November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪುತ್ತೂರಿನಲ್ಲಿ ಫ್ಲಾವಿಯಾ ಅಲ್ಬುಕರ್ಕ್ ಅವರ “ಸಖೀ ಸೂಸಿದ ಸೌಗಂಧ” ಕೃತಿ ಲೋಕಾರ್ಪಣೆ – ನಿರಂತರ ಸಾಹಿತ್ಯ ಪುರಸ್ಕಾರ ಪ್ರದಾನ

ಪುತ್ತೂರಿನ ದರ್ಬೆಯಲ್ಲಿರುವ ಸಂತ ಫಿಲೋಮಿನಾ ಸಿಲ್ವರ್ ಜುಬಿಲಿ ಮೆಮೋರಿಯಲ್ ಸಭಾಂಗಣದಲ್ಲಿ 2025 ಡಿಸೆಂಬರ್ 28ರಂದು ಭಾನುವಾರ ನಿರಂತರ ಪ್ರಕಾಶನ ಗದಗ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಗಜೇಂದ್ರಗಡ (ಗದಗ) ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಪುತ್ತೂರಿನ ಕವಯಿತ್ರಿ ಫ್ಲಾವಿಯಾ ಅಲ್ಬುಕರ್ಕ್ ಅವರ “ಸಖೀ ಸೂಸಿದ ಸೌಗಂಧ” ಕೃತಿಯ ಲೋಕಾರ್ಪಣೆ ಹಾಗೂ ನಿರಂತರ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ಭವ್ಯವಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರಂತರ ಪ್ರಕಾಶನದ ರೂವಾರಿ ಎ.ಎಸ್. ಮಕಾನದಾರ ವಹಿಸಿದ್ದರು. ಹಿರಿಯ ವಕೀಲರು, […]

News

ಬಿಕರ್ನಕಟ್ಟೆಯ ದಿವ್ಯ ಬಾಲಯೇಸುವಿನ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆ – ಜನವರಿ 14–15 ರಂದು ಭಕ್ತಿಭಾವದ ಸಂಭ್ರಮ

ಮಂಗಳೂರಿನ ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್‌ನಲ್ಲಿರುವ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ 2026ನೇ ಸಾಲಿನ ದಿವ್ಯ ಬಾಲಯೇಸುವಿನ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಇಂದು ಡಿಸೆಂಬರ್ 31ರಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು. ಮಹೋತ್ಸವದ ಅಂಗವಾಗಿ ಜನವರಿ 14ರಂದು ಸಂಜೆ 6.00 ಗಂಟೆಗೆ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಸಾಂಭ್ರಮಿಕ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ. ಅದೇ ದಿನ ಬೆಳಿಗ್ಗೆ 10.00 ಗಂಟೆಗೆ […]

News

ಮೊಗರ್ನಾಡ್ ಚರ್ಚ್ ಸ್ಥಾಪನೆಯ 250ನೇ ವರ್ಷದ ಜ್ಯುಬಿಲಿ ಪ್ರಯುಕ್ತ ಅದ್ದೂರಿ ಹೊರೆಕಾಣಿಕೆ ಜಾಥಾ

ಮಂಗಳೂರು ಧರ್ಮಕ್ಷೇತ್ರದ ಮೊಗರ್ನಾಡ್ ದೇವಮಾತಾ ಧರ್ಮಕೇಂದ್ರದ ಸ್ಥಾಪನೆಯ 250ನೇ ವರ್ಷದ ಜ್ಯುಬಿಲಿ ಸಂಭ್ರಮಾಚರಣೆಯ ಅಂಗವಾಗಿ ಡಿಸೆಂಬರ್ 28ರಂದು ಸಮಾರೋಪ ಕಾರ್ಯಕ್ರಮಕ್ಕೆ ಊಟದ ತಯಾರಿಗಾಗಿ ಹೊರೆಕಾಣಿಕೆ ಸಮರ್ಪಣೆಯ ಅದ್ದೂರಿ ಜಾಥಾವನ್ನು ವಿಶಿಷ್ಟವಾಗಿ ನಡೆಸಲಾಯಿತು. ಮಧ್ಯಾಹ್ನ 2.45ಕ್ಕೆ ಕಲ್ಲಡ್ಕ ಕೆ.ಸಿ. ರೋಡಿನಿಂದ ವಾಹನ ಜಾಥಾದ ಮೂಲಕ ಹೊರೆಕಾಣಿಕೆ ಸಮರ್ಪಣೆಗೆ ಚಾಲನೆ ನೀಡಲಾಯಿತು. ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವಮಾತಾ ಆಂಗ್ಲ ಮಾಧ್ಯಮ ಶಾಲೆ ಅಮ್ಟೂರು ಇಲ್ಲಿನ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ನವೀನ್ ಪ್ರಕಾಶ್ […]

