August 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಲ್ಲಡ್ಕ ಅಬ್ರಾಡ್ ಫೋರಂ : ಅನಿವಾಸಿಗಳ ಸಮ್ಮಿಲನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಕಲ್ಲಡ್ಕ ಅಬ್ರಾಡ್ ಫೋರಂ, ಸೌದಿ ಅರೇಬಿಯಾ ಸಮಿತಿಯು ಆಯೋಜಿಸುವ ಜಿಸಿಸಿ ರಾಷ್ಟ್ರಗಳಲ್ಲಿ ನೆಲೆಸಿರುವ ಕಲ್ಲಡ್ಕದ ಅನಿವಾಸಿಗಳ ಸ್ನೇಹ ಸಮ್ಮಿಲನ ಸಮಾರಂಭದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಸೌದಿ ಅರೇಬಿಯಾದ  ಜುಬೈಲ್ ನ  ಬ್ರೈಟ್ ಸಪೋರ್ಟ್ ಕಚೇರಿ ಹಾಗೂ ದುಬೈಯ  ಹೋಟೆಲ್ ಕ್ಯಾಲಿಕಟ್ ಪ್ಯಾರಾಗಾನ್ ನಲ್ಲಿ ನಡೆಯಿತು.

ಯುಎಇ, ಕತಾರ್, ಕುವೈತ್, ಒಮಾನ್, ಬಹರೈನ್ ಹಾಗೂ ಸೌದಿ ಅರೇಬಿಯಾದ ವಿವಿಧ ಕಡೆಗಳಲ್ಲಿ ನೆಲೆಸಿರುವ ಕಲ್ಲಡ್ಕದ ಅನಿವಾಸಿ ಸಹೋದರರನ್ನು ಒಟ್ಟು ಸೇರಿಸಿ ನಡೆಸುವ ಈ ಕಾರ್ಯಕ್ರಮ 2024 ನವೆಂಬರ್ 22ರ ಶುಕ್ರವಾರದಂದು ದಮ್ಮಾಮ್ ನಲ್ಲಿ ನಡೆಯಲಿದೆ ಎಂದು ಬ್ರೈಟ್ ಸಪೋರ್ಟ್ ಮಾಲಕ ರಫೀಕ್ ತಿಳಿಸಿದರು.

ಕಲ್ಲಡ್ಕ ಅಬ್ರಾಡ್ ಫೋರಂ ಸೌದಿ ಅರೇಬಿಯಾ ಪ್ರಧಾನ ಕಾರ್ಯದರ್ಶಿ ಜಾಬಿರ್ ಮಾತನಾಡಿ, ಕಲ್ಲಡ್ಕದಿಂದ ಗುರುತಿಸಲ್ಪಟ್ಟ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಸಮಿತಿಯ ಕಾರ್ಯದರ್ಶಿಗಳಾದ ಸಕ್ವಾಫ್, ಸಿದ್ದೀಕ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಕ್ಬರ್, ಇರ್ಷಾದ್, ಮಸ್ಹೂದ್ ಮೊದಲಾದವರು ಭಾಗವಹಿಸಿದ್ದರು. ದುಬೈನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೌದಿ ಅಲ್ – ಅಕ್ದೂದ್ ಕಂಪೆನಿಯ ಮಾಲಕ ಫಿರೋಝ್ ಮತ್ತು ಇಸ್ಮಾಯಿಲ್, ಕಲ್ಲಡ್ಕ ಅಬ್ರಾಡ್ ಫೋರಂ ಯುಎಇ ಘಟಕದ ಅಧ್ಯಕ್ಷ ನವಾಝ್ ಹಜಾಜ್, ಪ್ರಮುಖರಾದ ರಫೀಕ್ ಸಾಹಿಬ್ ನೆಕ್ಕರಾಜೆ, ಜಬ್ಬಾರ್ ಕೆ.ಕೆ., ಫಾರೂಕ್, ಫಯಾಝ್, ಮಹಮ್ಮದಾಲಿ, ತಮೀಮ್ ಮೊದಲಾದವರು ಉಪಸ್ಥಿತರಿದ್ದರು.

You may also like

News

ಮೊಬೈಲ್‌ಗಾಗಿ ಜಗಳ ತಂಗಿಯ ಕೊಲೆ – ಸಹೋದರ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾನಿಗೆ 5 ವರ್ಷ ಜೈಲು!

ಮೊಬೈಲ್ ವಿಚಾರವಾಗಿ ನಡೆದ ಜಗಳದ ವೇಳೆ ಸ್ವಂತ ತಂಗಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ.
News

ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ಧರ್ಮಸ್ಥಳದಲ್ಲಿ 28ನೇ ಭಜನಾ ಕಮ್ಮಟ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಮಂಗಳವಾರ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಭಜನಾ ಕಮ್ಮಟದ

You cannot copy content of this page