September 22, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಮಾಜಕ್ಕೊಂದು ಮಾದರಿ: ಮಂಗಳೂರಿನಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ‘ಯುನೈಟೆಡ್ ಹೋಮ್ಸ್’ ಆಶ್ರಯ ತಾಣ ಲೋಕಾರ್ಪಣೆ!

ಬಿಜೈಯ ‘ಯುನೈಟೆಡ್ ಫ್ರೆಂಡ್ಸ್ ಟ್ರಸ್ಟ್’ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಸೂರಿಲ್ಲದ 10 ಕುಟುಂಬಗಳಿಗಾಗಿ ಅಬ್ಬೆಟ್ಟುವಿನಲ್ಲಿ ನಿರ್ಮಿಸಲಾದ ‘ಯುನೈಟೆಡ್ ಹೋಮ್ಸ್’ ವಸತಿ ಸಮುಚ್ಚಯವನ್ನು ಮೇ 17ರಂದು ಭಾನುವಾರ ಅದ್ಧೂರಿಯಾಗಿ ಉದ್ಘಾಟಿಸಲಾಯಿತು.

ಬಿಜೈ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಅವರು ನೂತನ ಕಟ್ಟಡವನ್ನು ಆಶೀರ್ವದಿಸಿದರು. ದೈಜಿವರ್ಲ್ಡ್ ಮೀಡಿಯಾದ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮತ್ತು ದಾನಿ ಮೈಕಲ್ ಡಿಸೋಜ ಅವರ ಪ್ರತಿನಿಧಿ ಸ್ಟೀವನ್ ಪಿಂಟೊ ಜಂಟಿಯಾಗಿ ನಾಮಫಲಕವನ್ನು ಅನಾವರಣಗೊಳಿಸಿದರು. ಇದೇ ವೇಳೆ ಫೆರ್ಮಾಯಿ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಡಾ. ಮಾರ್ಕ್ ಕ್ಯಾಸ್ಟೆಲಿನೊ ಅವರು ಮುಖ್ಯ ಸಭಾಂಗಣದ ಆಶೀರ್ವಚನ ನೆರವೇರಿಸಿದರು.

ಸಮುದಾಯ ಸೇವೆಗೆ ಅತ್ಯುತ್ತಮ ಮಾದರಿ:

ಕಾರ್ಯಕ್ರಮದಲ್ಲಿ ಮಾತನಾಡಿದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಅವರು, “ಸಾಮಾನ್ಯ ಜನರ ಸಂಘಟನೆಯೊಂದು ಸ್ವತಂತ್ರವಾಗಿ ಇಷ್ಟು ದೊಡ್ಡ ಮಟ್ಟದ ಯೋಜನೆಯನ್ನು ಯಶಸ್ವಿಯಾಗಿ ಮುಗಿಸಿರುವುದು ಸಮಾಜಕ್ಕೆ ದೊಡ್ಡ ಮಾದರಿಯಾಗಿದೆ. ಇದು ಇತರೆ ಸಾಮಾಜಿಕ ಸಂಸ್ಥೆಗಳಿಗೂ ಪ್ರೇರಣೆ ನೀಡುವಂತಹ ಕಾರ್ಯ” ಎಂದು ಶ್ಲಾಘಿಸಿದರು.

ವಾಲ್ಟರ್ ನಂದಳಿಕೆ ಅವರು ಮಾತನಾಡಿ, ಟ್ರಸ್ಟ್‌ನ ಸಾಮಾಜಿಕ ಕಳಕಳಿ ಹಾಗೂ ದಾನಿಗಳಾದ ಮೈಕಲ್ ಡಿಸೋಜ ಕುಟುಂಬದ ನಿರಂತರ ಉದಾರತೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ತದನಂತರ ಮುಖ್ಯ ದಾನಿಗಳು ಅರ್ಹ 10 ಕುಟುಂಬಗಳಿಗೆ ಮನೆಗಳ ಕೀಲಿಗಳನ್ನು ಹಸ್ತಾಂತರಿಸಿದರು.

ವಿಧಾನ ಪರಿಷತ್ ಸದಸ್ಯರ ಭೇಟಿ:

ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರು ವಸತಿ ಯೋಜನೆಗೆ ಭೇಟಿ ನೀಡಿ ಪರಿಶೀಲಿಸಿದರು. ಟ್ರಸ್ಟ್‌ನ ಈ ಮಾನವೀಯ ಕಾರ್ಯವನ್ನು ಅಭಿನಂದಿಸಿದ ಅವರು, ಮುಂದಿನ ದಿನಗಳಲ್ಲೂ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಯುನೈಟೆಡ್ ಯಂಗ್‌ಸ್ಟರ್ಸ್ ಅಧ್ಯಕ್ಷ ಸಿ.ಜೆ. ಲೋಬೊ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಸಿಲ್ವೆಸ್ಟರ್ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸ್ಟೀವನ್ ಡಿಸೋಜ ಆಯವ್ಯಯ ವರದಿ ಮಂಡಿಸಿದರೆ, ಯೋಜನೆಯ ಅಧ್ಯಕ್ಷ ಅರುಣ್ ರೊಡ್ರಿಗಸ್ ಧನ್ಯವಾದ ಸಮರ್ಪಿಸಿದರು. ಲ್ಯಾನ್ಸಿ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.

You may also like

News

BPL ಕುಟುಂಬಗಳಿಗೆ ಉಚಿತ ರಕ್ತ: ಮುಂದಿನ ವರ್ಷದಿಂದ ಯೋಜನೆ ಜಾರಿ – ಸಿಎ ಶಾಂತಾರಾಮ ಶೆಟ್ಟಿ

ಜಿಲ್ಲೆಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ BPL ಕಾರ್ಡ್‌ದಾರರಿಗೆ ಉಚಿತವಾಗಿ ರಕ್ತ ಪೂರೈಸುವ ಯೋಜನೆಯನ್ನು ಮುಂದಿನ ವರ್ಷದಿಂದ ಜಾರಿಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾ
News

Free Speech and Hearing Camp inaugurated at Father Muller

A Free Speech and Hearing Camp, organized by Father Muller Medical College Hospital on the occasion of International Hearing-Impaired Week,

You cannot copy content of this page