November 23, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಿವೃತ್ತ ಶಿಕ್ಷಕಿ ಡಯಾನ ಡಿಸಿಲ್ವ ಹೃದಯಾಘಾತದಿಂದ ನಿಧನ

33 ವರ್ಷಗಳ ಶಿಕ್ಷಕ ಸೇವೆಯ ಬಳಿಕ ಬದುಕಿನ ಪಯಣಕ್ಕೆ ವಿದಾಯ

ಕಟಪಾಡಿ: ಪತಿಯೊಂದಿಗೆ ಚಹಾ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ನಿವೃತ್ತ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ನವೆಂಬರ್ 21ರಂದು ಕಟಪಾಡಿ ಮೂಡಬೆಟ್ಟು ಸರಕಾರಿಗುಡ್ಡೆಯ ಮನೆಯಲ್ಲಿ ನಡೆದಿದೆ.

ಕಾಪು ಉಳಿಯಾರಗೋಳಿಯ ದಂಡತೀರ್ಥ ಶಾಲೆಯಲ್ಲಿ 33 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ 63 ವರ್ಷ ಪ್ರಾಯದ ಡಯಾನ ಡಿಸಿಲ್ವ ಮೃತರು.

ನವೆಂಬರ್ 21ರ ಸಂಜೆ ಡಯಾನ ಅವರು ಪತಿ, ಶಂಕರಪುರ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಜಾರ್ಜ್ ಡಿಸಿಲ್ವ ಅವರೊಂದಿಗೆ ಚಹಾ ಸೇವಿಸಿದ್ದರು. ಬಳಿಕ ಪತಿ ಲೋಟವನ್ನು ಒಳಗಿಡಲು ತೆರಳಿದಾಗ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಉಡುಪಿಯ ಟಿ.ಎಂ.ಎ. ಪೈ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಒಂದು ವಾರದ ಹಿಂದೆಯಷ್ಟೇ ಪುತ್ರಿಯ ವಿವಾಹ ಸಮಾರಂಭದಲ್ಲಿ ಕುಟುಂಬದವರೊಂದಿಗೆ ಸಂತಸದಿಂದ ಪಾಲ್ಗೊಂಡಿದ್ದ ಡಯಾನ ಅವರು ಪತಿ ಜಾರ್ಜ್ ಡಿಸಿಲ್ವ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

You may also like

News

ಕರ್ನಾಟಕ ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕರಾಗಿ ಡಾ. ಮಂಜುನಾಥ ಭಂಡಾರಿ ನೇಮಕ

ರಾಜಕೀಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ವಿಶಿಷ್ಟ ಛಾಪು ಮೂಡಿಸಿದ ನಾಯಕನಿಗೆ ಮತ್ತೊಂದು ಮಹತ್ವದ ಜವಾಬ್ದಾರಿ  ಬೆಂಗಳೂರು: ವಿದ್ಯಾರ್ಥಿ ಸಂಘಟನೆಯಿಂದ ಆರಂಭವಾದ ಸಾರ್ವಜನಿಕ ಬದುಕಿನ ಪಯಣ, ಪಕ್ಷ
News

ವೇಣೂರು ಕ್ರೈಸ್ಟ್ ದಿ ಕಿಂಗ್ ಚರ್ಚ್ ನಲ್ಲಿ ಭಕ್ತಿಭಾವದ ಪವಿತ್ರ ಪ್ರಸಾದದ ಮೆರವಣಿಗೆ

ವಾರ್ಷಿಕ ಹಬ್ಬದ ಪೂರ್ವಭಾವಿಯಾಗಿ ಸಂಭ್ರಮದ ಆಚರಣೆ – ಪ್ರಧಾನ ಬಲಿಪೂಜೆಗೆ ಫಾದರ್ ಜೈಸನ್ ಮೊನಿಸ್ ನೇತೃತ್ವ ಬೆಳ್ತಂಗಡಿ ತಾಲೂಕಿನ ವೇಣೂರು ಕ್ರೈಸ್ಟ್ ದಿ ಕಿಂಗ್ ಚರ್ಚಿನಲ್ಲಿ ವಾರ್ಷಿಕ

You cannot copy content of this page