October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉಪ್ಪಳದಲ್ಲಿ ರಸ್ತೆ ಕಾಮಗಾರಿ ಗುಂಡಿಗೆ ಬಿದ್ದ ಐಷಾರಾಮಿ ಕಾರು – ಸಾರ್ವಜನಿಕರ ಸಹಾಯದಿಂದ ಚಾಲಕನ ರಕ್ಷಣೆ, ತನಿಖೆ ವೇಳೆ ಸಿಕ್ಕಿಬಿದ್ದ ಅಕ್ರಮ ಮದ್ಯದ ಜಾಲ!

ಮಂಜೇಶ್ವರ ಇಲ್ಲಿನ ಉಪ್ಪಳ ಗೇಟ್ ಬಳಿ ರಸ್ತೆ ಕಾಮಗಾರಿಗಾಗಿ ಮುಚ್ಚಲಾಗಿದ್ದ ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ನುಗ್ಗಿದ ಕಾರೊಂದು ಆಳವಾದ ಗುಂಡಿಗೆ ಬಿದ್ದ ಘಟನೆ ನಿನ್ನೆ ಜೂನ್ 1ರಂದು ಸೋಮವಾರ ರಾತ್ರಿ ಸಂಭವಿಸಿದೆ. ಅಪಘಾತದ ಬೆನ್ನಲ್ಲೇ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಕರ್ನಾಟಕ ಮದ್ಯ ಪತ್ತೆಯಾಗಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಘಟನೆಯ ವಿವರ:

ಉಪ್ಪಳ ಗೇಟ್ ಬಳಿ ಸದ್ಯ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಕಳೆದ ಒಂದು ತಿಂಗಳಿನಿಂದ ಈ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಅಲ್ಲದೆ ಸಾರ್ವಜನಿಕರ ಗಮನಕ್ಕೆ ಬರಲೆಂದು “ನೋ ಎಂಟ್ರಿ” (No Entry) ನಾಮಫಲಕವನ್ನು ಸಹ ಅಳವಡಿಸಲಾಗಿತ್ತು. ಆದರೆ, ನಿನ್ನೆ ರಾತ್ರಿ ಸುಮಾರು 9:20 ರ ವೇಳೆಗೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ ಕಾರು ಚಾಲಕ, ನಿರ್ಬಂಧಿತ ರಸ್ತೆಯಲ್ಲೇ ವೇಗವಾಗಿ ಮುನ್ನುಗ್ಗಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಕಾಮಗಾರಿ ನಡೆಯುತ್ತಿದ್ದ ಗುಂಡಿಗೆ ತಲೆಕೆಳಗಾಗಿ ಬಿದ್ದಿದೆ.

ಸ್ಥಳೀಯರಿಂದ ರಕ್ಷಣೆ – ಪೊಲೀಸರ ಎಂಟ್ರಿ:

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ಧಾವಿಸಿ, ಕಾರಿನೊಳಗೆ ಸಿಲುಕಿದ್ದ ಚಾಲಕನನ್ನು ಅತ್ಯಂತ ಶ್ರಮವಹಿಸಿ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಮಂಜೇಶ್ವರ ಪೊಲೀಸರು ಕ್ರೇನ್ ಬಳಸಿ ಗುಂಡಿಗೆ ಬಿದ್ದಿದ್ದ ಕಾರನ್ನು ಹೊರಗೆ ತೆಗೆದಿದ್ದಾರೆ.

ಬಚ್ಚಿಟ್ಟಿದ್ದ 30 ಬಾಕ್ಸ್ ಮದ್ಯ ಪತ್ತೆ:

ಪೊಲೀಸರು ಕಾರನ್ನು ತಪಾಸಣೆ ನಡೆಸಿದಾಗ ಇಡೀ ಕಾರಿನಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ಸುಮಾರು 30 ಬಾಕ್ಸ್‌ಗಳಷ್ಟು ಕರ್ನಾಟಕದ ಮದ್ಯ ಪತ್ತೆಯಾಗಿದೆ. ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಮೀಯಪದವು ಮೂಲದ ಕುಳೂರು ಚಿನಾಲ ಚಂದ್ರಹಾಸ ಎಂಬವರ ಪುತ್ರ 28 ವರ್ಷ ಪ್ರಾಯದ ಪ್ರಜ್ವಲ್ ಎಂಬಾತನನ್ನು ಬಂಧಿಸಿದ್ದಾರೆ. ಪೊಲೀಸರು ಸದ್ಯ ಕಾರು ಮತ್ತು ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಅಕ್ರಮ ಮದ್ಯದ ಜಾಲದ ಹಿಂದೆ ಬೇರೆ ಯಾರಿದ್ದಾರೆ ಎಂಬ ಬಗ್ಗೆ ಮುಂದಿನ ತನಿಖೆ ಕೈಗೊಂಡಿದ್ದಾರೆ.

You may also like

News

ಮಂಡ್ಯ ASP ತಿಮ್ಮಯ್ಯ ಇನ್ನಿಲ್ಲ – ಪೊಲೀಸ್ ಇಲಾಖೆಯಲ್ಲಿ ಶೋಕ

ಉಡುಪಿ, ಮಣಿಪಾಲ, ಕೋಟದಲ್ಲೂ ಸೇವೆ ಸಲ್ಲಿಸಿದ್ದ ಅಧಿಕಾರಿ ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ (ASP) ತಿಮ್ಮಯ್ಯ ಅವರು ಅನಾರೋಗ್ಯದಿಂದ ಇಂದು ಅಕ್ಟೋಬರ್ 10ರಂದು ಶನಿವಾರ ನಿಧನರಾಗಿದ್ದಾರೆ.
News

ಬೆಳ್ತಂಗಡಿಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು–2026

ಯುವ ಸಮುದಾಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು–2026 ಕಾರ್ಯಕ್ರಮ ಅಕ್ಟೋಬರ್ 8ರಂದು

You cannot copy content of this page