News

ಮಂಗಳೂರಿನ ಪಡೀಲ್ ಅಂಗನವಾಡಿ ಶಾಲೆ ನವೀಕರಣ ಪೂರ್ಣ – ತುಳುಕೂಟ ಥೈಲ್ಯಾಂಡ್‌ನಿಂದ ಜನವರಿ 3ರಂದು ಹಸ್ತಾಂತರ

ಅಧ್ಯಕ್ಷ ವಿನಯ್ ರೈ ಅವರ ನೇತೃತ್ವ ತುಳುಕೂಟ ಥೈಲ್ಯಾಂಡ್ ವತಿಯಿಂದ ಪಡೀಲ್ ನಲ್ಲಿರುವ ಸರ್ಕಾರಿ ಅಂಗನವಾಡಿ ಶಾಲೆಯ ನವೀಕರಣ ಕಾರ್ಯವನ್ನು ಥೈಲ್ಯಾಂಡ್ ತುಳುಕೂಟದ ಅಧ್ಯಕ್ಷ ವಿನಯ್ ರೈ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಈ ಯೋಜನೆಯಡಿಯಲ್ಲಿ ಶಾಲೆಯ ಮೇಲ್ಛಾವಣಿ ದುರಸ್ತಿ, ಸಿವಿಲ್ ಕಾಮಗಾರಿ, ಕಾರ್ಪೆಂಟ್ರಿ ಹಾಗೂ ಪ್ಲಂಬಿಂಗ್ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಬೇಸಿಗೆ ಸಮಯದಲ್ಲಿ ಮಕ್ಕಳಿಗೆ ಉಷ್ಣತೆಯಿಂದ ರಕ್ಷಣೆ ದೊರಕುವಂತೆ ಮೇಲ್ಛಾವಣಿ ಕಲ್ಲಿನ ಅಡಿಯಲ್ಲಿ ಹೊಸ ಸೀಲಿಂಗ್ ಅಳವಡಿಸಲಾಗಿದೆ. ಪ್ರಸ್ತುತ ಶಾಲಾ ಕಟ್ಟಡದ ಬಣ್ಣ ಹಚ್ಚುವ ಕೆಲಸ ಪ್ರಗತಿಯಲ್ಲಿದೆ. […]

News

ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಗಲಾಟೆ – ಟೋಲ್ ಸಿಬ್ಬಂದಿಗಳ ಮೇಲೆ ಹಲ್ಲೆ, ಲಾರಿ ಚಾಲಕ ಸಹಿತ ಇಬ್ಬರು ವಶಕ್ಕೆ

ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಟೋಲ್ ಹಣ ನೀಡಲು ನಿರಾಕರಿಸಿ ಗೇಟ್‌ಗೆ ಹಾನಿ ಮಾಡಿರುವುದಲ್ಲದೆ ಟೋಲ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕ ಹಾಗೂ ಕ್ಲೀನರ್‌ರನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ 25 ವರ್ಷ ಪ್ರಾಯದ ಪ್ರಶಾಂತ್ ಬಿ. ನೀಡಿದ ದೂರಿನಂತೆ, ಅವರು ಬಂಟ್ವಾಳ ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಟೋಲ್ ಇನ್‌ಚಾರ್ಜ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡಿಸೆಂಬರ್ 29ರಂದು ಸೋಮವಾರ ಮುಂಜಾನೆ ಕೆಎ–18 ಸಿ–3048 ನೋಂದಣಿಯ […]

News

ಸೂರಿಕುಮೇರು ನಿವಾಸಿ ವಂದನೀಯ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ನಿಧನ

