November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಕುಮಾರಿ ಪ್ರೇಕ್ಷಾ

ಬಂಟ್ವಾಳ : ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕ ವತಿಯಿಂದ ನಡೆಯುವ  ಬಂಟ್ವಾಳ ತಾಲೂಕು 18 ನೇ ಮಕ್ಕಳ ಸಾಹಿತ್ಯ ಸಮ್ಮೇಳನವು ಶಂಭೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಿರ್ಮಿಸಲಾಗುವ ರಾಮಚಂದ್ರ ರಾವ್ ಸಭಾಂಗಣದ ವಿ.ಮ. ಭಟ್ ವೇದಿಕೆಯಲ್ಲಿ ನವಂಬರ್ 19ರಂದು ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆತಿಥೇಯ ಸಂಸ್ಥೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕುಮಾರಿ ಪ್ರೇಕ್ಷಾ ಆಯ್ಕೆಯಾಗಿರುತ್ತಾರೆ ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಹೇಮಚಂದ್ರ ಭಂಡಾರದ ಮನೆ […]

News

ನೊಂದ ಗ್ಯಾರೇಜು ಸದಸ್ಯನಿಗೆ ಆಸರೆಯಾದ ಗ್ಯಾರೇಜ್ ಮಾಲಕರ ಸಂಘ (ರಿ.) ಬಂಟ್ವಾಳ ವಲಯ

ಬಂಟ್ವಾಳ : ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ಇದರ ವತಿಯಿಂದ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ತುತ್ತಾದ ಸಂಘದ ಸಕ್ರಿಯ ಸದಸ್ಯ ದಿನೇಶ್ ಕುಲಾಲ್ ರವರಿಗೆ ಮಾನವೀಯ ನೆಲೆಯಲ್ಲಿ, ಸಂಘದ ಸದಸ್ಯರೆಲ್ಲರೂ ಜೊತೆಗೂಡಿ ತುರ್ತು ಚಿಕಿತ್ಸೆಗಾಗಿ ಸುಮಾರು ಒಂದು ಲಕ್ಷದ ಒಂದು ಸಾವಿರದ ಐನೂರು ರೂಪಾಯಿಗಳ  ಸಹಾಯಧನವನ್ನು ಆಟೋ ಲೈನ್ಸ್ ನಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ  ದಿನೇಶ್ ಕುಲಾಲ್ ರವರ ಧರ್ಮಪತ್ನಿಗೆ ನೀಡಲಾಯಿತು. ಅಧ್ಯಕ್ಷ ಸುಧೀರ್ ಪೂಜಾರಿ ರವರು ಮಾತನಾಡಿ ಸಂಘದ ಸದಸ್ಯರ ಕಷ್ಟಗಳಿಗೆ  ಸ್ಪಂದಿಸುವುದು ಮಾನವ ಧರ್ಮ […]

News

ಬೆಳ್ಳಿಹಬ್ಬ ಆಚರಿಸಿದ ಕಥೊಲಿಕ ಉದ್ಯಮಿಗಳ ಸಂಸ್ಥೆ ‘ರಚನಾ’

ಬೆಳ್ಳಿ ಹಬ್ಬದ ಸವಿ ನೆನಪಿಗೆ ‘ರಚನಾ ಕಥೊಲಿಕ್ ಸೌಹಾರ್ದ ಸಹಕಾರಿ ಸಂಘ ನಿ.’ ಉದ್ಘಾಟನೆ ಮಂಗಳೂರು : ನವಂಬರ್ 3ರಂದು ಭಾನುವಾರ ಮಂಗಳೂರಿನ ಕಥೊಲಿಕ ಉದ್ಯಮಿಗಳ ಸಂಸ್ಥೆಯಾದ ‘ರಚನಾ ಸಂಸ್ಥೆ’ ಯು ಬೆಳ್ಳಿಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಿತು. ಬಹುತೇಕ ಕಥೊಲಿಕ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಕ್ಷಿಯಾದರು. ನಗರದ ಕುಲಶೇಖರ ಕೋರ್ಡೆಲ್ ಸಭಾಂಗಣದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಬೆಂಗಳೂರು ಮಹಾ ಧರ್ಮಕ್ಷೇತ್ರದ ಆರ್ಚ್ ಬಿಷಪ್ ಅತೀ ವಂದನೀಯ ಡಾ ಪೀಟರ್ ಮಚಾದೊ ಮಾತನಾಡಿ, “ಕರಾವಳಿಯ ಕ್ರೈಸ್ತ ಯುವ ಸಮುದಾಯ […]

