November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಹಿಳೆಯರ ಬಟ್ಟೆ ಅಳತೆ ಪುರುಷ ಟೈಲರ್ ತೆಗೆಯೋ ಹಾಗಿಲ್ಲ..!

ಲಕ್ನೋ: ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಮಹಿಳಾ ಆಯೋಗವು ಪ್ರಮುಖ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದೆ. ಅದರ ಅಡಿಯಲ್ಲಿ ಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆಗಳ ಅಳತೆಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಉತ್ತರ ಪ್ರದೇಶ ರಾಜ್ಯದಲ್ಲಿ ಇಂತಹುದೊಂದು ಮಹತ್ವದ ಆದೇಶ ತರಲಾಗಿದ್ದು, ಬೊಟಿಕ್ ಸೆಂಟರ್‌ಗಳಲ್ಲಿ ಮಹಿಳೆಯರ ಬಟ್ಟೆಗಳ ಅಳತೆಯನ್ನು ಪುರುಷರ ಬದಲಿಗೆ ಮಹಿಳೆಯರೇ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಈ ಸಂಬಂಧ ಎಲ್ಲ ಜಿಲ್ಲೆಗಳಿಗೂ ಆದೇಶ ಹೊರಡಿಸಲಾಗಿದೆ. ಮಹಿಳಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಬೊಟಿಕ್ ಸೆಂಟರ್‌ಗಳಲ್ಲಿ ಮಹಿಳೆಯರ ಬಟ್ಟೆಗಳ ಅಳತೆಯನ್ನು ಪುರುಷರ ಬದಲಿಗೆ ಮಹಿಳೆಯರೇ […]

News

ನೆಲ್ಯಾಡಿ ಬಳಿ ಜಮೀನು ವಿವಾದ – ಕೊಲೆಯಲ್ಲಿ ಅಂತ್ಯ

ನೆಲ್ಯಾಡಿ ಬಳಿ ಅಲಂತಾಯ ಗ್ರಾಮದ ಪೆರ್ಲ ನಿವಾಸಿ ಪ್ರಗತಿಪರ ಕೃಷಿಕ 51 ವರ್ಷದ ರಮೇಶ ಗೌಡ ಕೊಲೆಯಾದ ದುರ್ದೈವಿ. ಹತ್ತಿರದ ಸಂಬಂಧಿಕನಾದ ಹರೀಶ್ ಕೊಲೆಗೈದ ಆರೋಪಿ. ಇಂದು ನವಂಬರ್ 8ರಂದು ರಾತ್ರಿ 7 ಗಂಟೆಯ ಸುಮಾರಿಗೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರಮೇಶ ಗೌಡ ಮತ್ತು ಸಂಬಂಧಿ ಹರೀಶ್ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದಾಗ ಹರೀಶ್ ಕತ್ತಿಯಿಂದ ಕಡಿದು ಹತ್ಯೆಗೈದನೆಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

News

ಪೋಕ್ಸೊ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಬಾಲಕಿಯ ಕುಟುಂಬಕ್ಕೆ ರೂಪಾಯಿ 5 ಲಕ್ಷ ಪರಿಹಾರ – ತೀರ್ಪು ಪ್ರಕಟ

ನ್ಯಾಯ ಒದಗಿಸಿ ಕೊಟ್ಟ ಪೊಲೀಸ್ ನಿರೀಕ್ಷಕ ಜೋನ್ಸನ್ ಡಿಸೋಜ ರವರಿಗೆ ವ್ಯಾಪಕ ಪ್ರಶಂಸೆ ಮಂಗಳೂರು : ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಫ್ಯಾಕ್ಟರಿ ಎಂಬಲ್ಲಿ 4 ವರ್ಷಗಳ ಹಿಂದೆ 8 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಕೊಲೆ (ಪೋಕ್ಸೊ) ಪ್ರಕರಣದ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯದಲ್ಲಿ ತ್ವರಿತಗತಿ ವಿಚಾರಣೆ ನಡೆಸಿ 3 ಜನ ಆರೋಪಿಗಳಿಗೆ  ಜೀವಾವಧಿ ಶಿಕ್ಷೆ ಮತ್ತು  ಬಾಲಕಿಯ ಕುಟುಂಬಕ್ಕೆ ರೂಪಾಯಿ 5 ಲಕ್ಷ ಪರಿಹಾರ ನೀಡುವಂತೆ ತೀರ್ಪು […]

News

ಬಂಟ್ವಾಳ ಪುರಸಭೆ ಉಪ ಚುನಾವಣೆ – ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪುರುಷೋತ್ತಮ ಎಸ್. ಬಂಗೇರ  ನಾಮಪತ್ರ ಸಲ್ಲಿಕೆ

ಬಂಟ್ವಾಳ : ಇಲ್ಲಿನ ಪುರಸಭೆಗೆ ನಡೆಯಲಿರುವ ಉಪ ಚುನಾವಣೆಗೆ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪುರುಷೋತ್ತಮ ಎಸ್. ಬಂಗೇರ ನವಂಬರ್ 8ರಂದು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಬೂಡಾ ಅಧ್ಯಕ್ಷ ಬೇಬಿ ಕುಂದರ್, ವಲಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರೋಡ್ರಿಗಸ್ ಹಾಗೂ ಲೋಕೇಶ್ ಕುಲಾಲ್ ಉಪಸ್ಥಿತರಿದ್ದರು.

