November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದೇರಳಕಟ್ಟೆಯ ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ಅಕ್ಟೋಬರ್ 27 ಹಾಗೂ 28ರಂದು ‘ಪ್ರೇರಣಾ ವಿಜ್ಞಾನೋತ್ಸವ 2026’

4,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ – ₹1.80 ಲಕ್ಷ ಮೌಲ್ಯದ ಬಹುಮಾನ! ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ “ಕುತೂಹಲ ಮತ್ತು ಆವಿಷ್ಕಾರದ ಸಂಗಮ” (Where Curiosity Meets Discovery) ಎಂಬ ಧ್ಯೇಯವಾಕ್ಯದೊಂದಿಗೆ ಪ್ರೇರಣಾ ವಿಜ್ಞಾನೋತ್ಸವ 2026 ಅನ್ನು ಅಕ್ಟೋಬರ್ 27 ಮತ್ತು 28ರಂದು ದೇರಳಕಟ್ಟೆಯ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ. ಎರಡು ದಿನಗಳ ಈ ವಿಜ್ಞಾನೋತ್ಸವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ, ಸೃಜನಶೀಲತೆ, ನಾವೀನ್ಯತೆ, ತಂಡದ ಸಹಕಾರ ಹಾಗೂ ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ದೇರಳಕಟ್ಟೆಯ ಫಾದರ್ ಮುಲ್ಲರ್ […]

News

ಬಂಟ್ವಾಳದಲ್ಲಿ ವೈವಾಹಿಕ ಕಲಹ ದುರಂತದಲ್ಲಿ ಅಂತ್ಯ – ಪತ್ನಿ ಕೊಲೆ ಆರೋಪದಲ್ಲಿ ಪತಿ ಪೊಲೀಸ್ ವಶಕ್ಕೆ 

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪತಿ 36 ವರ್ಷ ಪ್ರಾಯದ ಸಂಜೀವಕುಮಾರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿ 26 ವರ್ಷ ಪ್ರಾಯದ ಅರುಣ್ ಮಹಾದೇವ್ ದೇಸಂಗಿ ನೀಡಿದ ದೂರಿನ ಪ್ರಕಾರ, ಅವರ ಸಹೋದರಿ 34 ವರ್ಷ ಪ್ರಾಯದ ಸುನೀತಾ ಮಹಾದೇವ್ ದೇಸಂಗಿ ಅವರನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಸಂಜೀವಕುಮಾರ್‌ಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗಳು ಬಂಟ್ವಾಳ […]

News

ರಯಾನ್ ಇಂಟರ್‌ನ್ಯಾಷನಲ್ ಸ್ಕೂಲ್ ಬಸ್‌ಗೆ ಪ್ರವಾಸಿ ಮಿನಿ ಬಸ್ ಡಿಕ್ಕಿ – ಚಾಲಕ ಸೇರಿ 13 ವಿದ್ಯಾರ್ಥಿಗಳಿಗೆ ಗಾಯ

ಗಾಯಾಳುಗಳಿಗೆ ಮುಕ್ಕದ ಶ್ರೀನಿವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಲ್ಕಿಯ ಕೊಲ್ನಾಡು ಬಳಿ ಪ್ರವಾಸಿ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ರಯಾನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಶಾಲಾ ಬಸ್ ಚರಂಡಿಗೆ ಬಿದ್ದಿದ್ದು, ಚಾಲಕ ಸೇರಿದಂತೆ 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಘಟನೆ ಇಂದು ಅಕ್ಟೋಬರ್ 23ರಂದು ಶುಕ್ರವಾರ ಸಂಜೆ ಸುಂದರರಾಮ್ ಶೆಟ್ಟಿ ಸಭಾಂಗಣದ ಸಮೀಪ ನಡೆದಿದೆ. ಪೊಲೀಸರ ಪ್ರಕಟಣೆಯ ಪ್ರಕಾರ, ಮುಲ್ಕಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೆಂಗಳೂರಿನ SRS ಟೂರಿಸ್ಟ್ ಸಂಸ್ಥೆಗೆ ಸೇರಿದ KA-01-AR-1655 ನೋಂದಣಿ ಸಂಖ್ಯೆಯ ಮಿನಿ ಬಸ್ ಅನ್ನು […]

News

1 ವರ್ಷ 1 ತಿಂಗಳ ಪುಟಾಣಿ ಚಾರ್ವಿಕ್‌ ವಿಶ್ವದಾಖಲೆ – 2 ನಿಮಿಷ 40 ಸೆಕೆಂಡುಗಳಲ್ಲಿ 40 ಮೆಟ್ಟಿಲು ಹತ್ತಿ ಅಂತಾರಾಷ್ಟ್ರೀಯ ಮನ್ನಣೆ!

