November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕ್ರೈಸ್ತರ ಮೇಲಿನ ದಾಳಿಗಳಿಗೆ ಖಂಡನೆ – ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್ ನಲ್ಲಿ ಮೌನ ಪ್ರತಿಭಟನೆ

ಕ್ರಿಸ್‌ಮಸ್ ಹಬ್ಬದ ಆಚರಣೆಗಳ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತರ ಮೇಲೆ ನಡೆದ ದಾಳಿಗಳನ್ನು ಖಂಡಿಸಿ, ಮಂಗಳೂರು ನಗರದ ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್ ವತಿಯಿಂದ ಇಂದು ಜನವರಿ 3ರಂದು ಶನಿವಾರ ಸಂಜೆ 6 ಗಂಟೆಗೆ ಚರ್ಚ್ ಮುಂಭಾಗದಲ್ಲಿ ಶಾಂತಿಯುತ ಮೌನ ಪ್ರತಿಭಟನೆ ಆಯೋಜಿಸಲಾಯಿತು. ಈ ಪ್ರತಿಭಟನೆಯಲ್ಲಿ ಬೆಂದೂರ್ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ವಾಲ್ಟರ್ ಡಿಸೋಜ, ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ವಿವೇಕ್ ಪಿಂಟೋ ಹಾಗೂ ವಂದನೀಯ ಫಾದರ್ ಓಜ್ಮೊಂಡ್ ರೋಷನ್ ಡಿಸೋಜ, […]

News

ಹೊಸ ವರ್ಷಾಚರಣೆಗೆ ಮಾರಾಟಕ್ಕೆ ತಂದಿದ್ದ 21.45 ಕೆ.ಜಿ ಗಾಂಜಾ ವಶ – ಸುರತ್ಕಲ್‌ನಲ್ಲಿ ಇಬ್ಬರ ಬಂಧನ

ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆಯ ವೇಳೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿದ್ದ ಸುಮಾರು 21 ಕೆ.ಜಿ 450 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಜನವರಿ 03ರಂದು ಶನಿವಾರ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ ನಗರ, 2ನೇ ಕ್ರಾಸ್‌ನ ‘ಬೆನಕ’ ಎಂಬ ಮನೆಯ ಬಳಿ ಕಾರಿನಲ್ಲಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು. ಈ ವೇಳೆ  32 ವರ್ಷ ಪ್ರಾಯದ […]

News

ಮೊಗರ್ನಾಡ್ ಚರ್ಚ್ ಸ್ಥಾಪನೆಯ 250ನೇ ವರ್ಷದ ಜ್ಯುಬಿಲಿ ವಿಜೃಂಭಣೆಯಿಂದ ಸಮಾರೋಪ

“ಎಲ್ಲ ವರ್ಗದ ಜನರು ಸದಾ ಒಗ್ಗಟ್ಟಿನಿಂದ ಬದುಕಬೇಕು” – ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಮಂಗಳೂರು ಧರ್ಮಕ್ಷೇತ್ರದ ಅಮ್ಟೂರು ಕರಿಂಗಾಣದ ಮೊಗರ್ನಾಡ್ ದೇವ ಮಾತಾ ಧರ್ಮಕೇಂದ್ರದ ಸ್ಥಾಪನೆಯ 250ನೇ ವರ್ಷದ ಜ್ಯುಬಿಲಿ ಸಂಭ್ರಮಾಚರಣೆಯ ಸಮಾರೋಪ ಸಮಾರಂಭವು 2026 ಜನವರಿ 1ರಂದು ಗುರುವಾರ ಅತ್ಯಂತ ಭಕ್ತಿಭಾವ ಮತ್ತು ವಿಜೃಂಭಣೆಯಿಂದ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ವಹಿಸಿದ್ದರು. ಅವರು ತಮ್ಮ ಸಂದೇಶದಲ್ಲಿ, […]

News

ಬ್ಯಾಂಕ್ ಆಫ್ ಬರೋಡಾ ಪೆರ್ನೆ ಶಾಖೆಯಲ್ಲಿ ₹71.41 ಲಕ್ಷ ವಂಚನೆ – ಜಂಟಿ ವ್ಯವಸ್ಥಾಪಕನ ವಿರುದ್ಧ ಪ್ರಕರಣ

ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಭಾರೀ ಹಣಕಾಸು ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ದಿನಾಂಕ 04-09-2023 ರಿಂದ 19-12-2025ರ ಅವಧಿಯಲ್ಲಿ ಶಾಖೆಯ ಜಂಟಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪುಲುಗುಜ್ಜು ನಿವಾಸಿ 30 ವರ್ಷ ಪ್ರಾಯದ ಸುಬ್ರಹ್ಮಣ್ಯಂ ಅವರು ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದರು. ಆರೋಪಿತನು ದಿನಾಂಕ 06-02-2024 ರಿಂದ 16-12-2025 ರವರೆಗೆ ಎಟಿಎಂಗೆ ನಿಗದಿತ ಪ್ರಮಾಣದ ನಗದು ಜಮಾ ಮಾಡದೇ ಕಡಿಮೆ ಹಣ ಜಮಾ ಮಾಡಿ ಸುಮಾರು ₹70,86,000 ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು […]

News

ಮಂಗಳೂರು ಧರ್ಮಕ್ಷೇತ್ರದ 125ನೇ ಚರ್ಚ್ ಆಗಿ ಬೆಳ್ಳಾರೆ ಪವಿತ್ರ ಶಿಲುಬೆಯ ಚರ್ಚ್ – ಬಿಷಪ್ ಪೀಟರ್ ಪಾವ್ಲ್ ಘೋಷಣೆ

ಮೊದಲ ‘ಚರ್ಚ್ ಧರ್ಮಗುರು’ ಆಗಿ ವಂದನೀಯ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ನೇಮಕ ಮಂಗಳೂರು ಧರ್ಮಕ್ಷೇತ್ರದ ಧಾರ್ಮಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಬಹುದಾದ ದಿನವಾಗಿ, ಬೆಳ್ಳಾರೆ ಪವಿತ್ರ ಶಿಲುಬೆ ಚಾಪೆಲ್‌ ಅಧಿಕೃತವಾಗಿ ‘ಚರ್ಚ್’ ಸ್ಥಾನಮಾನವನ್ನು ಪಡೆದಿತು. ಈ ಐತಿಹಾಸಿಕ ಸಂದರ್ಭದಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಪವಿತ್ರ ಶಿಲುಬೆ ದೇವಾಲಯದಲ್ಲಿ ದಿವ್ಯ ಬಲಿಪೂಜೆಯ ನೇತೃತ್ವ ವಹಿಸಿ, ಚರ್ಚ್ ನಿಯಮಾನುಸಾರವಾಗಿ ಬೆಳ್ಳಾರೆ ಪವಿತ್ರ ಶಿಲುಬೆ ದೇವಾಲಯವನ್ನು ‘ಚರ್ಚ್’ ಎಂದು ಘೋಷಿಸಿದರು. ಇದರಿಂದ ಈ […]

News

ಪುತ್ತೂರು ಪರ್ಲಡ್ಕ ಜಂಕ್ಷನ್‌ನಲ್ಲಿ ಗಾಂಜಾ ಮಾರಾಟ – 400 ಗ್ರಾಂ ನಿಷೇಧಿತ ಗಾಂಜಾ ವಶ, ಆರೋಪಿಯ ಬಂಧನ

ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಜಂಕ್ಷನ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆ PSI ಜನಾರ್ಧನ ಕೆ.ಎಂ. ಅವರು ಸಿಬ್ಬಂದಿಗಳೊಂದಿಗೆ ಜನವರಿ 01ರಂದು ಗುರುವಾರ ಬೆಳಿಗ್ಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಪುತ್ತೂರು ಕಸಬಾ ಗ್ರಾಮ ನಿವಾಸಿ 36 ವರ್ಷ ಪ್ರಾಯದ ಮಹಮ್ಮದ್ ತೌಸೀಫ್ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ತನ್ನ ಬಳಿ ನಿಷೇಧಿತ ಗಾಂಜಾ ಹೊಂದಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ. ತಪಾಸಣೆ ನಡೆಸಿದಾಗ ಅವನ ಬಳಿ […]

News

YCS Central Council Office Blessed and Inaugurated in Mangaluru

The blessing ceremony of the YCS Central Council Office was held on 2 January 2026, marking an important milestone for the Young Christian Students (YCS) movement in Mangaluru. The newly renovated office was inaugurated by Rev. Fr Santhosh Rodrigues, Director of the Pastoral Institute and blessed by Rev. Fr Charles Menezes, former YCS Director. The […]

