October 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಭಾರೀ ಮಳೆಗೆ ಪುತ್ತೂರು ನೂತನ ನ್ಯಾಯಾಲಯದ ಆವರಣ ಗೋಡೆ ಕುಸಿತ

ಪುತ್ತೂರು ತಾಲೂಕಿನ ಹಲವೆಡೆ ಸುರಿದ ಭಾರೀ ಮಳೆಯಿಂದಾಗಿ ಪುತ್ತೂರು ನಗರದಲ್ಲಿ ಇತ್ತೀಚೆಗಷ್ಟೇ ಕಾರ್ಯಾರಂಭಿಸಿರುವ ನೂತನ ನ್ಯಾಯಾಲಯದ ಆವರಣ ಗೋಡೆ ಕುಸಿದು ಬಿದ್ದಿದೆ.

ನ್ಯಾಯಾಲಯದ ಸಂಪರ್ಕ ರಸ್ತೆಯ ಪಕ್ಕದಲ್ಲಿದ್ದ ಆವರಣ ಗೋಡೆ ಧಾರಾಕಾರ ಮಳೆಯಿಂದ ಮಣ್ಣು ಸಡಿಲಗೊಂಡ ಪರಿಣಾಮ ಸಂಪೂರ್ಣವಾಗಿ ಕುಸಿದಿದೆ ಎನ್ನಲಾಗಿದೆ. ಘಟನೆಯಿಂದ ನ್ಯಾಯಾಲಯದ ಆವರಣಕ್ಕೆ ಹಾನಿಯಾಗಿದ್ದು, ಸಂಪರ್ಕ ರಸ್ತೆಯೂ ಹಾನಿಗೊಳಗಾಗುವ ಆತಂಕ ಎದುರಾಗಿದೆ.

ಗೋಡೆ ಕುಸಿದಿರುವುದರಿಂದ ಮಣ್ಣು ಹಾಗೂ ಅವಶೇಷಗಳು ರಸ್ತೆಯಂಚಿಗೆ ಬಿದ್ದಿದ್ದು, ವಾಹನ ಸಂಚಾರಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲೂ ಮಳೆ ಮುಂದುವರಿದರೆ ಮತ್ತಷ್ಟು ಮಣ್ಣು ಕುಸಿಯುವ ಆತಂಕವೂ ಸ್ಥಳೀಯರಲ್ಲಿ ಮೂಡಿದೆ.

ಘಟನೆಯ ಮಾಹಿತಿ ತಿಳಿದು ಸ್ಥಳೀಯಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಹಾನಿ ಹಾಗೂ ಸಂಭವನೀಯ ಅವಘಡಗಳನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

You may also like

News

ಮೂರು ದಶಕಗಳ ಪೊಲೀಸ್ ಸೇವೆ ಹಾಗೂ ಸ್ನೇಹ ಮತ್ತು ಸವಿನೆನಪುಗಳ ಸಂಗಮ: ‘ಮುತ್ತಿನ ಮಹೋತ್ಸವದ ಸ್ನೇಹ ಸಮ್ಮಿಲನ–2026’ ಸಂಭ್ರಮ

ಗುರುಗಳಿಗೆ ಗೌರವ, ಸಾಧಕರಿಗೆ ಸನ್ಮಾನ, ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ; ಕುಟುಂಬ ಸಮೇತರಾಗಿ ಒಂದಾದ 1996ನೇ ಸಾಲಿನ ಪೊಲೀಸ್ ಸಿಬ್ಬಂದಿಗಳು ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಸೇರಿದ 1996ನೇ ಸಾಲಿನ
News

Advanced Minimally Invasive Lung Surgery Successfully Performed at Father Muller Medical College Hospital

Father Muller Medical College Hospital (FMMCH) this September  – October 2026 has successfully performed two complex lung surgeries using the

You cannot copy content of this page