ಅಸ್ಸಾಂನ ಬೊಂಗೈಗಾಂವ್ ಧರ್ಮಕ್ಷೇತ್ರದ ಸೇವೆಗೆ ಸಮರ್ಪಿತ ಜೀವನಕ್ಕೆ ಶಾಂತ ಅಂತ್ಯ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ನಿವಾಸಿಯಾಗಿದ್ದ ಅಸ್ಸಾಂನ ಬೊಂಗೈಗಾಂವ್ ಧರ್ಮಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ 57 ವರ್ಷ ಪ್ರಾಯದ ವಂದನೀಯ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರು ಇಂದು ಡಿಸೆಂಬರ್ 30ರಂದು ಮುಂಜಾನೆ ಅಸೌಖ್ಯದಿಂದ ನಿಧನ ಹೊಂದಿದರು. ಅವರ ನಿಧನದ ಸುದ್ದಿ ಸೂರಿಕುಮೇರು ಸೇರಿದಂತೆ ಧಾರ್ಮಿಕ ವಲಯದಲ್ಲಿ ತೀವ್ರ ದುಃಖ ಮತ್ತು ಶೋಕವನ್ನುಂಟುಮಾಡಿದೆ. ಬೊನವೆಂಚರ್ ಪಿಂಟೊ ಮತ್ತು ಆಲಿಸ್ ಪಿಂಟೊ ದಂಪತಿಗಳಿಗೆ ಪುತ್ರರಾಗಿ 1968ರ […]

News

ಪೆರುವಾಯಿಯಲ್ಲಿ ಬಂಧುತ್ವ ಕ್ರಿಸ್ಮಸ್–2025 – ಬೃಹತ್ ರಕ್ತದಾನ ಶಿಬಿರದ ಮೂಲಕ ಮಾನವೀಯತೆಯ ಸಂದೇಶ

ಒಬ್ಬರ ಜೀವ ಉಳಿಸುವ ಪುಣ್ಯಕ್ಕಿಂತ ದೊಡ್ಡ ಬಂಧುತ್ವ ಮತ್ತೊಂದಿಲ್ಲ – ಫಾದರ್ ಸೈಮನ್ ಡಿಸೋಜ ಒಬ್ಬರ ಜೀವ ಉಳಿಸುವ ಪುಣ್ಯಕ್ಕಿಂತ ದೊಡ್ಡ ಬಂಧುತ್ವ ಮತ್ತು ಸಹೋದರತ್ವ ಮತ್ತೊಂದಿಲ್ಲ ಎಂದು ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಂದನೀಯ ಫಾದರ್ ಸೈಮನ್ ಡಿಸೋಜ ಅವರು ಹೇಳಿದರು. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಮುಚ್ಚಿರಪದವಿನಲ್ಲಿ ಫಾತಿಮಾ ಮಾತೆಯ ದೇವಾಲಯದ ಸ್ತ್ರೀ ಸಂಘಟನೆಯ ನೇತೃತ್ವದಲ್ಲಿ, ಐಸಿವೈಎಂ, ಹ್ಯುಮಾನಿಟಿ ಅಭಿಮಾನಿ ಬಳಗ ವಿಟ್ಲ, ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ ಮುರುವ–ಮಾಣಿಲ, ಶ್ರೀ ವಿಷ್ಣುಮೂರ್ತಿ […]

News

ಕೊಪ್ಪಳಕಾಡು ರಸ್ತೆಯಲ್ಲಿ ಚಿನ್ನದ ಸರ ಸುಲಿಗೆ – 72 ಗಂಟೆಗಳಲ್ಲಿ ಆರೋಪಿ ಬಂಧನ

ರೂಪಾಯಿ 3.5 ಲಕ್ಷ ಮೌಲ್ಯದ ಕರಿಮಣಿ ಸರ ವಶ ಕೊಪ್ಪಳಕಾಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಕರಿಮಣಿ ಸರವನ್ನು ಸುಲಿಗೆ ಮಾಡಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸ್ ಇಲಾಖೆ ಅತೀ ಶೀಘ್ರದಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ನೊಂದ ಮಹಿಳೆಗೆ ಸೇರಿದ 32 ಗ್ರಾಂ ತೂಕದ, ಅಂದಾಜು ರೂಪಾಯಿ 3,50,000 ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿಸೆಂಬರ್ 25ರಂದು ಗುರುವಾರ ಸಂಜೆ ಗುರುನಗರ ನಿವಾಸಿಯಾದ ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಯೆಯ್ಯಾಡಿಯಲ್ಲಿರುವ ತಮ್ಮ ಅಂಗಡಿಯಿಂದ ಮನೆಗೆ ತೆರಳುತ್ತಿದ್ದ […]

