July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ ಎರಡು ದಿನಗಳ ‘ಹಲಸು ಮಾವು ಮೇಳ’

ಇಂದು ಜೂನ್ 20 ಮತ್ತು 21 ರಂದು ಕದ್ರಿ ಕಂಬಳ ರಸ್ತೆಯಲ್ಲಿ ವೈಭವದ ‘ಹಲಸು ಮಾವು ಮೇಳ’

ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗದ ಜಂಟಿ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವೈವಿಧ್ಯಮಯ ‘ಹಲಸು ಮಾವು ಮೇಳ’ ಕ್ಕೆ ಚಾಲನೆ ದೊರೆತಿದೆ. ಮಂಗಳೂರಿನ ಕದ್ರಿ ಕಂಬಳ ರಸ್ತೆಯ ಮಲ್ಲಿಕಟ್ಟೆ ಬಳಿ ಇರುವ ‘ಮಂಜುಪ್ರಸಾದ’ ದಲ್ಲಿ ಜೂನ್ 20ರಂದು ಶನಿವಾರ ಮತ್ತು ಜೂನ್ 21ರಂದು ಭಾನುವಾರ ಈ ಮೇಳ ಆಯೋಜನೆಗೊಂಡಿದೆ. ದಿನಂಪ್ರತಿ ಬೆಳಿಗ್ಗೆ 7.00 ರಿಂದ ಸಂಜೆ 7.00 ರವರೆಗೆ ಗ್ರಾಹಕರಿಗೆ ವಿವಿಧ ತಳಿಯ ನೈಸರ್ಗಿಕ ಹಣ್ಣುಗಳನ್ನು ಖರೀದಿಸಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಮೇಳದ ಪ್ರಮುಖ ಆಕರ್ಷಣೆಗಳು ಮತ್ತು ಕಾರ್ಯಕ್ರಮಗಳು:

* ಉದ್ಘಾಟನಾ ಸಮಾರಂಭ: ಜೂನ್ 20 ರಂದು ಬೆಳಿಗ್ಗೆ 10.00 ಗಂಟೆಗೆ ಡಾ. ಜೀವರಾಜ್ ಸೊರಕೆ ಅವರಿಂದ ಮೇಳದ ಉದ್ಘಾಟನೆ ನೆರವೇರಲಿದ್ದು, ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಾರಾಟ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.

* ವಿಶೇಷ ಗಣ್ಯರ ಉಪಸ್ಥಿತಿ: ರಾಮಕೃಷ್ಣ ಮಠದ ಶ್ರೀ ಶ್ರೀ ಜಿತಕಾಮಾನಂದ ಸ್ವಾಮೀಜಿ ದಿವ್ಯ ಉಪಸ್ಥಿತಿ ವಹಿಸಲಿದ್ದು, ಡಾ. ಎಂ. ಬಿ. ಪುರಾಣಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

* ಆರೋಗ್ಯ ಜಾಗೃತಿ ಮತ್ತು ಯೋಗ: ‘ಯೋಗ – ಸಾವಯವ ಆಹಾರ – ಆರೋಗ್ಯ ಭಾಗ್ಯ’ ಎಂಬ ಪರಿಕಲ್ಪನೆಯೊಂದಿಗೆ ಜೂನ್ 21ರಂದು ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಆಯುರ್ವೇದ ತಜ್ಞರಾದ ಡಾ. ಎನ್.ಟಿ. ಅಂಜನ್ ಉಪಸ್ಥಿತರಿರಲಿದ್ದಾರೆ.

You may also like

News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ
News

Former CSST General Councillor Sr Josephette Passes Away

The Congregation of the Carmelite Sisters of Saint Teresa (CSST) is mourning the passing of Sr Josephette, former General Councillor

You cannot copy content of this page