November 23, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಂತ ತೆರೆಜಾ ಚರ್ಚ್ ನಲ್ಲಿ ಕ್ರೈಸ್ಟ್ ದಿ ಕಿಂಗ್ ವಾರ್ಡಿನ ವಾರ್ಷಿಕೋತ್ಸವ ಸಂಭ್ರಮ

ವಲೇರಿಯನ್ ಹಾಗೂ ನಿಶಾ ಬ್ರಾಗ್ಸ್ ಅವರ ತೆರೆದ ಮೈದಾನದಲ್ಲಿ ಆಚರಿಸಲಾದ ಕಾರ್ಯಕ್ರಮ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆ ಸಂತ ತೆರೆಜಾ ಚರ್ಚ್ ಇದರ ಕ್ರೈಸ್ಟ್ ದಿ ಕಿಂಗ್ ವಾರ್ಡಿನ ವಾರ್ಷಿಕೋತ್ಸವವನ್ನು ವಾರ್ಡಿನ ಸದಸ್ಯರಾದ ವಲೇರಿಯನ್  ಹಾಗೂ ನಿಶಾ ಬ್ರಾಗ್ಸ್ ಅವರ ತೆರೆದ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಪವಿತ್ರ ಬಲಿಪೂಜೆ ಹಾಗೂ ಸಂಜೆ ಸಭಾ ಕಾರ್ಯಕ್ರಮ ನಡೆಯಿತು. ಚರ್ಚ್ ನ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಮಾತನಾಡಿ, ವಾರ್ಡಿನ ಸದಸ್ಯರ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ವಾರ್ಡ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರ ಸಹಕಾರ ಮತ್ತು ಸಂಘಟಿತ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಚರ್ಚ್ ನ ಸಹಾಯಕ ಧರ್ಮಗುರು ವಂದನೀಯ ಫಾದರ್ ಜೋಸೆಫ್ ಕುವೆಲ್ಲೊ, ಸ್ಥಳೀಯ ಕಾರ್ಪೊರೇಟರ್ ಭಾಸ್ಕರ್ ಕೆ., ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಶನ್ ಮೊಂತೇರೊ, ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಮೊಂತೇರೊ, ಸ್ಥಳೀಯ ಕಾನ್ವೆಂಟಿನ ಮುಖ್ಯಸ್ಥರಾದ ಭಗಿನಿ ಮೊಂತಿ ಹಾಗೂ  ಭಗಿನಿ ವಿಭಾ ಉಪಸ್ಥಿತರಿದ್ದರು.

ವಾರ್ಡಿನ ಮುಖ್ಯಸ್ಥೆ ಡೋನಾ ಡಿಸೋಜ ಸ್ವಾಗತಿಸಿದರು. ಪ್ರತಿನಿಧಿಗಳಾದ ಸುನೀತಾ ಫೆರ್ನಾಂಡಿಸ್ ಹಾಗೂ ರೀಟಾ ನೊರೊನ್ಹಾ ಸಹಕರಿಸಿದರು. ನಿಶಾ ಬ್ರಾಗ್ಸ್ ವರದಿ ವಾಚಿಸಿದರು. ರಾಯನ್ ಮಾರ್ಸೆಲ್ ನೊರೊನ್ಹಾ ಹಾಗೂ ಟೀನಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮನರಂಜನಾ ಕಾರ್ಯಕ್ರಮ ಹಾಗೂ ಸಹಭೋಜನ ನಡೆಯಿತು.

You may also like

News

ಕರಾಟೆಯಲ್ಲಿ ಕಿನ್ನಿಗೋಳಿ ಮೇರಿ ವೆಲ್ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಸಾಧನೆ – ರಾಷ್ಟ್ರಮಟ್ಟಕ್ಕೆ ಕವಿನ್ ಎಮ್. ಸಾಲ್ಯಾನ್ ಆಯ್ಕೆ

ಈತನ್ ನೇವಿನ್ ಮಥಾಯಸ್‌ ಅವರಿಗೆ ತೃತೀಯ ಸ್ಥಾನ ಕಿನ್ನಿಗೋಳಿ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ವತಿಯಿಂದ ಬೆಂಗಳೂರಿನ ದೇವನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಿನ್ನಿಗೋಳಿಯ
News

ನಿವೃತ್ತ ಶಿಕ್ಷಕಿ ಡಯಾನ ಡಿಸಿಲ್ವ ಹೃದಯಾಘಾತದಿಂದ ನಿಧನ

33 ವರ್ಷಗಳ ಶಿಕ್ಷಕ ಸೇವೆಯ ಬಳಿಕ ಬದುಕಿನ ಪಯಣಕ್ಕೆ ವಿದಾಯ ಕಟಪಾಡಿ: ಪತಿಯೊಂದಿಗೆ ಚಹಾ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ನಿವೃತ್ತ ಶಿಕ್ಷಕಿಯೊಬ್ಬರು ಮೃತಪಟ್ಟ

You cannot copy content of this page