November 8, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
Uncategorized

ಹಿರಿಯ ಕೊಂಕಣಿ ಸಾಹಿತಿ ಗ್ಲ್ಯಾಡಿಸ್ ರೇಗೋ ನಿಧನ

ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಗ್ಲಾಡಿಸ್ ರೇಗೋ ಎಂದೇ ಜನಪ್ರಿಯರಾಗಿದ್ದ ಸಿಂಪ್ರೋಜಾ ಫಿಲೋಮಿನಾ ಗ್ಲ್ಯಾಡಿಸ್ ರೇಗೋ ಅವರು ಜುಲಾಯ್ 21ರಂದು ನಿಧನರಾಗಿದ್ದಾರೆ.

ಮಂಗಳೂರಿನ ಬೆಂದೂರಿನಲ್ಲಿ 1945ರಲ್ಲಿ ಜನಿಸಿದ ಗ್ಲ್ಯಾಡಿಸ್ ರೇಗೋರವರು ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡಿರುವ ಬರಹಗಾರ್ತಿಯಾಗಿದ್ದರು. ಅವರು ಕೊಂಕಣಿಯಲ್ಲಿ ನಾಲ್ಕು ಸಣ್ಣ ಕಥಾ ಸಂಕಲನಗಳು, ಜಾನಪದದ ಬಗ್ಗೆ ಆರು ಕೃತಿಗಳು, ಮತ್ತು ಎರಡು ಕಥಾ ಸಂಕಲನಗಳನ್ನು ಬರೆದಿದ್ದಾರೆ. ಸಣ್ಣ ಕಥೆಗಳು, ಜಾನಪದ ಸಾಹಿತ್ಯ, ಜೀವನಚರಿತ್ರೆ, ಮತ್ತು ಸಂಶೋಧನೆ ಒಳಗೊಂಡಂತೆ 27 ಪುಸ್ತಕಗಳನ್ನು ಅವರು ಬರೆದಿದ್ದಾರೆ.

ಅವರು ತಮ್ಮದೇ ಆದ ‘ಆಕಾಶ್ ಪ್ರಕಾಶನ್’ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಕೊಂಕಣಿ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಿದರು. ತಮ್ಮ ಸಾಹಿತ್ಯಿಕ ಸಾಧನೆಗಳಲ್ಲದೆ, ಅವರು ಅಂಚೆ ಚೀಟಿಗಳು, ನಾಣ್ಯಗಳು, ಕರೆನ್ಸಿಗಳು ಮತ್ತು ಪೋಸ್ಟ್‌ಕಾರ್ಡ್‌ಗಳ ಆಸಕ್ತ ಸಂಗ್ರಾಹಕರಾಗಿದ್ದರು. ಈ ಹವ್ಯಾಸಗಳು ಅವರಿಗೆ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿಕೊಟ್ಟಿದ್ದವು. ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಅವರಿಗೆ ದಾಯ್ಜಿ ದುಬೈ ಹಾಗೂ ಸಂದೇಶ ಪ್ರಶಸ್ತಿ ಲಭಿಸಿವೆ. ಅವರು ಹಲವಾರು ಕೊಂಕಣಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಅವರು ಸೈಂಟ್ ಅಲೋಶಿಯಸ್ ಕೊಂಕಣಿ ಸಂಸ್ಥೆಗೆ ತಮ್ಮ ಸೇವೆ ಸಲ್ಲಿಸಿದ್ದಾರೆ.

You may also like

Uncategorized

ಹಸಿರು ಕನಸಿನ ಪ್ರಕೃತಿಗಾಗಿ ದೇಲಂತಬೆಟ್ಟು ಯುವ ಹೃದಯಗಳ ಹಾದಿ

ಯುವಜನರ ಹಸಿರು ಚಳವಳಿ — “ಗ್ರೀನ್ ಹಾರ್ಟ್ 2025” ಕಾರ್ಯಕ್ರಮದೊಂದಿಗೆ ಪರಿಸರ ಸಂರಕ್ಷಣೆಗೆ ಬದ್ಧತೆ ಗಿಡ ನೆಟ್ಟ ಕೈಗಳು – ಭೂಮಿಗೆ ಜೀವ ತುಂಬಿದ ಹೃದಯಗಳು ಭಾರತೀಯ
Uncategorized

ಪಿ.ಯು.ಸಿ. ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ ಮತ್ತು ಮಗಳು  

ಕೆಲಸ ಹೋಗಬಹುದು ಎಂಬ ಹೆದರಿಕೆಯಿಂದ ಪರೀಕ್ಷೆ ಬರೆದೆ – ತಾಯಿ ರವಿಕಲಾ ಬಂಟ್ವಾಳದ ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ತಾಯಿ ಮತ್ತು ಮಗಳು ಪಿಯುಸಿ ಪರೀಕ್ಷೆ ಬರೆದು

You cannot copy content of this page