October 4, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರ್ತವ್ಯದಲ್ಲೇ ವಿದ್ಯುತ್ ಸ್ಪರ್ಶ – ಬಂಟ್ವಾಳದ ಕೆದಿಲದಲ್ಲಿ ಲೈನ್‌ಮ್ಯಾನ್ ರವಿ ದುರ್ಮರಣ

ಬಂಟ್ವಾಳ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಲೈನ್‌ಮ್ಯಾನ್‌ವೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ನಡೆದಿದೆ.

ಮೃತರನ್ನು ಕೆದಿಲ ಪಾಟ್ರಕೋಡಿ–ಮಿತ್ತೂರು ಗಡಿಯಾರ ನಿವಾಸಿ ರವಿ ಎಂದು ಗುರುತಿಸಲಾಗಿದೆ. ಅವರು ಕೆದಿಲದಲ್ಲಿ ಲೈನ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಅಕ್ಟೋಬರ್ 3ರಂದು ಶನಿವಾರ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ರವಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ನಿಖರ ಕಾರಣ ಹಾಗೂ ಇತರ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

ರವಿ ಅವರು ಗ್ರಾಮದಲ್ಲಿ ಜನಪರ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಕರೆ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸಲು ಮುಂದಾಗುತ್ತಿದ್ದರು. ಈ ಮೂಲಕ ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು.

ಕರ್ತವ್ಯದಲ್ಲಿದ್ದಾಗಲೇ ಸಂಭವಿಸಿದ ಅವರ ಅಕಾಲಿಕ ಸಾವು ಗ್ರಾಮಸ್ಥರಿಗೆ ಆಘಾತವನ್ನುಂಟು ಮಾಡಿದ್ದು, ಕುಟುಂಬ ಹಾಗೂ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

You may also like

News

ದಯಾ ವಿಶೇಷ ಮಕ್ಕಳ ಶಾಲೆಗೆ ಕಥೊಲಿಕ್ ಸಭಾ ಬೆಳ್ತಂಗಡಿ ವಲಯದಿಂದ ₹2.30 ಲಕ್ಷ ನೆರವು – ಕೃತಜ್ಞತೆ ಸಲ್ಲಿಸಿದ ಫಾದರ್ ವಾಲ್ಟರ್ ಡಿಮೆಲ್ಲೊ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಬೆಳ್ತಂಗಡಿ ವಲಯ ಇದರ ಆದ್ಯಾತ್ಮಿಕ ನಿರ್ದೇಶಕರು, ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಬೆಳ್ತಂಗಡಿಯ ದಯಾ ವಿಶೇಷ ಮಕ್ಕಳ ಶಾಲೆಗೆ
News

ಬಿಜೈ ಕಾಪಿಕಾಡ್ ಅಂಗನವಾಡಿ ಪುಟಾಣಿಗಳಿಗೆ ನೆರವಿನ ಹಸ್ತ – ಬಟ್ಟೆ ಬ್ಯಾಗ್ ಹಾಗೂ ಸಿಹಿತಿಂಡಿ ವಿತರಣೆ

ಮಂಗಳೂರು: ಮುಂಬೈನ ಲೋಬೊ ಫೌಂಡೇಶನ್ ಹಾಗೂ ಗ್ಲೋಬಲ್ ಸಿಂಪಥಿ ಫೌಂಡೇಶನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ಬಿಜೈ ಕಾಪಿಕಾಡ್ ಅಂಗನವಾಡಿ

You cannot copy content of this page