November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us

ಕೊಂಕಣಿ ಸಾಹಿತ್ಯದಲ್ಲಿ ಸುವರ್ಣ ಪಯಣದ ಸಂಭ್ರಮ – ಡಾ. ಎಡ್ವರ್ಡ್ ನಜ್ರೆತ್ ರವರಿಗೆ ಸನ್ಮಾನ

ನಗರದ ಖ್ಯಾತ ಮೂಳೆ ರೋಗ ತಜ್ಞ ಹಾಗೂ ಮುಕ್ಕದ ಶ್ರೀನಿವಾಸ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಡಾ. ಎಡ್ವರ್ಡ್ ನಜ್ರೆತ್‌ರವರು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ 50 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಕರ್ನಾಟಕ ಕೊಂಕಣಿ ಲೇಖಕರ ಸಂಘವು ಆದಿತ್ಯವಾರ ಸಪ್ಟೆಂಬರ್ 15ರಂದು ನಗರದ ಸಂದೇಶ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.   ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್ ಮುಖ್ಯ ಅತಿಥಿಗಳಾಗಿದ್ದು, ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಂದನೀಯ ಡಾ. ಮೈಕಲ್ ಸಾಂತುಮಾಯೆರ್ ಅಧ್ಯಕ್ಷತೆ ವಹಿಸಿದ್ದರು.  […]

ಮರಿಯಾಶ್ರಮ್ ತಲಪಾಡಿ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಮರಿಯಶ್ರಮ್ ಘಟಕ, ಸಿ.ಓ.ಡಿ.ಪಿ. (ರಿ.) ಮಂಗಳೂರು, ಪ್ರವರ್ತಿತ ಸಿಂಚನ ಮತ್ತು ಸಾಧನ ಮಹಾಸಂಘ ತಲಪಾಡಿ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಆಭಿವ್ರದ್ದಿ ಕೇಂದ್ರ, ಯೆನಪೋಯ (ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ) ದೇರಳಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಮರಿಯಾಶ್ರಮ್ ತಲಪಾಡಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಮರಿಯಶ್ರಮ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೆಗರಿ ಪಿರೇರಾರವರು ದೀಪ ಬೆಳಗಿಸುವ ಮೂಲಕ ಉದ್ಗಾಟಿಸಿದರು. ಕಾರ್ಯಕ್ರಮದಲ್ಲಿ ಯೆನಪೋಯ ಆಸ್ಪತ್ರೆ ವೈದ್ಯರಾದ […]

ಸಂಚಾರ ನಿಯಮ ಉಲ್ಲಂಘಿಸಿದರೆ ಇನ್ನು ಮುಂದೆ ಡಿಎಲ್‌ ಅಮಾನತು…!!

ಮಂಗಳೂರು: ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸುವ ಮೊದಲು ವಾಹನ ಚಾಲಕರು ಸಾಕಷ್ಟು ಚಿಂತಿಸಬೇಕಾಗಿದೆ. ಸಿಕ್ಕಿಬಿದ್ದರೆ ದಂಡ ಪಾವತಿಸಿ ಸುಮ್ಮನಾಗಬಹುದು ಎಂದು ಭಾವಿಸಿದ್ದರೆ ಆಪಾಯ ಖಚಿತ. ಯಾಕೆಂದರೆ ಪೊಲೀಸರು ಇಂಥವರ ಚಾಲನಾ ಪರವಾನಿಗೆಯನ್ನು ಅಮಾನತು ಮಾಡುವ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ‘ಡಿಎಲ್‌ ಅಮಾನತು’ ಅಸ್ತ್ರವನ್ನು ಹೆಚ್ಚಾಗಿ ಪ್ರಯೋಗಿಸಲು ಮುಂದಾಗಿದ್ದಾರೆ.  ದಕ್ಷಿಣ ಕನ್ನಡ ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಪೊಲೀಸರು ಕೂಡ ಡಿಎಲ್‌ ಅಮಾನತಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಒಂದು […]

ಪಾವೂರು ಉಳಿಯ ನಿವಾಸಿಗಳಿಂದ ಅಕ್ರಮ ಮರಳು ದಂಧೆ ವಿರೋಧಿಸಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ.

