ವಿಟ್ಲದಲ್ಲಿ ಇಂದು ಜನವರಿ 12ರಂದು ಡಿಜಿಟಲ್ ಇ–ಸ್ಟ್ಯಾಂಪ್ ತರಬೇತಿ ಕಾರ್ಯಕ್ರಮ
ವಿಟ್ಲ ಉಪನೋಂದಣಾಧಿಕಾರಿ ಬಿಂದುಮಣಿ ಶರ್ಮ ಅವರಿಂದ ಪತ್ರಿಕಾ ಪ್ರಕಟಣೆ ಡಿಜಿಟಲ್ ಇ–ಸ್ಟ್ಯಾಂಪ್ ಮಾರಾಟ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಉಪನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ವಿಟ್ಲ ಉಪನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಇಂದು ಜನವರಿ 12ರಂದು ಸೋಮವಾರ ಸಂಜೆ 4.00 ಗಂಟೆಗೆ ಬಂಟ್ವಾಳ ತಾಲೂಕು ಆಡಳಿತ ಸೌಧದ ಸಬಾಂಗಣದಲ್ಲಿ ಡಿಜಿಟಲ್ ಇ–ಸ್ಟ್ಯಾಂಪ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ತರಬೇತಿ ಕಾರ್ಯಕ್ರಮದಲ್ಲಿ ಇ–ಸ್ಟ್ಯಾಂಪ್ ಮಾರಾಟ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಸಹಕಾರಿ ಹಾಗೂ […]