News

ಮಂಗಳೂರು ಕರಾವಳಿ ಉತ್ಸವಕ್ಕೆ ಕಳೆ ತಂದ ಪೊಲೀಸ್ ಕಲಾ ವೈಭವ – ಜನಮನ ಗೆದ್ದ ನಗರ ಪೊಲೀಸ್ ಕಲಾವಿದರು

ಜಿಲ್ಲಾಡಳಿತದ ವತಿಯಿಂದ ಡಿಸೆಂಬರ್ 27ರಂದು ಆಯೋಜಿಸಲಾದ ಮಂಗಳೂರು ಕರಾವಳಿ ಉತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಮಂಗಳೂರು ನಗರ ಪೊಲೀಸ್ ಇಲಾಖೆಯಿಂದ ನಡೆಸಲಾದ ಪೊಲೀಸ್ ಕಲಾ ವೈಭವ ಕಾರ್ಯಕ್ರಮ ಮಂಗಳೂರು ಜನತೆಯನ್ನು ಅಪಾರವಾಗಿ ಮನರಂಜಿಸಿ, ಪ್ರಶಂಸೆಗೆ ಪಾತ್ರವಾಯಿತು. ಪೊಲೀಸ್ ಇಲಾಖೆ ಕೇವಲ ಕಾನೂನು ಮತ್ತು ಭದ್ರತೆಯಷ್ಟೇ ಅಲ್ಲ, ಸಂಸ್ಕೃತಿ ಮತ್ತು ಕಲೆಯಲ್ಲಿಯೂ ಮುಂಚೂಣಿಯಲ್ಲಿದೆ ಎಂಬುದನ್ನು ಈ ಕಾರ್ಯಕ್ರಮ ಸ್ಪಷ್ಟಪಡಿಸಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರು ಪತ್ನಿ ಸಮೇತರಾಗಿ ಕರಾವಳಿ ಸಂಸ್ಕೃತಿಗೆ ಅನುರೂಪವಾಗಿ ಕಳಸಕ್ಕೆ ಬತ್ತ ತುಂಬುವ […]

News

ಮಂಡೂರಿನ ಡಾ. ರಶ್ಮಾ ಎಂ. ಶೆಟ್ಟಿ ಅವರಿಗೆ ‘ಮಿಸೆಸ್ ಇಂಡಿಯಾ–2025’ ಕಿರೀಟ

ಮಂಡೂರಿನ ಡಾ. ರಶ್ಮಾ ಎಂ. ಶೆಟ್ಟಿ ಅವರು ಪ್ರತಿಷ್ಠಿತ ‘ಮಿಸೆಸ್ ಇಂಡಿಯಾ–2025’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಡಿಸೆಂಬರ್ 18ರಿಂದ 21ರವರೆಗೆ ಜೈಪುರದ ಜೈಬಾಗ್ ಪ್ಯಾಲೇಸ್‌ನಲ್ಲಿ ದೀಪಾಳಿ ಫಡ್ನಿಸ್ (ನ್ಯಾಷನಲ್ ಡೈರೆಕ್ಟರ್, ಮಿಸೆಸ್ ಇಂಡಿಯಾ) ಅವರ ಆಯೋಜನೆಯಲ್ಲಿ ನಡೆದ ಮಿಸೆಸ್ ಇಂಡಿಯಾ ಸೀಸನ್–15 ಅಂತಿಮ ಸ್ಪರ್ಧೆಯಲ್ಲಿ ಅವರು ಈ ಗೌರವವನ್ನು ಪಡೆದರು. ಭಾರತದ ಅತ್ಯಂತ ಪ್ರತಿಷ್ಠಿತ ಹಾಗೂ ದೀರ್ಘಕಾಲದಿಂದ ನಡೆಯುತ್ತಿರುವ ಸೌಂದರ್ಯ ಸ್ಪರ್ಧೆಗಳಲ್ಲೊಂದು ಆಗಿರುವ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ 40 ಅಂತಿಮ ಸ್ಪರ್ಧಿಗಳು ಭಾಗವಹಿಸಿದ್ದರು. […]

You cannot copy content of this page