ಮಂಗಳೂರು : ಪಾವೂರು ಉಳಿಯ ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಜಿಲ್ಲಾಡಳಿತದ ನಿರ್ಲಕ್ಷ್ಯವನ್ನು ಖಂಡಿಸಿ ಇಲ್ಲಿನ ನಿವಾಸಿಗಳು ಸಪ್ಟಂಬರ್ 15ರ ಭಾನುವಾರ ನೇತ್ರಾವತಿ ನದಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಅಕ್ರಮ ಚಟುವಟಿಕೆಗಳನ್ನು ತಡೆಯಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನಾಕಾರರು ನದಿಯಲ್ಲಿ ಭಾಗಶಃ ಮುಳುಗಿದರು. ಇದು ವಿಧಾನ ಸಭಾ ಅಧ್ಯಕ್ಷ ಸನ್ಮಾನ್ಯ ಯು.ಟಿ. ಖಾದರ್ ರವರ ಕ್ಷೇತ್ರವಾಗಿದ್ದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮರಳು ದಂದೆಯಿಂದ ನದಿಯ ದಡದಲ್ಲಿರುವ ಪ್ರದೇಶಗಳು ಮಾಯವಾಗಿದೆಯೆಂದು ಸ್ಥಳೀಯರು ಮಾಧ್ಯಮಗಳಿಗೆ […]

ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ  ಪ್ರವೀಣ್ ರೊಡ್ರಿಗಸ್ ನಾಮ ನಿರ್ದೇಶನ

ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧಿಕಾರೇತರ ಸದಸ್ಯರಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೊಡ್ರಿಗಸ್ ಕಾವಳಪಡೂರು ನಾಮ ನಿರ್ದೇಶನ ಗೊಂಡಿದ್ದಾರೆ.   ಉಳಿದಂತೆ ಮುಹಮ್ಮದ್ ರಿಯಾಝ್ ನೆಹರೂ ನಗರ, ವೆಂಕಪ್ಪ ಪೂಜಾರಿ ಅರ್ಬಿಗುಡ್ಡೆ, ಅಶೋಕ್ ಭಂಡಾರಿಬೆಟ್ಟು, ರೇಶ್ಮಾ ಟೆಲ್ಲಿಸ್ ಬೋಳಂಗಡಿ, ಪುರುಷೋತ್ತಮ ಬಂಗೇರ ಮಂಡಾಡಿ, ರವೀಂದ್ರ ಸಪಲ್ಯ ಬೋಳಂತೂರು ಹಾಗೂ ಶಿವಾನಂದ ನಾಯ್ಕ ಕೊಳ್ನಾಡು ಅವರನ್ನು ರಾಜ್ಯಪಾಲರ ಆಜ್ಞಾನುಸಾರ  ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ […]

ಪೊಲೀಸರ ವಿರುದ್ಧದ “ಇಲಾಖಾ ವಿಚಾರಣೆ” – ನಿವೃತ್ತ ಜಡ್ಜ್‌ ಹೆಗಲಿಗೆ

ಪೊಲೀಸ್ ಇಲಾಖೆಯಲ್ಲಿ ವಿವಿಧ ಆರೋಪ ಎದುರಿಸುತ್ತಿರುವ ಸಿಬ್ಬಂದಿ ವಿರುದ್ಧದ ಇಲಾಖಾ ವಿಚಾರಣೆ (ಡಿಪಾರ್ಟ್‌ಮೆಂಟಲ್ ಎನ್‌ಕ್ವಯರಿ)ಯ ಪದ್ಧತಿಯನ್ನು ಬದಲಿಸಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇಲಾಖಾ ವಿಚಾರಣೆಯ ಹಿಂದಿನ ನಿಯಮದ ಪ್ರಕಾರ, ಆಯಾ ಘಟಕದ ಅಧಿಕಾರಿಯನ್ನೇ ಪ್ರಕರಣದ ವಿಚಾರಣೆಗೆ ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗುತ್ತಿತ್ತು. ಇನ್ನು ಮುಂದೆ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳುವಂತೆ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರಿ ಆದೇಶದ ಜೊತೆಗೆ ಜಿಲ್ಲಾವಾರು ಇಲಾಖಾ ವಿಚಾರಣೆ ನಡೆಸಲು ಒಪ್ಪಿಕೊಂಡಿರುವ 119 ನಿವೃತ್ತ ನ್ಯಾಯಾಧೀಶರ ಹೆಸರುಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. […]

