September 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೆಪ್ಟೆಂಬರ್ 14ರಿಂದ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ 9 ದಿನಗಳ ನೊವೇನಾ – ಸೆಪ್ಟೆಂಬರ್ 23ರಂದು ವಾರ್ಷಿಕ ಮಹೋತ್ಸವ

ಸಿಟಿ ವಲಯದ ಶ್ರೇಷ್ಠಗುರು ಫಾದರ್ ರಿಚಾರ್ಡ್ ಕುವೆಲ್ಲೊ ಅವರಿಂದ ಧ್ವಜಾರೋಹಣ

ಮಂಗಳೂರಿನ ಜೈಲ್ ರಸ್ತೆಯ ಕಪುಚಿನ್ ಧರ್ಮಗುರುಗಳ ಸೈಂಟ್ ಆನ್ಸ್ ಫ್ರೈರಿ ಆವರಣದಲ್ಲಿರುವ ಸೈಂಟ್ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವವು ಭಕ್ತಿಭಾವ ಹಾಗೂ ಆಧ್ಯಾತ್ಮಿಕ ಸಂಭ್ರಮದಿಂದ ನಡೆಯಲಿದೆ.

ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 14ರಿಂದ 22ರವರೆಗೆ ಒಂಬತ್ತು ದಿನಗಳ ನೊವೇನಾ ಪ್ರಾರ್ಥನೆ ಪ್ರತಿದಿನ ಸಂಜೆ ನಡೆಯಲಿದೆ. ಪ್ರತಿದಿನ ಸಂಜೆ 5.30ಕ್ಕೆ ಪರಮ ಪ್ರಸಾದದ ಆರಾಧನೆ ಹಾಗೂ ಸಂಜೆ 6 ಗಂಟೆಗೆ ಬಲಿಪೂಜೆ ಮತ್ತು ನೊವೇನಾ ಪ್ರಾರ್ಥನೆ ನೆರವೇರಲಿದೆ.

ಸೆಪ್ಟೆಂಬರ್ 14ರಂದು ಸಂಜೆ 5.30ಕ್ಕೆ ಮಂಗಳೂರು ಧರ್ಮಕ್ಷೇತ್ರದ ಸಿಟಿ ವಲಯದ ಪ್ರಧಾನ ಗುರು ಹಾಗೂ ಪಾಲ್ದನೆ ಚರ್ಚ್‌ನ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಧ್ವಜಾರೋಹಣ ನೆರವೇರಿಸಿ ನೊವೇನಾ ಪ್ರಾರ್ಥನೆಗೆ ಚಾಲನೆ ನೀಡಲಿದ್ದು, ಬಳಿಕ ಬಲಿಪೂಜೆಯ ನೇತೃತ್ವ ವಹಿಸಲಿದ್ದಾರೆ.

2026 ಸೆಪ್ಟೆಂಬರ್ 23ರಂದು ಸೈಂಟ್ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ನಡೆಯಲಿದೆ. “ದೇವರ ಮಕ್ಕಳಾಗಿರುವ ನಾವು ಅವರ ರಾಜ್ಯವನ್ನು ಅರಸುತ್ತಾ, ಪಾದ್ರೆ ಪಿಯೊ ಅವರ ಜೀವನದ ಆದರ್ಶವನ್ನು ಅನುಸರಿಸೋಣ” ಎಂಬುದು ಈ ವರ್ಷದ ಮಹೋತ್ಸವದ ವಿಷಯ ಹಾಗೂ ಸಂದೇಶವಾಗಿದೆ.

ಪಾದ್ರೆ ಪಿಯೊ ಅವರ ಆಧ್ಯಾತ್ಮಿಕ ಆದರ್ಶ ಹಾಗೂ ಪ್ರಾರ್ಥನಾ ಜೀವನದಿಂದ ಸ್ಫೂರ್ತಿ ಪಡೆದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೊವೇನಾ ಪ್ರಾರ್ಥನೆ ಹಾಗೂ ವಾರ್ಷಿಕ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆಯುವಂತೆ ಪುಣ್ಯ ಕ್ಷೇತ್ರದ ವತಿಯಿಂದ ವಿನಂತಿಸಲಾಗಿದೆ.

You may also like

News

ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬೈಂದೂರಿನ ಆಶಾ ವೀಣಾ ಡಯಾಸ್‌ ಅವರಿಗೆ ದ್ವಿತೀಯ ಸ್ಥಾನ

ಕಿರಣ್ ಬೇಡಿ ಅವರ ಕುರಿತು 5 ನಿಮಿಷಗಳ ಭಾಷಣ – ಪ್ರತಿಭೆಗೆ ರಾಜ್ಯಮಟ್ಟದಲ್ಲಿ ಮೆಚ್ಚುಗೆ ಕರ್ನಾಟಕ ರಾಜ್ಯದ ಸಮಾಜ ವಿಜ್ಞಾನ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ
News

“ಕಾಂಗ್ರೆಸ್‌ಗೆ ಕ್ರೈಸ್ತರು ಕೇವಲ ವೋಟ್ ಬ್ಯಾಂಕ್?” : 35 ಜಿಲ್ಲಾ ಅಧ್ಯಕ್ಷರ ಪಟ್ಟಿಯಲ್ಲೂ ಸ್ಥಾನವಿಲ್ಲ – ಆಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಮಂಗಳೂರು: ಜಾತ್ಯಾತೀತ ಸಿದ್ಧಾಂತವನ್ನು ಪ್ರತಿಪಾದಿಸುವ ಕಾಂಗ್ರೆಸ್ ಪಕ್ಷವು ಗ್ರಾಮ ಪಂಚಾಯತ್‌ನಿಂದ ಜಿಲ್ಲಾ ಪಂಚಾಯತ್‌, ವಿಧಾನ ಪರಿಷತ್‌, ವಿಧಾನಸಭೆ ಹಾಗೂ ಲೋಕಸಭೆವರೆಗೆ ವಿವಿಧ ಹಂತಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವಾಗ

You cannot copy content of this page