ಮಂಗಳೂರಿನ ದೀಪಕ್ ಶೆಟ್ಟಿ ಹಾಗೂ ವಿನುತಾ ಶೆಟ್ಟಿ ದಂಪತಿಯ ಪುತ್ರನಿಗೆ ‘ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ ಗೌರವ – ‘ಸೂಪರ್ ಟ್ಯಾಲೆಂಟೆಡ್ ಕಿಡ್’ ಪ್ರಶಸ್ತಿಗೆ ಪಾತ್ರ ಅಂಬೆಗಾಲಿಡುವ ವಯಸ್ಸಿನಲ್ಲೇ ಅಸಾಧಾರಣ ದೈಹಿಕ ಚುರುಕುತನ ಪ್ರದರ್ಶಿಸಿದ ಮಂಗಳೂರಿನ ಪುಟಾಣಿ ಚಾರ್ವಿಕ್ ಡಿ. ಶೆಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾನೆ. ಕೇವಲ 1 ವರ್ಷ 1 ತಿಂಗಳ ಪ್ರಾಯದಲ್ಲಿ ಯಾವುದೇ ಸಹಾಯವಿಲ್ಲದೆ 40 ಮೆಟ್ಟಿಲುಗಳನ್ನು 2 ನಿಮಿಷ 40 ಸೆಕೆಂಡುಗಳಲ್ಲಿ ಹತ್ತಿದ ಸಾಧನೆಗಾಗಿ ‘ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ ಸಂಸ್ಥೆಯಿಂದ […]

News

ಅಕ್ಟೋಬರ್ 24ರಂದು ಧರ್ಮಸ್ಥಳದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

ವಿಶೇಷ ಪೂಜೆ ಮತ್ತು ಹಿರಿಯ ನೌಕರರಿಗೆ ಸನ್ಮಾನ – ಎರಡು ತಿಂಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಸಂಭ್ರಮದ ಸಮಾರೋಪ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ ಅಕ್ಟೋಬರ್ 24ರಂದು ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಲಿದೆ. ಕ್ಷೇತ್ರದ ನೌಕರರು, ಸ್ಥಳೀಯ ನಾಗರಿಕರು, ಭಕ್ತರು ಮತ್ತು ಅಭಿಮಾನಿಗಳ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಗೌರವ ಸಮರ್ಪಣಾ ಕಾರ್ಯಕ್ರಮಗಳು ಜರುಗಲಿವೆ. ಈ ಪ್ರಯುಕ್ತ ಭಗವಾನ್ ಚಂದ್ರನಾಥ ಸ್ವಾಮಿ ಬಸದಿ ಮತ್ತು ಶ್ರೀ […]

News

65% Burns Survivor Gets a Second Chance at Life at Father Muller

In a remarkable story of resilience, advanced medical care and teamwork, a patient who sustained 65% deep thermal burns has recovered and returned to work following treatment at Father Muller Medical College Hospital (FMMCH), Mangaluru. The successful outcome highlights the hospital’s expertise in managing critical burn injuries and the vital role of cadaveric skin grafting […]

News

ವಕೀಲರ ಹಿತಾಸಕ್ತಿ ರಕ್ಷಣೆಗೆ ಹೊಸ ವೇದಿಕೆ – ದಕ್ಷಿಣ ಕನ್ನಡದಲ್ಲಿ AILC ಜಿಲ್ಲಾ ಘಟಕ ಅಸ್ತಿತ್ವಕ್ಕೆ

ಅಧ್ಯಕ್ಷರಾಗಿ ಸಿದ್ದಿಕ್ ಹಾಜಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ತಾಜುದ್ದೀನ್ ಆಯ್ಕೆ ವಕೀಲರ ಹಕ್ಕುಗಳ ರಕ್ಷಣೆ, ವೃತ್ತಿಪರ ಸಮಸ್ಯೆಗಳ ಪರಿಹಾರ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ವಕೀಲರ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್‌ನ (AILC) ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ರಚಿಸಲಾಗಿದೆ. ನೂತನ ಘಟಕದ ಅಧ್ಯಕ್ಷರಾಗಿ ಅಡ್ವೊಕೇಟ್ ಸಿದ್ದಿಕ್ ಹಾಜಿ (ಪುತ್ತೂರು) ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೊಕೇಟ್ ತಾಜುದ್ದೀನ್ (ಮಂಗಳೂರು) ಆಯ್ಕೆಯಾಗಿದ್ದಾರೆ. ಮಂಗಳೂರಿನ ಲಾಲ್‌ಬಾಗ್‌ನಲ್ಲಿ ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್ ಕರ್ನಾಟಕದ ಕರಾವಳಿ […]