News

ಕನ್ನಡ ಜ್ಯೋತಿ ರಥಕ್ಕೆ ಬಂಟ್ವಾಳದಲ್ಲಿ ಸ್ವಾಗತ

ಬಂಟ್ವಾಳ : ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಈ ಕುರಿತು ಎಲ್ಲರೂ ಪಾಲ್ಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಜ್ಯೋತಿ ರಥ ನಾಡಿನಾದ್ಯಂತ ಸಂಚರಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಹೇಳಿದರು. ನವಂಬರ್ 8ರಂದು ಶುಕ್ರವಾರ ಬೆಳಗ್ಗೆ ತಾಲೂಕಿನ ಬಿ.ಸಿ. ರೋಡಿಗೆ ಕನ್ನಡ ಜ್ಯೋತಿ ರಥ   ಆಗಮಿಸಿದ ಸಂದರ್ಭ, ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ವಿಧ್ಯುಕ್ತವಾಗಿ ಸ್ವಾಗತಿಸಿದ ಬಳಿಕ ಮಾತನಾಡಿದ […]

News

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನೂತನ ಶಸ್ತ್ರಚಿಕಿತ್ಸ ಕೊಠಡಿ ಕಾರ್ಯರಂಭ

ಮಂಗಳೂರು ನವಂಬರ್ 8 : ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣಗೊಂಡ ಹೊಸ ಶಸ್ತ್ರಚಿಕಿತ್ಸಾ ಕಟ್ಟಡದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಬುಧವಾರದಿಂದ ಶಸ್ತ್ರಚಿಕಿತ್ಸೆಗಳನ್ನು ಪ್ರಾರಂಭಿಸಲಾಗಿದ್ದು, ಮೊದಲನೇ ದಿನವೇ 7 ಶಸ್ತ್ರಚಿಕಿತ್ಸೆ ಮಾಡಲಾಗಿದೆ. ತಜ್ಞ ವೈದ್ಯ ಡಾ. ಸದಾನಂದ ಪೂಜಾರಿ ಹಾಗೂ ಆಸ್ಪತ್ರೆ ಸಿಬ್ಬಂದಿ ತಂಡ ಕಾರ್ಯರಂಭಕ್ಕೆ ಸಹಕಾರ ಮಾಡಿದ್ದಾರೆ. ಮೊದಲ ದಿವಸ ಡಾ. ಸುರೇಶ ಪೈ ತಂಡದವರಿಂದ ಥೋರಾಸಿಕ್ ಸರ್ಜರಿ ಮಾಡಲಾಯಿತು. ಡಾ. ಹೇಮಲತಾ ಹಾಗೂ ಡಾ. ವಿಶ್ವವಿಜೇತ ತಂಡವು ಐದು ಜನರ […]

News

ಕಾರ್ಕಳದ ಅರುಣೋದಯ ವಿಶೇಷ ಶಾಲೆಯ ಮುಖ್ಯಸ್ಥೆ ಭಗಿನಿ ಡೋನಾಲ್ಡಾ ಪಾಯ್ಸ್ ನಿಧನ

ಕಾರ್ಕಳದ ಜೀವನ್ ವೆಲ್ಫೇರ್ ಟ್ರಸ್ಟ್ ಇದರ ಸಂಸ್ಥಾಪಕಿ ಹಾಗೂ ಕಾರ್ಕಳ ಅರುಣೋದಯ ವಿಶೇಷ ಶಾಲೆಯ ಮುಖ್ಯಸ್ಥೆ, ಸುಮಾರು 35 ವರ್ಷಗಳಿಂದ ವಿಶೇಷ ಮಕ್ಕಳ ನಿಸ್ವಾರ್ಥ ಸೇವೆ ಸಲ್ಲಿಸಿದ ಜಿಲ್ಲಾ ರಾಜ್ಯೋತ್ಸವ ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ 81 ವರ್ಷ ಪ್ರಾಯದ ಅರುಣೋದಯ ಸಿಸ್ಟರ್ ಎಂದೇ ಪ್ರಖ್ಯಾತರಾಗಿದ್ದ ಭಗಿನಿ ಡೊನಾಲ್ದಾ ಪಾಯ್ಸ್ ಅಲ್ಪಕಾಲದ ಅಸೌಖ್ಯದಿಂದ ನವಂಬರ್ 7ರಂದು ನಿಧನರಾದರು. ಭಗಿನಿ ಡೊನಾಲ್ಟಾ ಪಾಯ್ಸ್ ರವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ,  ಕರಿಂಗಾಣ ಗ್ರಾಮದ ಸೆಬಾಸ್ಟಿಯನ್ ಪಾಯ್ಸ್ ಮತ್ತು […]

