November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us

ಮುಂಬೈ ಗಾಣಿಗ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯರಿಗೆ ಮಾತೃ ವಿಯೋಗ

ಬಂಟ್ವಾಳ : ರಾಯಿ ಸಮೀಪದ ದೈಲ ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಪದ್ಮನಾಭ ಸಪಲ್ಯ ರಾಯಿ ಇವರ ಪತ್ನಿ ಕುಸುಮಾ ಪಿ. ಸಪಲ್ಯ (93) ಇವರು ಅಸೌಖ್ಯದಿಂದ ಶುಕ್ರವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಮೃತರು ಮುಂಬೈ ಸಾಫಲ್ಯ (ಗಾಣಿಗ) ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯ ಸಹಿತ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.     ವಿವಿಧ ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದ ಮೃತರ ಅಂತ್ಯಕ್ರಿಯೆ ಇಂದು ಸಪ್ಟಂಬರ್ 14 ರಂದು […]

ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ

  ಬಂಟ್ವಾಳ : ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧಿಕಾರೇತರ ಸದಸ್ಯರಾಗಿ ವೆಂಕಪ್ಪ ಪೂಜಾರಿ ಅರ್ಬಿಗುಡ್ಡೆ ನಾಮ ನಿರ್ದೇಶನ ಗೊಂಡಿದ್ದಾರೆ. ದಕ್ಶಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಉಳಿದಂತೆ ಮುಹಮ್ಮದ್ ರಿಯಾಝ್ ನೆಹರೂ ನಗರ, ಜೋಸೆಫ್ ಪ್ರವೀಣ್ ರೋಡ್ರಿಗಸ್ ಕಾವಳಪಡೂರು, ಅಶೋಕ್ ಭಂಡಾರಿಬೆಟ್ಟು, ರೇಶ್ಮಾ ಟೆಲ್ಲಿಸ್ ಬೋಳಂಗಡಿ, ಪುರುಷೋತ್ತಮ ಬಂಗೇರ ಮಂಡಾಡಿ, ರವೀಂದ್ರ ಸಪಲ್ಯ ಬೋಳಂತೂರು ಹಾಗೂ ಶಿವಾನಂದ […]

ಅಸೈಗೋಳಿ ಕ್ಸೇವಿಯರ್ ಐಟಿಐ ಇದರ ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಪಾನೀರ್ ಆಯ್ಕೆ.

ಅಸೈಗೋಳಿಯಲ್ಲಿರುವ ಕ್ಸೇವಿಯರ್ ಎಜ್ಯುಕೇಶನ್ ಟ್ರಸ್ಟ್ (ರಿ.) ಇವರು ನಡೆಸುತ್ತಿರುವ ಕ್ಸೇವಿಯರ್ ಐಟಿಐ ಇದರ ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಪಾನೀರ್ ಆಯ್ಕೆಯಾಗಿರುತ್ತಾರೆ. ಈ ಟ್ರಸ್ಟ್ 1984ರಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ಹಿಂದುಳಿದ ಮತ್ತು ಗ್ರಾಮಿಣ ಯುವಕರಿಗೆ ತಾಂತ್ರಿಕ ತರಬೇತಿ ನೀಡುವ ಉದ್ದೇಶದಿಂದ ಜಾತಿ, ಮತ ಮತ್ತು ಧರ್ಮ ಲೆಕ್ಕಿಸದೆ ಸಮಾಜದ ಉದ್ಧಾರಕ್ಕಾಗಿ  ಸ್ಥಾಪನೆಗೊಂಡಿತು. ಕ್ಸೇವಿಯರ್ ಟ್ರಸ್ಟ್ ವತಿಯಿಂದ 1984ರಲ್ಲಿ ಮುಕ್ಕದಲ್ಲಿ ಕ್ಸೇವಿಯರ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ (XITC) ಎಂದು ಸ್ಥಾಪನೆಗೊಂಡು, ತದನಂತರ 1992ರಲ್ಲಿ ಮುಕ್ಕದಿಂದ ಕೊಣಾಜೆ […]

ಕೊಂಕಣ ರೈಲ್ವೆ ನೇಮಕಾತಿ 2024: 190 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

ಕೊಂಕಣ ರೈಲ್ವೆ ನಿಗಮ (KRCL) 2024 ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 190 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 2024 ಸೆಪ್ಟೆಂಬರ್ 16ರಿಂದ 2024 ಅಕ್ಟೋಬರ್ 6ರವರೆಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ವಿವರ ಹಾಗೂ ಹುದ್ದೆಗಳ ಹೆಸರು: ಟೆಕ್ನಿಷಿಯನ್-I II: 35 ಹುದ್ದೆಗಳು ಟ್ರ್ಯಾಕ್ ಮೆಂಟೈನರ್: 35 ಹುದ್ದೆಗಳು ಅಸಿಸ್ಟೆಂಟ್ ಲೊಕೊ ಪೈಲಟ್: 15 ಹುದ್ದೆಗಳು ಗೂಡ್ಸ್ ಟ್ರೈನ್ ಮ್ಯಾನೇಜರ್: 5 ಹುದ್ದೆಗಳು ಸ್ಟೇಷನ್ ಮಾಸ್ಟರ್: 10 ಹುದ್ದೆಗಳು ಪಾಯಿಂಟ್ಸ್ ಮ್ಯಾನ್: 60 ಹುದ್ದೆಗಳು […]

ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೊಕ್ಕಡ ವಲಯ ಮಟ್ಟದ ಪ್ರತಿಭಾ ಕಾರಂಜಿ

ಉಜಿರೆ: ಶಾಲಾ ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಮತ್ತು ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ ಇದರ ಸಹಭಾಗಿತ್ವದಲ್ಲಿ ಕೊಕ್ಕಡ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸಪ್ಟಂಬರ್ 11ರಂದು ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ವಹಿಸಿದ್ದರು. ತಾಲೂಕಿನ ಶಿಕ್ಷಣಾಧಿಕಾರಿ ತಾರಾ ಕೇಸರಿಯವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ವೇಳೆ […]

Saint Philomena College Holds Youth Red Cross Orientation

The Youth Red Cross of Saint Philomena College, Puttur, organized an impactful orientation program for its volunteers. The event was inaugurated with a tribute to Jean Henry Dunant, the founder of the Red Cross and the first recipient of the Nobel Peace Prize, with the garlanding of his portrait. In his presidential address, Principal Rev. […]

ಸ್ಕೇಟಿಂಗ್ ನಲ್ಲಿ ಮಾಣಿ ಬಾಲವಿಕಾಸ ಶಾಲೆಯ ವಿದ್ಯಾರ್ಥಿ ಚಿಂತನ್ ರಾಜ್ಯಮಟ್ಟಕ್ಕೆ ಆಯ್ಕೆ.

ಬಂಟ್ವಾಳ :  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಸೆಪ್ಟೆಂಬರ್ 12ರಂದು ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿ ಮಂಗಳೂರಿನಲ್ಲಿ ನಡೆದ 14ರ ವಯೋಮಾನದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಚಿಂತನ್ 1000 ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸ್ಕೇಟಿಂಗ್ ಸ್ಪರ್ಧೆಯ 500 ಮೀಟರ್ ವಿಭಾಗದಲ್ಲಿಯೂ ದ್ವಿತೀಯ ಸ್ಥಾನ ಪಡೆದಿರುವ ಈತ ಬಾಳ್ತಿಲ ಗ್ರಾಮದ […]

ಎಸ್.ಡಿ.ಪಿ.ಐ. ಬಂಟ್ವಾಳ ವತಿಯಿಂದ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ವಿಳಂಬದ ವಿರುದ್ಧ ಹೆದ್ದಾರಿ ತಡೆದು ಪ್ರತಿಭಟನೆ

ಬಂಟ್ವಾಳ : ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ವಿಳಂಬದ ವಿರುದ್ಧ ಬಿ.ಸಿ. ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಗುರುವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಎಸ್.ಎಚ್. ಮಾತನಾಡಿ, 20 ದಿವಸಗಳ ಒಳಗೆ ಸರ್ವಿಸ್ ರಸ್ತೆಯನ್ನು ಡಾಮರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಕೆ ಆಗುವವರೆಗೂ […]

ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೌಷ್ಠಿಕತೆ, ಆರೋಗ್ಯ ಮತ್ತು ಸ್ವಚ್ಛತೆ ಮಾಹಿತಿ ಕಾರ್ಯಕ್ರಮ

ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮತ್ತು ಧರ್ಮಜ್ಯೋತಿ ಸಮಾಜ ಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೌಷ್ಠಿಕತೆ, ಆರೋಗ್ಯ ಮತ್ತು ಸ್ವಚ್ಛತೆ ಮಾಹಿತಿ ಕಾರ್ಯಕ್ರಮವನ್ನು ಸಪ್ಟಂಬರ್ 6 ರಂದು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ರೆನಿಟಾ ಲೂವಿಸ್‌ರವರು ಮಕ್ಕಳಿಗೆ ಪೌಷ್ಟಿಕತೆಯ ಬಗ್ಗೆ ಸವಿಸ್ತಾರವಾಗಿ “ದಾರಿ ಬದಿಯಲ್ಲಿ ಮಾರುವಂತಹ ತಿಂಡಿ ತಿನಿಸು (ಜಂಕ್ ಫುಡ್)ಗಳಿಂದ ಆಗುವ ದುಷ್ಪರಿಣಾಮ”ಗಳ ಬಗ್ಗೆ ತಿಳಿಸಿದರು.  350 ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ 3 BSW […]

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರಾಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮ

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸ್ಟಾಫ್‌ ಅಸೋಸಿಯೇಶನ್‌ ವತಿಯಿಂದ ಕಾಲೇಜಿನಲ್ಲಿ ಸುದೀರ್ಘ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ ಉಪಪ್ರಾಂಶುಪಾಲರಾದ ಡಾ| ಪಿ. ಎಸ್‌. ಕೃಷ್ಣ ಕುಮಾರ್‌ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ| ನಾಗರಾಜು ಎಂ. ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ಅತೀ ವಂ| ಲಾರೆನ್ಸ್‌ ಮಸ್ಕರೇನಸ್‌ರವರು ಡಾ| ಪಿ. ಎಸ್‌. ಕೃಷ್ಣ ಕುಮಾರ್‌ ಹಾಗೂ ನಾಗರಾಜು ಎಂ. ರವರ ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು “ನಿವೃತ್ತಿಯು […]

You cannot copy content of this page