ಮಂಗಳೂರು ಪ್ರಾಂತ್ಯದ ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆ ಚುನಾವಣೆ – ಹೊಸ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ ಕೋರ್ಡೆಲ್ ಘಟಕದ ಡೆನಿಸ್ ಫೆರ್ನಾಂಡಿಸ್ ಆಯ್ಕೆ ಮಂಗಳೂರು ಪ್ರಾಂತ್ಯದ ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆಯ ಚುನಾವಣೆಯು ಜನವರಿ 3ರಂದು ಭಾನುವಾರ ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ಸೈಂಟ್ ಆ್ಯನ್ಸ್ ಫ್ರಾಯರಿಯಲ್ಲಿ ನಡೆಯಿತು. ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆಯ ಭಾರತದ ರಾಷ್ಟ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಮನೋಹರ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಅಧ್ಯಕ್ಷ ಬ್ರದರ್ ಒಲಿವರ್ ಫೆರ್ನಾಂಡೋ ಅವರು ಚುನಾವಣೆಯನ್ನು ನಡೆಸಿಕೊಟ್ಟರು. ಕರ್ನಾಟಕ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಪ್ರಕಾಶ್ ಲೋಬೊ ಅವರು ಸಲಹೆ ಸೂಚನೆಗಳನ್ನು ನೀಡಿ […]