News

ಉಪ್ಪಿನಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ಶಿಕ್ಷಣದ ಕಾರ್ಯಾಗಾರ

ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ನವಂಬರ್ 5ರಂದು “ಆರೋಗ್ಯ ಶಿಕ್ಷಣ ಮತ್ತು ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಾಗಾರ”ವನ್ನು ನಡೆಸಲಾಯಿತು. ಇಂದ್ರಪ್ರಸ್ಥ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಹೆಚ್.ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಭೌತಿಕ ಮತ್ತು ಮಾನಸಿಕ ಅರೋಗ್ಯದ ಮಹತ್ವದ ಕುರಿತು ಮಾತನಾಡಿದರು. ಬಳಿಕ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮೊಯಿದ್ದೀನ್ ಆಶಿಕ್ MBBS ಹಾಗೂ ಡಾ. ಮರಿಯಂ ರೆನಿಶಾ ಬಸ್ತಿಕಾರ್ MBBS ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಕೆಲವೊಂದು ಪ್ರಯೋಗದ ಮುಖೇನ ಮಾಹಿತಿಯನ್ನು ನೀಡಿದರು.   ಕಾರ್ಯಕ್ರಮದ […]

News

ಹಿಂದುಳಿದ ವರ್ಗದ ಧಾರ್ಮಿಕ ಸಮಾನತೆಯ ಹರಿಕಾರರು ನಾರಾಯಣ ಗುರುಗಳು – ಗಣೇಶ್ ಪೂಂಜರೆಕೋಡಿ

ಬಂಟ್ವಾಳ : ನಾರಾಯಣ  ಗುರುಗಳು ಎಲ್ಲಾ ಹಿಂದುಳಿದ ವರ್ಗದವರಿಗೆ ಧೈರ್ಯ ತುಂಬಿ ಈ ಭೂಮಿಯಲ್ಲಿ ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಮಾಡಿದ ಕ್ರಾಂತಿಯಿಂದಾಗಿ ಇಂದು ಎಲ್ಲಾ ಹಿಂದುಳಿದ ಮಧ್ಯಮ‌ ವರ್ಗದ ಜನರು ಮುನ್ನಡೆಯುವಂತಾಗಿದೆ‌ ಎಂದು ಯುವವಾಹಿನಿ ಬಂಟ್ಟಾಳ ಘಟಕದ ಮಾಜಿ ಅಧ್ಯಕ್ಷ ಗಣೇಶ್ ಪೂಂಜರೆಕೋಡಿ ತಿಳಿಸಿದರು. ಅವರು ನವಂಬರ್ 7 ರಂದು ಸುಲತ ಬಿ.ಸಿ. ರೋಡ್ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 19ರಲ್ಲಿ ಗುರುಸಂದೇಶ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ […]

News

ಅಕ್ರಮ ಮರಳುಗಾರಿಕೆಗೆ ನೀರಿನಲ್ಲಿ ಮುಳುಗಿಸಿಟ್ಟ 7 ದೋಣಿಗಳ ಪತ್ತೆ – ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ ಮಾರ್ಗದರ್ಶನದಲ್ಲಿ ದಿಢೀರ್ ದಾಳಿ

ಮಂಗಳೂರು ನವಂಬರ್ 7 : ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ದೋಣಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಗುರುಪುರ ಅಡ್ಡೂರು ಸಮೀಪ ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ 9 ದೋಣಿಗಳನ್ನು ವಶಪಡಿಸಲಾಯಿತು. ಇದಲ್ಲದೆ, ಅಕ್ರಮ ಮರಳುಗಾರಿಕೆ ನಡೆಸಲು ಉಪಯೋಗಿಸುತ್ತಿದ್ದ 7 ದೋಣಿಗಳನ್ನು ನೀರಿನ ಅಡಿಯಲ್ಲಿ ಮುಳುಗಿಸಿಟ್ಟಿರುವುದು ದಾಳಿ ಸಂದರ್ಭದಲ್ಲಿ ಪತ್ತೆಯಾಗಿದೆ. ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ […]

You cannot copy content of this page