September 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ.) ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ.) ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸುವ ಸಲುವಾಗಿ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಭೂಷಣ ಪ್ರಶಸ್ತಿ’, ‘ಸಹಕಾರ ರತ್ನ ಪ್ರಶಸ್ತಿ’, ‘ಸಮಾಜ ಸೇವಾ ರತ್ನ ಪ್ರಶಸ್ತಿ’, ‘ಶಿಕ್ಷಣ ರತ್ನ ಪ್ರಶಸ್ತಿ’, ‘ಕನ್ನಡ ರತ್ನ ಪ್ರಶಸ್ತಿ’ ಹಾಗೂ ‘ಕರ್ನಾಟಕ ರತ್ನ ಶ್ರೀ ಪ್ರಶಸ್ತಿ’ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಿಕ್ಷಣ, ನೃತ್ಯ, ಸಂಗೀತ, ಸಂಸ್ಕೃತಿ, ಕೃಷಿ, ಕೈಗಾರಿಕೆ, ಕಾನೂನು, ಪರಿಸರ, ಸಮಾಜಸೇವೆ, ಸಂಶೋಧನೆ, ವೈದ್ಯಕೀಯ, ಉದ್ಯಮ, ಕ್ರೀಡೆ, ರಂಗಭೂಮಿ, ಚಲನಚಿತ್ರ, ಕಿರುತೆರೆ, ಆಡಳಿತ, ಪತ್ರಿಕೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್ ಸೇವೆ, ಗುಡಿ ಕೈಗಾರಿಕೆ, ನಾಡು-ನುಡಿ, ಜನಪರ ಹೋರಾಟ, ಉದ್ಯೋಗ ಸೃಷ್ಟಿ, ಕೋಮು ಸಾಮರಸ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಹಾಗೂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹ ಸ್ತ್ರೀ-ಪುರುಷರು ಹಾಗೂ ಮಕ್ಕಳು ತಮ್ಮ ಬಯೋಡೇಟಾ, ಸಾಧನೆಯನ್ನು ಗುರುತಿಸುವ ಪ್ರಮಾಣಪತ್ರಗಳು ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಅರ್ಜಿಯನ್ನು 2026ರ ಅಕ್ಟೋಬರ್ 10ರೊಳಗೆ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು ಎಂದು ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ತಿಳಿಸಿದೆ.

ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ: ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ), #03, 4ನೇ ಮುಖ್ಯರಸ್ತೆ, ಬೈರಪ್ಪ ರೋಡ್, ಬಿ.ಡಬ್ಲ್ಯೂ.ಎಸ್.ಎಸ್.ಬಿ. ಕಚೇರಿ ಹತ್ತಿರ, ಅನ್ನಪೂರ್ಣೇಶ್ವರಿ ನಗರ, ಮಲ್ಲತಳ್ಳಿ, ಐ.ಟಿ.ಐ. ಎಂಪ್ಲಾಯೀಸ್ ಲೇಔಟ್, ಬೆಂಗಳೂರು–560091. ಸಂಪರ್ಕ: 9916690077 / 8123253337, ಇ-ಮೇಲ್: karnatakasamskruthikaacademy@gmail.com

ನಾಡು-ನುಡಿಗೆ ಸೇವೆ ಸಲ್ಲಿಸಿದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಈ ಅವಕಾಶವನ್ನು ಅರ್ಹ ಸಾಧಕರು ಸದುಪಯೋಗಪಡಿಸಿಕೊಳ್ಳುವಂತೆ ಅಕಾಡೆಮಿ ಮನವಿ ಮಾಡಿದೆ.

You may also like

News

ಬೆಂಗಳೂರಿನಲ್ಲಿ ಸೆಪ್ಟೆಂಬರ್ 26ರಿಂದ ‘ಕರ್ನಾಟಕ ಪರ್ವ–2026’ – 180ಕ್ಕೂ ಅಧಿಕ ಮಳಿಗೆ, ಕಲೆ–ಸಂಸ್ಕೃತಿ–ಸಂಗೀತದ ಮಹಾಸಂಗಮ

ಕರ್ನಾಟಕದ ವೈವಿಧ್ಯಮಯ ಕಲೆ, ಸಂಸ್ಕೃತಿ, ಪರಂಪರೆ, ಕರಕುಶಲ, ಆಹಾರ ಹಾಗೂ ಉದ್ಯಮಶೀಲತೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ‘ಕರ್ನಾಟಕ ಪರ್ವ–2026’ ಸೆಪ್ಟೆಂಬರ್ 26 ರಿಂದ 30ರ ತನಕ ಬೆಂಗಳೂರಿನ
News

ಯುವ ಕವಿ–ಕಥೆಗಾರ ಗ್ಲ್ಯಾನಿಶ್ ಜ್ಯೂಡ್ ಮಾರ್ಟಿಸ್‌ ಅವರಿಗೆ 2026ರ ಕಿಟಾಳ್ ಯುವ ಪುರಸ್ಕಾರ

ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ನೀಡಲಾಗುವ 2026ನೇ ಸಾಲಿನ ಲಿಯೋ ರೊಡ್ರಿಗಸ್ ದತ್ತಿ ಕಿಟಾಳ್ ಯುವ ಪುರಸ್ಕಾರಕ್ಕೆ ಯುವ ಕವಿ, ಕಥೆಗಾರ

You cannot copy content of this page