July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬ್ಯಾಂಕಿನೊಳಗಿಂದಲೇ ಲಕ್ಷಾಂತರ ರೂಪಾಯಿ ನಗದು ಇದ್ದ ಬ್ಯಾಗ್ ಕಳವು

ಬಂಟ್ವಾಳ : ನಿವೃತ್ತ ಸೈನಿಕ ರೋರ್ವರು ಬಿ. ಸಿ. ರೋಡ್  ರಾಷ್ಟ್ರೀಕೃತ ಬ್ಯಾಂಕಿನಿಂದ ಹಣವನ್ನು ನಗದೀಕರಿಸಿದ ಕೆಲವೇ ಸಮಯದಲ್ಲಿ ಲಕ್ಷಾಂತರ ರೂಪಾಯಿ ನಗದು ಇದ್ದ ಬ್ಯಾಗ್ ಕಳವಾದ ಘಟನೆ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ತಾಲೂಕಿನ ರೈಮಂಡ್ ಲೋಬೋ ನಗರದ ಗ್ಲಾಡಿರಾ ನಿವಾಸಿಯಾಗಿರುವ ಅಂಬ್ರೋಸ್ ಡಿಸೋಜ ಅವರ 1.30 ಲಕ್ಷ ರೂಪಾಯಿ ಎಸ್.ಬಿ.ಐ. ಬ್ಯಾಂಕ್ ಬಿ. ಸಿ. ರೋಡ್ ಶಾಖೆಯಿಂದ  ಕಳವಾಗಿದೆ.

ಅಂಬ್ರೋಸ್ ಅವರು ನಿವೃತ್ತ ಸೈನಿಕರಾಗಿದ್ದು, ಅವರು ಬರುವ ಪೆನ್ಸನ್ ಹಣವನ್ನು ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಅವರ ಖಾತೆಯಿಂದ ತೆಗೆಯುತ್ತಿದ್ದರು. 50 ಸಾವಿರ ಹಣವನ್ನು ಬ್ಯಾಗ್‌ ನಲ್ಲಿ ಇರಿಸಿಕೊಂಡು ಬಿ. ಸಿ. ರೋಡ್ ಎಸ್.ಬಿ.ಐ. ಬ್ಯಾಂಕ್ ಗೆ ಬಂದಿದ್ದರು. ಇಲ್ಲಿನ ಇವರ ಖಾತೆಯಿಂದ 80 ಸಾವಿರ ರೂಪಾಯಿ ನಗದೀಕರಿಸಿ, ಒಟ್ಟು 1,30,000 ಹಣವನ್ನು ಒಂದೇ ಬ್ಯಾಗಲ್ಲಿ ಹಾಕಿ ಬ್ಯಾಂಕ್ ನ ಟೇಬಲ್ ಮೇಲೆ ಇಟ್ಟು, ಪಾಸ್ ಬುಕ್ ಎಂಟ್ರಿ ಮಾಡಲು ಕೌಂಟರ್ ಬಳಿ ಹೋಗಿದ್ದರು. ಎಂಟ್ರಿ ಮಾಡಿಸಿ ವಾಪಸು ಟೇಬಲ್ ಕಡೆ ಬಂದಾಗ ಬ್ಯಾಗ್ ಕಳವಾಗಿತ್ತು.

ಕಳವಾದ ಬ್ಯಾಗ್‌ ಬಿ. ಸಿ. ರೋಡ್ ಸಮೀಪದ ಕೈಕುಂಜೆ ರಸ್ತೆಯಲ್ಲಿ ಸಿಕ್ಕಿದ್ದು, ಅದರಲ್ಲಿ ದಾಖಲೆ ಪತ್ರಗಳು ಮಾತ್ರ ಇದ್ದು ನಗದು ಲಪಟಾಯಿಸಿದ್ದಾರೆ ಎಂದು ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

You may also like

News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ
News

Former CSST General Councillor Sr Josephette Passes Away

The Congregation of the Carmelite Sisters of Saint Teresa (CSST) is mourning the passing of Sr Josephette, former General Councillor

You cannot copy content of this page