April 21, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
Uncategorized

ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹದ ನೋಂದಣಿ ಕಛೇರಿ ಉದ್ಘಾಟನೆ

ಬೆಳ್ತಂಗಡಿ : ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 3ರಂದು ಶನಿವಾರ ಸಂಜೆ ಗಂಟೆ 6.48 ಕ್ಕೆ ಗೋಧೋಳಿ ಲಗ್ನ ಸುಮೂಹೂರ್ತದಲ್ಲಿ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, ವಿವಾಹ ನೋಂದಣಿ ಕಛೇರಿಯನ್ನು ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಫೆಬ್ರವರಿ 16ರಂದು ಎಸ್.ಡಿ. ಎಂ. ಧರ್ಮೋತ್ಥಾನ ಟ್ರಸ್ಟ್ ನ ಕಾರ್ಯದರ್ಶಿ ಎ.ವಿ. ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದೇವಳ ಪಾರುಪತ್ಯಗಾರ್ ಶ್ರೀ ಲಕ್ಷ್ಮೀ ನಾರಾಯಣ ರಾವ್, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಸಾದ್, ನಿವೃತ್ತ ಮುಖ್ಯೋಪಾಧ್ಯಾಯ ಧರ್ಣಪ್ಪ, ಸಂತೋಷ್ ಗೌಡ, ಶಿವರಾಮ್, ಪವಿತ್ರ, ಭವಾನಿ, ಮಂಜುಳಾ ಉಪಸ್ಥಿತರಿದ್ದರು.

ಸಾಮೂಹಿಕ ವಿವಾಹದ ಎಲ್ಲಾ ವೆಚ್ಚವನ್ನು ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ನಿರ್ವಹಿಸಲಿದ್ದು, ಈ ಸಮಾರಂಭದಲ್ಲಿ ಮದುವೆಯಾಗಲಿಚ್ಚಿಸುವವರು ಏಪ್ರಿಲ್ 25ರೊಳಗೆ ಹೆಸರು ನೋಂದಾಯಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 0825626644, 9663464648, 8147263422

You may also like

Uncategorized

ಪಿ.ಯು.ಸಿ. ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ ಮತ್ತು ಮಗಳು  

ಕೆಲಸ ಹೋಗಬಹುದು ಎಂಬ ಹೆದರಿಕೆಯಿಂದ ಪರೀಕ್ಷೆ ಬರೆದೆ – ತಾಯಿ ರವಿಕಲಾ ಬಂಟ್ವಾಳದ ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ತಾಯಿ ಮತ್ತು ಮಗಳು ಪಿಯುಸಿ ಪರೀಕ್ಷೆ ಬರೆದು

You cannot copy content of this page