ಬಂಟ್ವಾಳದಲ್ಲಿ ಗ್ರಾಮಾಂತರ ಪೊಲೀಸರ ಬೇಟೆ – ಲಕ್ಷಾಂತರ ಮೌಲ್ಯದ MDMA, ಗಾಂಜಾ ಜಪ್ತಿ
ಮೂವರು ಖತರ್ನಾಕ್ ಪೆಡ್ಲರ್‌ಗಳು ವಶಕ್ಕೆ!

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ನಿಷೇಧಿತ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 12ರಂದು ಬುಧವಾರ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಆಲಂಪುರಿ ಸಾಲು ಮರದ ತಿಮ್ಮಕ್ಕ ರಾಷ್ಟ್ರೀಯ ಉದ್ಯಾನವನದ ರಸ್ತೆ ಬಳಿ ರಹಸ್ಯವಾಗಿ ನಡೆಯುತ್ತಿದ್ದ ಡ್ರಗ್ಸ್ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.


ವಶಪಡಿಸಿಕೊಂಡ ಸ್ವತ್ತುಗಳು:
* MDMA (ಮಾದಕ ದ್ರವ್ಯ): 22.57 ಗ್ರಾಂ (ಅಂದಾಜು ಮೌಲ್ಯ ₹2,25,000/-)
* ಗಾಂಜಾ: 30.34 ಗ್ರಾಂ
* ಸಾಗಾಟಕ್ಕೆ ಬಳಸಿದ ವಾಹನ: ₹2 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು
* ಇತರ ಸಾಮಗ್ರಿಗಳು: 5 ಮೊಬೈಲ್ ಫೋನ್‌ಗಳು
* ಒಟ್ಟು ಜಪ್ತಿಯಾದ ಸ್ವತ್ತುಗಳ ಮೌಲ್ಯ: ₹4,90,000/- (ರೂಪಾಯಿ ನಾಲ್ಕು ಲಕ್ಷದ ತೊಂಬತ್ತು ಸಾವಿರ)

ಬಂಧಿತ ಆರೋಪಿಗಳ ವಿವರ:
* ನಾಶೀರ್ ಹುಸೇನ್ (37) – ವಾಸ: ವಲಚ್ಚಿಲ್, ಅಡ್ಯಾರು ಗ್ರಾಮ, ಮಂಗಳೂರು ತಾಲೂಕು.
* ಮಹಮ್ಮದ್ ಜುನೈದ್ (38) – ವಾಸ: ಕಲ್ಲಡ್ಕ ಪ್ರಾಥಮಿಕ ಶಾಲೆ ಬಳಿ, ಗೋಳ್ತಮಜಲು ಗ್ರಾಮ, ಬಂಟ್ವಾಳ ತಾಲೂಕು.
* ಮೊಹಮ್ಮದ್ ಅಫ್ರೀದಿ (24) – ವಾಸ: ವಿಶ್ವಾಸ್ ಲೇಔಟ್, ಕಂಕನಾಡಿ, ಮಂಗಳೂರು.

ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ:
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರಡ್ಡಿ ಅವರ ಮಾರ್ಗದರ್ಶನದಲ್ಲಿ ಈ ಸಫಲ ಕಾರ್ಯಾಚರಣೆ ನಡೆದಿದೆ.
ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ (ASP) ಯಶ್ ಕುಮಾರ್ ಶರ್ಮಾ ಅವರ ನೇತೃತ್ವದಲ್ಲಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಕೆ.ವಿ., PSI ರನ್ನ ಗೌಡ ಎಸ್. ಪಾಟೀಲ್, ಪ್ರೊಬೆಷನರಿ PSI ಗಳಾದ ಶಿವರಾಮ್, ಫಕೀರಪ್ಪ ಹಾಗೂ ಸಿಬ್ಬಂದಿಗಳಾದ ಉದಯ ರೈ, ರಾಧಾಕೃಷ್ಣ ಕೆ., ಪ್ರವೀಣ್ ರೈ, ಪ್ರಶಾಂತ್, ಲೋಕೇಶ್, ವಿವೇಕ್ ರೈ, ಕುಮಾರ್, ಬಸವರಾಜ್, ಶ್ರೀಧರ್ ಮತ್ತು ಧನ್ಯಶ್ರೀ ಅವರು ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಹಾಗೂ ಸಂಪತ್ ಅವರು ತಾಂತ್ರಿಕ ಸಹಾಯ ಒದಗಿಸಿದ್ದು, ಸಮಯೋಚಿತವಾಗಿ ಕಾರ್ಯನಿರ್ವಹಿಸಿದ ಇಡೀ ತಂಡದ ಭರ್ಜರಿ ಕಾರ್ಯಾಚರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