News

ಸಜಿಪ ಮೂಡ ಗ್ರಾಮ ಪಂಚಾಯತ್ ಇದರ ಉಪಚುನಾವಣೆಗೆ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ಬಶೀರ್ ಬೊಳ್ಳಾಯಿ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮ ಪಂಚಾಯತ್ ಇಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಮತದಾನ ನಡೆಯಲಿದ್ದು, ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಇದರ ಬೆಂಬಲಿತ ಅಭ್ಯರ್ಥಿಯಾಗಿ ಬಶೀರ್ ಬೊಳ್ಳಾಯಿಯನ್ನು ಆಯ್ಕೆ ಮಾಡಲಾಯಿತು. ನವಂಬರ್ 4ರಂದು ಕಾರಾಜೆಯಲ್ಲಿ ನಡೆದ ಅಭ್ಯರ್ಥಿ ಘೋಷಣೆ ಸಭೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜೊತೆ ಕಾರ್ಯದರ್ಶಿ ಖಬೀರ್ ಅಕರಂಗಡಿಯವರು ಘೋಷಣೆ ಮಾಡಿದರು.

News

ಸಾಹಿತ್ಯ ತಾರೆ ಪ್ರಶಸ್ತಿಗೆ  ಆಯ್ಕೆಯಾದ ಬಂಟ್ವಾಳ ತಾಲೂಕಿನ ಓಜಾಲ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್  ಹಿರಿಯ ಪ್ರಾಥಮಿಕ ಶಾಲೆ  

ಬಂಟ್ವಾಳ : ಮಕ್ಕಳ ಕಲಾ ಲೋಕ ವತಿಯಿಂದ ನವಂಬರ್ 19ರಂದು ಬಂಟ್ವಾಳ ತಾಲೂಕಿನ ಶಂಭೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿರುವ  ಬಂಟ್ವಾಳ ತಾಲೂಕಿನ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಲ್ಲಿ ಮಕ್ಕಳ ಸಾಹಿತ್ಯಾದಿ ಕಲೆಗಳಲ್ಲಿ ತೊಡಗಿಸಿಕೊಂಡಿರುವ ಶಾಲೆಗೆ ನೀಡಲಾಗುವ ಸಾಹಿತ್ಯ ತಾರೆ ಪ್ರಶಸ್ತಿಗೆ ಓಜಾಲ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಲಾಗಿದೆ.  ಕಳೆದ ಕೆಲವು ವರ್ಷಗಳಿಂದ ಶಾಲೆಯು ಸಾಹಿತ್ಯಾದಿ ಚಟುವಟಿಕೆಗಳನ್ನು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುತ್ತಿರುವುದನ್ನು […]

News

ಮಾರಿಪಳ್ಳ ಕಡೆಗೋಲಿಯಲ್ಲಿ ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಓರ್ವ ಸಾವು ಮತ್ತೊರ್ವ ಗಂಭೀರ

ಬಂಟ್ವಾಳ : ತಾಲೂಕಿನ ಮಾರಿಪ್ಪಳ್ಳ ಸಮೀಪದ  ಕಡೆಗೋಳಿ ಎಂಬಲ್ಲಿ ಬೈಕ್ ಗೆ ಖಾಸಗಿ‌ ಬಸ್  ಡಿಕ್ಕಿಯಾದ ಪರಿಣಾಮ  ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನವಂಬರ್ 3ರಂದು ಭಾನುವಾರ ರಾತ್ರಿ ನಡೆದಿದೆ.     ಕಡೆಗೋಳಿ ನಿವಾಸಿ ಪ್ರವೀಣ (30) ಸ್ಥಳದಲ್ಲಿಯೇ ಮೃತಪಟ್ಟ ವ್ಯಕ್ಯಿಯಾಗಿದ್ದು, ಸ್ನೇಹಿತ ಸಂದೀಪ ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರು ಸೇಲ್ಸ್ ಮ್ಯಾನ್ ಕೆಲಸಗಾರರಾಗಿದ್ದು, ತನ್ನ ಕೆಲಸವನ್ನು ಮುಗಿಸಿ ಮನೆಗೆ ಜೊತೆಯಾಗಿ […]

News

ಬಾಲಬಂಧು ಪುರಸ್ಕಾರಕ್ಕೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ಸಹಶಿಕ್ಷಕಿ ಸುಧಾ ನಾಗೇಶ್ ಆಯ್ಕೆ

ಬಂಟ್ವಾಳ : ನವಂಬರ್ 19ರಂದು ಬಂಟ್ವಾಳ ತಾಲೂಕಿನ ಶಂಭೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿರುವ  ಬಂಟ್ವಾಳ ತಾಲೂಕಿನ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಲ್ಲಿ ಮಕ್ಕಳ ಸಾಹಿತ್ಯಾದಿ ಕಲೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗೆ ನೀಡಲಾಗುವ ಬಾಲಬಂಧು ಪುರಸ್ಕಾರಕ್ಕೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ಸಹ ಶಿಕ್ಷಕಿ ಸುಧಾ ನಾಗೇಶ್ ಇವರನ್ನು ಆಯ್ಕೆ ಮಾಡಲಾಗಿದೆಯೆಂದು ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ ಬಾಯಾರು ತಿಳಿಸಿದ್ದಾರೆ. ಕವಯಿತ್ರಿಯಾಗಿರುವ ಇವರು ಮೂಡಲಮನೆ, ಹೃದಯರಾಗ, ಹನಿ […]

