August 12, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

WIM ಬಂಟ್ವಾಳ ಕ್ಷೇತ್ರ ಸಮಿತಿಗೆ ಝುಬೈದ ಬಂಟ್ವಾಳ ಸಾರಥ್ಯ – ಝೈನಬ ಕಾವಲ್ ಕಟ್ಟೆ ಕಾರ್ಯದರ್ಶಿ

ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಅಸೆಂಬ್ಲಿ ಪ್ರತಿನಿಧಿ ಸಭೆಯು ಪಾಣೆಮಂಗಳೂರಿನ ಎಚ್.ಎಚ್. ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಸಭೆಯಲ್ಲಿ 2026–29ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಮಿತಿಯ ಅಧ್ಯಕ್ಷೆ ನುಸೈಬಾ ಕಲ್ಲಡ್ಕ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕಳೆದ ಎರಡು ವರ್ಷಗಳ ಚಟುವಟಿಕೆಗಳ ವರದಿ ಹಾಗೂ ಲೆಕ್ಕಪತ್ರ ವರದಿಯನ್ನು ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಝುಬೈದ ಬಂಟ್ವಾಳ ಹಾಗೂ ರುಫೈದಾ ಮಂಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಅವರು ನಾಯಕತ್ವದ ಕುರಿತು ತರಬೇತಿ ನೀಡಿದರು. 2026–29ನೇ ಸಾಲಿನ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಝಹನ ಬಂಟ್ವಾಳ ನಡೆಸಿಕೊಟ್ಟರು.

ನೂತನ ಸಮಿತಿಯ ಅಧ್ಯಕ್ಷೆಯಾಗಿ ಝುಬೈದ ಬಂಟ್ವಾಳ, ಉಪಾಧ್ಯಕ್ಷೆಯಾಗಿ ದುಲೈಕ ಪರ್ಲಿಯ, ಕಾರ್ಯದರ್ಶಿಯಾಗಿ ಝೈನಬ ಕಾವಲ್ ಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಸಾಜಿದಾ ರಹೀಮ್ ಹಾಗೂ ಕೋಶಾಧಿಕಾರಿಯಾಗಿ ಪೌಝಿಯ ಆಲಾಡಿ ಆಯ್ಕೆಯಾದರು.

ಸಮಿತಿ ಸದಸ್ಯರಾಗಿ ಮಮ್ತಾಝ್ ತಲಪಾಡಿ, ಸಂಶಾದ್ ಪರ್ಲಿಯಾ, ರಶೀನ ಬಂಟ್ವಾಳ ಹಾಗೂ ಸಫಾ ಸಲ್ಮಾ ಆಯ್ಕೆಯಾಗಿದ್ದಾರೆ. ಕ್ಷೇತ್ರ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಬ್ಲಾಕ್ ಸಮಿತಿ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಝುಬೈದಾ ಸ್ವಾಗತಿಸಿದರು. ಸಾಜಿದಾ ರಹೀಮ್ ವಂದಿಸಿದರು. ಶಹನಾಝ್ ಕಾರ್ಯಕ್ರಮ ನಿರೂಪಿಸಿದರು.

You may also like

News

ಮಾಣಿ-ಸಜಿಪನಡು ನೂತನ ಪೊಲೀಸ್ ಠಾಣೆಗಳಿಗೆ 17 ಸಿಬ್ಬಂದಿ ಮಂಜೂರು – ತಾತ್ಕಾಲಿಕ ಕಟ್ಟಡದ ಹುಡುಕಾಟ

ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಸ್ತಾವಿಸಲಾಗಿದ್ದ ಮಾಣಿ ಹಾಗೂ ಸಜಿಪನಡು ನೂತನ ಪೊಲೀಸ್ ಠಾಣೆಗಳಿಗೆ ತಲಾ 17 ಸಿಬ್ಬಂದಿ ಹುದ್ದೆಗಳ
News

ಪಾಲ್ದಾನೆ ಚರ್ಚ್ ವ್ಯಾಪ್ತಿಯ ಕಡುಪು ಪಂಜಿರೆಲ್‌ ನಿವಾಸಿ ಆಲಿಯಾ ಫೆರ್ನಾಂಡಿಸ್ ನಿಧನ

ಮಂಗಳೂರಿನ ಕಡುಪು ಪಂಜಿರೆಲ್ ನಿವಾಸಿ ಅಲ್ಫೋನ್ಸ್ ಫೆರ್ನಾಂಡಿಸ್ ಮತ್ತು ರೆನ್ನಿ ಮೊಂತೇರೊ ದಂಪತಿಯ ಪುತ್ರಿ 38 ವರ್ಷ ಪ್ರಾಯದ ಆಲಿಯಾ ಫೆರ್ನಾಂಡಿಸ್ ಅವರು ಇಂದು ಆಗಸ್ಟ್ 11ರಂದು

You cannot copy content of this page