October 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರು ವಂದನೀಯ ಆಲ್ಬರ್ಟ್ ಜಿ. ಮಿನೇಜಸ್ ನಿಧನ

ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರು 94 ವರ್ಷ ಪ್ರಾಯದ ವಂದನೀಯ ಆಲ್ಬರ್ಟ್ ಗ್ರೆಗರಿ ಮಿನೇಜಸ್ ಅವರು ಇಂದು ಆಗಸ್ಟ್ 21ರಂದು ಶುಕ್ರವಾರ ಜೆಪ್ಪುವಿನ ‘ಸೈಂಟ್ ಜುಜೆ ವಾಝ್ ಹೋಮ್’ನಲ್ಲಿ ನಿಧನರಾದರು.

1932 ಡಿಸೆಂಬರ್ 23ರಂದು ಅಗ್ರಾರ್‌ನಲ್ಲಿ ಪಿ. ಜೇಕಬ್ ಮೆನೇಜಸ್ ಮತ್ತು ಮೆರ್ಸಿನ್ ಡಿಸೋಜ ದಂಪತಿಯ ಮಗನಾಗಿ ಜನಿಸಿದ ಅವರು, 1959 ಡಿಸೆಂಬರ್ 5ರಂದು ಗುರುದೀಕ್ಷೆ ಪಡೆದಿದ್ದರು. ಸುಮಾರು ಏಳು ದಶಕಗಳ ಕಾಲ ಅವರು ಆಧ್ಯಾತ್ಮಿಕ ಮತ್ತು ಧರ್ಮಸಭೆಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ತಮ್ಮ ಸುದೀರ್ಘ ಸೇವಾವಧಿಯಲ್ಲಿ ಅವರು ಕಾರ್ಕಳದ ಸೈಂಟ್ ಲಾರೆನ್ಸ್ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ (1960), ಬೆಳ್ಳೆ, ಉದ್ಯಾವರ, ಕಿರೆಂ ಮತ್ತು ಬಿಜೈ ಚರ್ಚ್ ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ನಂತರ ನೆಲ್ಲಿಕಾರು (1969), ವಿಟ್ಲ (1976), ಅಜೇಕಾರು (1983), ಹೊಸಬೆಟ್ಟು (1985), ಕಣಜಾರು (1986), ಗಂಗೊಳ್ಳಿ (1993), ಪೇತ್ರಿ (1995), ಬಳ್ಕುಂಜೆ (1997) ಮತ್ತು ಕಳತ್ತೂರು (2000) ಚರ್ಚ್‌ಗಳಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಇದರೊಂದಿಗೆ ಮೇರಿ ಹಿಲ್‌ನಲ್ಲಿ ಚ್ಯಾಪ್ಲಿನ್ ಹಾಗೂ ಮುಕ್ಕಾದಲ್ಲಿ ಪರಿಪಾಲಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

2008 ರಲ್ಲಿ ನಿವೃತ್ತರಾದ ಅವರು ಸೈಂಟ್ ಆ್ಯಂಟನಿ ಆಶ್ರಮದ ಹಿರಿಯ ಧರ್ಮಗುರುಗಳ ನಿವಾಸದಲ್ಲಿ ಹಾಗೂ ಬಳಿಕ ಜೆಪ್ಪುವಿನ ಸೈಂಟ್ ಜುಜೆ ವಾಝ್ ಹೋಮ್ ನಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು.

ಅಂತಿಮ ಸಂಸ್ಕಾರ:

ಮೃತ ಧರ್ಮಗುರುವಿನ ಅಂತಿಮ ಸಂಸ್ಕಾರ ಮತ್ತು ಪ್ರಾರ್ಥನಾ ವಿಧಿಗಳು ಆಗಸ್ಟ್ 24ರಂದು ಸೋಮವಾರ ಮಧ್ಯಾಹ್ನ 3:30 ಕ್ಕೆ ವಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರಾರ್ ಚರ್ಚ್‌ನಲ್ಲಿ ನಡೆಯಲಿದೆ. ಮಂಗಳೂರು ಧರ್ಮಕ್ಷೇತ್ರವು ಅವರ ಸುದೀರ್ಘ ಸೇವೆಯನ್ನು ಸ್ಮರಿಸಿ, ಸಂತಾಪ ಸೂಚಿಸಿದೆ.

You may also like

News

ಆಲ್ಬರ್ಟ್ ರೇಗೊ ಸಾವು ನಿಗೂಢ – ಎರಡು ತಿಂಗಳ ಬಳಿಕ ಶವ ಹೊರತೆಗೆದು FSL ಪರೀಕ್ಷೆ!

ಮಂಗಳೂರಿನಲ್ಲಿ ಅಪರೂಪದ ಪ್ರಕರಣ – ಮಗಳ ವಿರುದ್ಧ ದೂರು, ದೆರೆಬೈಲ್ ಚರ್ಚ್ ಆವರಣದ ದಫನಭೂಮಿಯಲ್ಲಿ ಪೊಲೀಸ್ ತನಿಖೆ ಮಂಗಳೂರು : ಆಸ್ತಿಗಾಗಿ ಮಗಳೇ ತನ್ನ ತಂದೆಯನ್ನು ಕೊಂದು,
News

ನೈನಾಡಿನಲ್ಲಿ ಪಾದುವಾ ಕಾಲೇಜಿನ 7 ದಿನಗಳ NSS ಶಿಬಿರಕ್ಕೆ ಚಾಲನೆ

“ಸೇವೆಯ ಮೂಲಕ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಕಲಿಯುತ್ತಾರೆ” –  ಫಾದರ್ ಅರುಣ್ ವಿಲ್ಸನ್ ಲೋಬೊ ಪಾದುವಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ಏಳು

You cannot copy content of this page