ಕರಾವಳಿ ಕರ್ನಾಟಕದಲ್ಲಿ ಐಟಿ ಕ್ರಾಂತಿ: ನ್ಯಾನೋ-GCCಗಳ ಸ್ಥಾಪನೆಗೆ ಹಾದಿ ಸುಗಮಗೊಳಿಸಲಿದೆ SBPಯ ‘ಬೇಸ್‌ಕ್ಯಾಂಪ್’
ಶಾಸಕ ಭರತ್ ಶೆಟ್ಟಿ ಅವರಿಂದ ಲೋಕಾರ್ಪಣೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಕರಾವಳಿ ಕರ್ನಾಟಕವನ್ನು ಭಾರತದ ಮುಂದಿನ ತಂತ್ರಜ್ಞಾನ ಹಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಸಿಲಿಕಾನ್ ಬೀಚ್ ಪ್ರೋಗ್ರಾಂ (SBP) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಪ್ರದೇಶದಲ್ಲಿ ನ್ಯಾನೋ-ಜಿ ಸಿಸಿ (Nano-GCC) ಮತ್ತು ಉಪ-ಕಚೇರಿಗಳನ್ನು ತೆರೆಯಲು ಬಯಸುವ ಕಂಪನಿಗಳಿಗೆ ಆಸರೆಯಾಗಲು ‘ಬೇಸ್‌ಕ್ಯಾಂಪ್’ ಎಂಬ ನೂತನ ಉಪಕ್ರಮವನ್ನು ಇಂದು ಏಪ್ರಿಲ್ 18ರಂದು ಶನಿವಾರ ಅಧಿಕೃತವಾಗಿ ಉದ್ಘಾಟಿಸಲಾಯಿತು. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಭರತ್ ಶೆಟ್ಟಿ ಅವರು ಈ […]