FMMCH Inaugurates Two State-of-the-Art Operation Theatres

Mangaluru : In a remarkable advancement for healthcare services, Father Muller Medical College and Hospital inaugurated two new state-of-the-art Operation Theatres (OT) in the Father Muller Operation Theatre Complex located in the -2 basement of the General Ward on the 14th of September, 2024, at 8:30 AM. The ceremony was presided over by Rev. Fr […]

Father Muller College of Pharmaceutical Sciences Receives Approval for Bachelor of Pharmacy Course

Mangalore, September 2024: The Father Muller College of Pharmaceutical Sciences (FMCOPS), a new addition to the renowned Father Muller Charitable Institutions (FMCI), has been granted approval to offer the Bachelor of Pharmacy (B. Pharm) course for the academic year 2024-25. The Pharmacy Council of India has officially permitted FMCOPS to commence admissions for the program, […]

ಬ್ಯಾಂಕಿನೊಳಗಿಂದಲೇ ಲಕ್ಷಾಂತರ ರೂಪಾಯಿ ನಗದು ಇದ್ದ ಬ್ಯಾಗ್ ಕಳವು

ಬಂಟ್ವಾಳ : ನಿವೃತ್ತ ಸೈನಿಕ ರೋರ್ವರು ಬಿ. ಸಿ. ರೋಡ್  ರಾಷ್ಟ್ರೀಕೃತ ಬ್ಯಾಂಕಿನಿಂದ ಹಣವನ್ನು ನಗದೀಕರಿಸಿದ ಕೆಲವೇ ಸಮಯದಲ್ಲಿ ಲಕ್ಷಾಂತರ ರೂಪಾಯಿ ನಗದು ಇದ್ದ ಬ್ಯಾಗ್ ಕಳವಾದ ಘಟನೆ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ತಾಲೂಕಿನ ರೈಮಂಡ್ ಲೋಬೋ ನಗರದ ಗ್ಲಾಡಿರಾ ನಿವಾಸಿಯಾಗಿರುವ ಅಂಬ್ರೋಸ್ ಡಿಸೋಜ ಅವರ 1.30 ಲಕ್ಷ ರೂಪಾಯಿ ಎಸ್.ಬಿ.ಐ. ಬ್ಯಾಂಕ್ ಬಿ. ಸಿ. ರೋಡ್ ಶಾಖೆಯಿಂದ  ಕಳವಾಗಿದೆ. ಅಂಬ್ರೋಸ್ ಅವರು ನಿವೃತ್ತ ಸೈನಿಕರಾಗಿದ್ದು, ಅವರು ಬರುವ ಪೆನ್ಸನ್ […]

ಮನೆಯಲ್ಲಿ ಯಾರು ಇಲ್ಲದ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ನಗ ನಗದು ಕಳವು

ಬಂಟ್ವಾಳ : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದುವಿನ  ಮನೆಯೊಂದರಲ್ಲಿ ಯಾರು ಇಲ್ಲದ ವೇಳೆ ಮುಂಬಾಗಿಲ ಚಿಲಕ ಮುರಿದು ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗ ನಗದು ಕಳವುಗೈದಿರುವ ಬಗ್ಗೆ ಗುರುವಾರ ಬೆಳಕಿಗೆ ಬಂದಿದೆ. ಪುದು ಗ್ರಾಮದ ಪೆರಿಯಾರ್ ಬಾಲ್ಪಬೊಟ್ಟು ನಿವಾಸಿ ಮಹಮ್ಮದ್ ಇಕ್ಬಾಲ್ ಅವರು ಪತ್ನಿ ಜೊತೆ ಸಪ್ಟಂಬರ್ 8ರಂದು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ ಸಪ್ಟಂಬರ್ 12ರಂದು ಮನೆಗೆ ವಾಪಸು ಬಂದಿದ್ದು, ಮನೆಯ ಮುಂಬಾಗಿಲ ಚಿಲಕ ಮುರಿದು ಹಾಕಿದ್ದು ಬಾಗಿಲು […]

You cannot copy content of this page