November 23, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರ್ತವ್ಯದಲ್ಲೇ ವಿದ್ಯುತ್ ಸ್ಪರ್ಶ – ಬಂಟ್ವಾಳದ ಕೆದಿಲದಲ್ಲಿ ಲೈನ್‌ಮ್ಯಾನ್ ರವಿ ದುರ್ಮರಣ

ಬಂಟ್ವಾಳ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಲೈನ್‌ಮ್ಯಾನ್‌ವೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ನಡೆದಿದೆ.

ಮೃತರನ್ನು ಕೆದಿಲ ಪಾಟ್ರಕೋಡಿ–ಮಿತ್ತೂರು ಗಡಿಯಾರ ನಿವಾಸಿ ರವಿ ಎಂದು ಗುರುತಿಸಲಾಗಿದೆ. ಅವರು ಕೆದಿಲದಲ್ಲಿ ಲೈನ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಅಕ್ಟೋಬರ್ 3ರಂದು ಶನಿವಾರ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ರವಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ನಿಖರ ಕಾರಣ ಹಾಗೂ ಇತರ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

ರವಿ ಅವರು ಗ್ರಾಮದಲ್ಲಿ ಜನಪರ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಕರೆ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸಲು ಮುಂದಾಗುತ್ತಿದ್ದರು. ಈ ಮೂಲಕ ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು.

ಕರ್ತವ್ಯದಲ್ಲಿದ್ದಾಗಲೇ ಸಂಭವಿಸಿದ ಅವರ ಅಕಾಲಿಕ ಸಾವು ಗ್ರಾಮಸ್ಥರಿಗೆ ಆಘಾತವನ್ನುಂಟು ಮಾಡಿದ್ದು, ಕುಟುಂಬ ಹಾಗೂ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

You may also like

News

ಕರಾಟೆಯಲ್ಲಿ ಕಿನ್ನಿಗೋಳಿ ಮೇರಿ ವೆಲ್ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಸಾಧನೆ – ರಾಷ್ಟ್ರಮಟ್ಟಕ್ಕೆ ಕವಿನ್ ಎಮ್. ಸಾಲ್ಯಾನ್ ಆಯ್ಕೆ

ಈತನ್ ನೇವಿನ್ ಮಥಾಯಸ್‌ ಅವರಿಗೆ ತೃತೀಯ ಸ್ಥಾನ ಕಿನ್ನಿಗೋಳಿ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ವತಿಯಿಂದ ಬೆಂಗಳೂರಿನ ದೇವನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಿನ್ನಿಗೋಳಿಯ
News

ನಿವೃತ್ತ ಶಿಕ್ಷಕಿ ಡಯಾನ ಡಿಸಿಲ್ವ ಹೃದಯಾಘಾತದಿಂದ ನಿಧನ

33 ವರ್ಷಗಳ ಶಿಕ್ಷಕ ಸೇವೆಯ ಬಳಿಕ ಬದುಕಿನ ಪಯಣಕ್ಕೆ ವಿದಾಯ ಕಟಪಾಡಿ: ಪತಿಯೊಂದಿಗೆ ಚಹಾ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ನಿವೃತ್ತ ಶಿಕ್ಷಕಿಯೊಬ್ಬರು ಮೃತಪಟ್ಟ

You cannot copy content of this page