲ್ ಅಧಿಕಾರಿ) ಮೊಬೈಲ್: 9448205177 ಅಥವಾ ಲ್ಯಾಂಡ್ ಲೈನ್: 0824-2218451 ಮೂಲಕ ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

You may also like

News

ಅಪಘಾತದಲ್ಲಿ ಗಾಯಗೊಂಡ ರಮಾನಾಥ ರೈ ಆರೋಗ್ಯ ವಿಚಾರಿಸಿದ ಸಂಸದ ಬ್ರಿಜೇಶ್ ಚೌಟ

ಕಾರು ಹಾಗೂ ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಬಿ. ರಮಾನಾಥ ರೈ ಮತ್ತು ಅವರ
News

Father Muller Welcomes 33rd Batches of Allied Health and Physiotherapy Students

A new generation of aspiring healthcare professionals began their academic journey at Father Muller as the 33rd batches of Father

You cannot copy content of this page