News

ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್‌ ಮುಂಡಾಡಿ

ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಚೇತನ್‌ ಮುಂಡಾಡಿ ಇದೀಗ ಮತ್ತೊಂದು ಚಿತ್ರದೊಂದಿಗೆ ಸಿನಿ ಪ್ರಿಯರ ಮುಂದೆ ಬಂದಿದ್ದಾರೆ. ಅದುವೇ ʼದಿಗಿಲ್‌ʼ (Digil) b ಈ ಬಾರಿ ಚೇತನ್‌ ಮುಂಡಾಡಿ ಅವರು ತುಳುನಾಡಿನಲ್ಲಿ ಆರಾಧಿಸುವ ಜುಮಾದಿ ಬಂಟ ದೈವದ ಕಥೆಯನ್ನು ತೆರೆಯ ಮೇಲೆ ತರುತ್ತಿದ್ದಾರೆ. ಜುಮಾದಿ ಬಂಟ ದೈವ ಮತ್ತು ಮಂಗಳಮುಖಿಯ ನಡುವಿನ ಕಥಾನಕವನ್ನು ಹೇಳಲು ಹೊರಟಿದ್ದಾರೆ. ʼದಿಗಿಲ್‌ʼ ಎಂದರೆ ಭಯ ಎಂದರ್ಥ. ಈ ಬಗ್ಗೆ ಮಾತನಾಡುವ ಅವರು, “ʼದಿಗಿಲ್‌ʼ ಹೊಸತನದ ಕಥೆ. ಸತ್ಯ […]

News

ಮಂಗಳೂರಿನ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ಕಥೊಲಿಕ್ ಕ್ರಿಶ್ಚಿಯನ್ ಪರವಾಗಿ ಸಲ್ಲಿಸಿದ ದೀಪಾವಳಿ ಶುಭಾಶಯ

ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ್ ಕ್ರಿಶ್ಚಿಯನ್ ಪರವಾಗಿ ಮಂಗಳೂರು ಧರ್ಮ ಕ್ಷೇತ್ರದ ವತಿಯಿಂದ ಮಂಗಳಾದೇವಿ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ದೀಪಾವಳಿ ಶುಭಾಶಯಗಳನ್ನು ಸಲ್ಲಿಸಲಾಯಿತು. ಮಠದ ಸ್ವಾಮಿ ಶ್ರೀ ಜಿತಕಾಮಾನಂದಜಿ ಅವರನ್ನು ಭೇಟಿ ಮಾಡಿದ ಮಂಗಳೂರು ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕರಾದ ಅತೀ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ, ಕಥೊಲಿಕ್ ಸಭಾ ಕೇಂದ್ರೀಯ ಸಮಿತಿಯ ಅಧ್ಯಕ್ಷ ಆಲ್ವೀನ್ ಡಿಸೋಜಾ ಪಾನೀರ್ ಅವರು ಶುಭಾಶಯ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮಿಥುನ್ ಸಿಕ್ವೇರಾ, ಬಸವರಾಜ್, ಉದ್ಯಮಿ ಹಾಗೂ ಸಮಾಜ […]

News

ಸಿದ್ಧಕಟ್ಟೆ ವೀರ-ವಿಕ್ರಮ ಕಂಬಳ ಕರೆಯಲ್ಲಿ ಬೆಳಗಿದ  ಹಣತೆ

ಬಂಟ್ವಾಳ : ಇಲ್ಲಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಸುತ್ತಲೂ ದೀಪಾವಳಿ ಹಬ್ಬದ ಪ್ರಯುಕ್ತ  ಕಂಬಳ ಸಮಿತಿಯು ಸಾಲು ಸಾಲು ಹಣತೆ ಬೆಳಗಿಸಿ ಗಮನ ಸೆಳೆದಿದೆ.    ಕಳೆದ ವರ್ಷ ಸುಸಜ್ಜಿತ ಕರೆ ನಿರ್ಮಿಸಿ ಯಶಸ್ವಿ ಕಂಬಳ ನಡೆದಿದ್ದು, ಈ ಬಾರಿ ಎರಡನೇ ವರ್ಷದ ಕಂಬಳಕ್ಕೆ ಕರೆ ಸಿದ್ಧಗೊಂಡಿದೆ. ಪೂಂಜ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ ಆಚಾರ್ಯ, ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ಪ್ರಮುಖರಾದ ಬಾಬು ರಾಜೇಂದ್ರ ಶೆಟ್ಟಿ, […]

You cannot copy content of this page