September 5, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರದ ICYM ನೂತನ ನಿರ್ದೇಶಕರಾಗಿ ವಂದನೀಯ ಫಾದರ್ ಪ್ರವೀಣ್ ಡಿಸೋಜ ಪದಗ್ರಹಣ

ಮಂಗಳೂರು ಧರ್ಮಕ್ಷೇತ್ರದ ICYM ಇದರ ನೂತನ ನಿರ್ದೇಶಕರಾಗಿ ಹಾಗೂ ಯುವ ಆಯೋಗದ ಕಾರ್ಯದರ್ಶಿಯಾಗಿ ವಂದನೀಯ ಫಾದರ್ ಪ್ರವೀಣ್ ಡಿಸೋಜ ಅವರು ಅತ್ಯಂತ ವೈಭವದಿಂದ ಅಧಿಕಾರ ಸ್ವೀಕರಿಸಿದ್ದಾರೆ. ಮಂಗಳೂರು ಧರ್ಮಕ್ಷೇತ್ರದ ಯುವಜನರು ಭವ್ಯ ಸ್ವಾಗತದೊಂದಿಗೆ ತಮ್ಮ ನೂತನ ನಿರ್ದೇಶಕರನ್ನು ಬರಮಾಡಿಕೊಂಡರು.

ಯುವಶಕ್ತಿಯೇ ಚರ್ಚ್‌ನ ಬಲ – ಫಾದರ್ ಪ್ರವೀಣ್ ಡಿಸೋಜ:

ಅಧಿಕಾರ ಸ್ವೀಕರಿಸಿ, ಪ್ರಮಾಣ ವಚನ ಬೋಧಿಸಿದ ಬಳಿಕ ಯುವಜನರನ್ನು ಉದ್ದೇಶಿಸಿ ಮಾತನಾಡಿದ ನೂತನ ನಿರ್ದೇಶಕರಾದ ವಂದನೀಯ ಫಾದರ್ ಪ್ರವೀಣ್ ಡಿಸೋಜ ಅವರು, “ಐಸಿವೈಎಂ ಮತ್ತು ಯುವಜನರು ಯಾವಾಗಲೂ ನಮ್ಮ ಚರ್ಚ್‌ನ ನಿಜವಾದ ಶಕ್ತಿಯಾಗಿದ್ದಾರೆ. ಈ ಅದ್ಭುತ ಯುವ ಚಳವಳಿಯ ಭಾಗವಾಗಲು ನನಗೆ ಹೆಮ್ಮೆಯಾಗುತ್ತಿದೆ. ಮುಂಬರುವ ಎಲ್ಲಾ ಕಾರ್ಯಕ್ರಮಗಳಿಗೆ ಮತ್ತು ಯುವಕರ ಬೆಳವಣಿಗೆಗೆ ನನ್ನ ಸಂಪೂರ್ಣ ಬೆಂಬಲ ಸದಾ ಇರಲಿದೆ,” ಎಂದು ಭರವಸೆ ನೀಡಿದರು.

6 ವರ್ಷಗಳ ಸುಂದರ ನೆನಪುಗಳನ್ನು ಹಂಚಿಕೊಂಡ ಫಾದರ್ ಅಶ್ವಿನ್:

ಕಳೆದ 6 ವರ್ಷಗಳಿಂದ ಐಸಿವೈಎಂ ನಿರ್ದೇಶಕರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿ ನಿರ್ಗಮಿಸುತ್ತಿರುವ ವಂದನೀಯ ಫಾದರ್ ಅಶ್ವಿನ್ ಕಾರ್ಡೋಜ ಅವರು ತಮ್ಮ ಸುದೀರ್ಘ ಯುವ ಸೇವೆಯ ಪ್ರಯಾಣದ ಸುಂದರ ನೆನಪುಗಳನ್ನು ಮೆಲುಕು ಹಾಕಿದರು. ಇದೇ ವೇಳೆ ಅವರು ನೂತನ ನಿರ್ದೇಶಕರಾದ ವಂದನೀಯ ಫಾದರ್ ಪ್ರವೀಣ್ ಡಿಸೋಜ ಅವರಿಗೆ ಮುಂದಿನ ಜವಾಬ್ದಾರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತೀ ವಂದನೀಯ ಫಾದರ್ ಸಂತೋಷ್ ರೊಡ್ರಿಗಸ್ ಅವರು ಪ್ರಸ್ತುತ ಸಂದರ್ಭಕ್ಕೆ ಪೂರಕವಾಗಿ ಮಾತನಾಡಿ ಶುಭ ಹಾರೈಸಿದರು.

ಯುವ ಆಯೋಗದ ಸಂಯೋಜಕರಾದ ವಿನ್ಸ್ಟನ್ ಸಿಕ್ವೇರಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರನ್ನು ಸ್ವಾಗತಿಸಿದರು. ಮಂಗಳೂರು ಧರ್ಮಕ್ಷೇತ್ರದ ICYM ಅಧ್ಯಕ್ಷ ವಿಜಯ್ ಅಶ್ವಿನ್ ಕಾರ್ಡೋಜ ವಂದನಾರ್ಪಣೆ ಮಾಡಿದರು. ರೊನಾಲ್ಡ್ ಚೇತನ್ ಅಮಿನ್ ಕಾರ್ಯಕ್ರಮವನ್ನು ನಿರೂಪಿಸಿದರು. ಐಸಿವೈಎಂ ಮಂಗಳೂರು ಧರ್ಮಕ್ಷೇತ್ರದ ಕಾರ್ಯದರ್ಶಿ ಮರಿಯಾ ಅವರು ಕಾರ್ಯಕ್ರಮದ ಸಂಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.

You may also like

News

ಹನೂರು ಅರಣ್ಯ ಗುಂಡಿನ ದಾಳಿ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಕ್ರೈಸ್ತ ಸಂಘಟನೆ ಒತ್ತಾಯ

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಡಿಜಿಪಿಗೆ ಸ್ಟ್ಯಾನಿ ಪಿಂಟೋ ಬೆಂಗಳೂರು ಮನವಿ ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ
News

ಸಮಾಜಸೇವೆಯ ಹಾದಿಗೆ ರಾಷ್ಟ್ರೀಯ ಕಿರೀಟ – ಕೋತ್ವಾಲ್ ಪದ್ಮನಾಭ ಶೇರುಗಾರ್‌ ಅವರಿಗೆ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ’

ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುವುದರ ಜೊತೆಗೆ ಸಮಾಜಮುಖಿ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರು ಪ್ರತಿಷ್ಠಿತ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ–2026’ ಗೆ ಆಯ್ಕೆಯಾಗಿದ್ದಾರೆ.

You cannot copy content of this page