ನಿಡುವಾಳೆಗೆ ಹೆಮ್ಮೆಯ ತಂದ ‘ಚಿನ್ನದ ಹುಡುಗಿ’ – ಬಿ.ಟೆಕ್‌ನಲ್ಲಿ ರಿಷಲ್ ತಾವ್ರೊಗೆ ಪ್ರಥಮ ರ್‍ಯಾಂಕ್!
ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ರಿಷಲ್ ತಾವ್ರೊ, ಬಿ.ಟೆಕ್ ಪದವಿಯಲ್ಲಿ ಅತ್ಯುನ್ನತ ಸಾಧನೆಗೈದು ಪ್ರಥಮ ರ್‍ಯಾಂಕ್‌ನೊಂದಿಗೆ ಚಿಹ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ರಿಷಲ್, ಇತ್ತೀಚೆಗೆ ನಡೆದ ಕಾಲೇಜಿನ ಘಟಿಕೋತ್ಸವದಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಶೈಕ್ಷಣಿಕ ಜೀವನದ ಉದ್ದಕ್ಕೂ ಶಿಸ್ತು ಮತ್ತು ಪರಿಶ್ರಮವನ್ನು ಮೈಗೂಡಿಸಿಕೊಂಡಿದ್ದ ಇವರು, ಇದೀಗ ಇಡೀ ಜಿಲ್ಲೆ ಮೆಚ್ಚುವಂತಹ ಸಾಧನೆ ಮಾಡುವ ಮೂಲಕ ನಿಡುವಾಳೆ ಗ್ರಾಮದ ಕೀರ್ತಿಯನ್ನು ರಾಜ್ಯಮಟ್ಟಕ್ಕೆ ಪಸರಿಸಿದ್ದಾರೆ. ಸಾಧನೆಯ ಹಿಂದೆ ಪೋಷಕರ […]