News

ಕನ್ನಡದ ನಡಿಗೆ ಶಾಲೆಯ ಕಡೆಗೆ – ಪೆರ್ಮುದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಕದಿನ ಸಾಹಿತ್ಯ ಅಭಿಯಾನ

ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ “ಕನ್ನಡದ ನಡಿಗೆ ಶಾಲೆಯ ಕಡೆಗೆ” ಎಂಬ ಏಕದಿನ ಸಾಹಿತ್ಯ ಅಭಿಯಾನವು ಜನವರಿ 1ರಂದು ಗುರುವಾರ ಪೆರ್ಮುದೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕೋಡಿಕೆರೆ–ಕುಳಾಯಿ ಇಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕಿ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ರೇಖಾ ಸುದೇಶ್ ರಾವ್ ಅವರು ಅತಿಥಿ ಅಭ್ಯಾಗತರನ್ನು ಕನ್ನಡ […]

News

ಜನವರಿ 4ರಂದು ಮಂಗಳೂರು ಧರ್ಮಕ್ಷೇತ್ರದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆ

ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾರವರ ನೇತೃತ್ವ ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಪ್ರತಿವರ್ಷದ ಸಂಪ್ರದಾಯದಂತೆ 2026ರ ಜನವರಿ 4ರಂದು ಭಾನುವಾರ ವಾರ್ಷಿಕ ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆಯು ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ನಗರದಲ್ಲಿ ಜರುಗಲಿದೆ. ಯೇಸು ಕ್ರಿಸ್ತರ ದೈವದರ್ಶನ ಮಹೋತ್ಸವ (ಎಪಿಫನಿ) ಅಂಗವಾಗಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮವು ಸಾವಿರಾರು ಭಕ್ತಾದಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಈ ಮೆರವಣಿಗೆಯು ಕೇವಲ ಧಾರ್ಮಿಕ ವಿಧಿಯಾಗಿರದೆ, ಪ್ರಾರ್ಥನೆ, ಭಕ್ತಿಗೀತೆಗಳು ಹಾಗೂ […]

News

ಇತಿಹಾಸ–ಸಂಸ್ಕೃತಿ ಅಧ್ಯಯನಕ್ಕೆ ಬಂದ ಶ್ರೀಲಂಕಾದ ಮಾಧ್ಯಮ ತಜ್ಞರಿಗೆ ‘ಕನ್ನಡ ಪಯಸ್ವಿನಿ’ ಪ್ರಶಸ್ತಿ

ಇತಿಹಾಸ, ಸಂಸ್ಕೃತಿ ಮತ್ತು ಸಮಾಜದ ಕುರಿತು ಅಧ್ಯಯನ ನಡೆಸುವ ಉದ್ದೇಶದಿಂದ ಕಾಸರಗೋಡಿಗೆ ಆಗಮಿಸಿದ್ದ ಶ್ರೀಲಂಕಾದ ಆರು ಮಂದಿ ಮಾಧ್ಯಮ ತಜ್ಞರನ್ನು ಗೌರವಿಸಿ ಕಾಸರಗೋಡು ಕನ್ನಡಭವನದ ವತಿಯಿಂದ ‘ಕನ್ನಡ ಪಯಸ್ವಿನಿ’ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಕನ್ನಡಭವನ ಗ್ರಂಥಾಲಯದ ಸಂಸ್ಥಾಪಕ ವಾಮನರಾವ್ ಬೇಕಲ್ ಹಾಗೂ ನಿರ್ದೇಶಕಿ ಸಂಧ್ಯಾ ರಾಣಿ ಟೀಚರ್ ಅವರು ಪ್ರಶಸ್ತಿಗಳನ್ನು ಪ್ರದಾನಿಸಿದರು. ಶ್ರೀಲಂಕಾ ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಾರ್ತಾ ಇಲಾಖೆಯ ಪ್ರತಿನಿಧಿಗಳು ಮತ್ತು ಅಲ್ಲಿನ ಕೇಂದ್ರ ಸಚಿವರ ಮಾಧ್ಯಮ ಕಾರ್ಯದರ್ಶಿಗಳು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ […]

You cannot copy content of this page