News

ಮೂಡುಬಿದಿರೆಯಲ್ಲಿ ವಿದ್ಯುತ್ ಅವಘಡ: ಮಗ ಶೋನ್‌ನ ರಕ್ಷಣೆಗೆ ಧಾವಿಸಿದ ತಾಯಿ ಮರ್ಸಿ ಮಸ್ಕರೇನಸ್‌ಗೂ ವಿದ್ಯುತ್ ಶಾಕ್‌ – ಇಬ್ಬರೂ ದುರ್ಮರಣ!

ಮಗನನ್ನು ರಕ್ಷಿಸಲು ಧಾವಿಸಿದ ತಾಯಿಯೂ ವಿದ್ಯುತ್ ಪ್ರವಹಿಸಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಮೂಡುಬಿದಿರೆಯ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಸಂಭವಿಸಿದೆ. ಘಟನೆಯಲ್ಲಿ 45 ವರ್ಷ ಪ್ರಾಯದ ಮರ್ಸಿ ಮಸ್ಕರೇನಸ್ ಮತ್ತು ಅವರ ಪುತ್ರ 18 ವರ್ಷ ಪ್ರಾಯದ ಶೋನ್ ಮಸ್ಕರೇನಸ್ ಮೃತಪಟ್ಟಿದ್ದಾರೆ. ಮಾಹಿತಿಯ ಪ್ರಕಾರ, ಶೋನ್ ಬಟ್ಟೆ ಒಣಗಿಸುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿದ್ದು, ಮಗನನ್ನು ರಕ್ಷಿಸಲು ಮುಂದಾದ ತಾಯಿಗೂ ವಿದ್ಯುತ್ ತಗುಲಿದೆ ಎನ್ನಲಾಗಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ಹೈಟೆನ್ಷನ್ […]

News

ಧರ್ಮಸ್ಥಳದಲ್ಲಿ ಶರನ್ನವರಾತ್ರಿ ವೈಭವ ಸಂಪನ್ನ – ಒಂಬತ್ತು ದಿನಗಳ ವಿಶೇಷ ಪೂಜೆ, ಧಾರ್ಮಿಕ ಉತ್ಸವ ಹಾಗೂ ಸಂಗೀತಾರಾಧನೆಗೆ ತೆರೆ

ಸಹಸ್ರಾರು ಮುತ್ತೈದೆಯರಿಗೆ ವಸ್ತ್ರ ಪ್ರಸಾದ ವಿತರಣೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಒಂಬತ್ತು ದಿನಗಳ ಕಾಲ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ನಡೆದ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್ 19ರಂದು ಮಹಾನವಮಿಯಂದು ಸಂಪನ್ನಗೊಂಡಿತು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಸಂಗೀತ ಕಾರ್ಯಕ್ರಮಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು. ಅಕ್ಟೋಬರ್ 11ರಿಂದ 19ರವರೆಗೆ ಪ್ರತಿದಿನ ರಾತ್ರಿ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಉತ್ಸವ, ಕನ್ನಿಕಾ ಪೂಜೆ ಹಾಗೂ ಅಷ್ಟಾವಧಾನ ಸೇವೆಗಳು […]

News

ಮದುವೆ ಸಮಾರಂಭದಲ್ಲಿ 3 ವರ್ಷದ ಬಾಲಕಿಯ ಚಿನ್ನದ ಸರ ಕಳವು – 24 ಗಂಟೆಯೊಳಗೆ ಬರ್ಕೆ ಪೊಲೀಸರಿಂದ ಆರೋಪಿ ಬಂಧನ!

ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಮೂರೂವರೆ ವರ್ಷದ ಬಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬರ್ಕೆ ಠಾಣೆಯ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯಿಂದ ಕಳವು ಮಾಡಿದ್ದ ಸುಮಾರು 10 ಗ್ರಾಂ ತೂಕದ, ಅಂದಾಜು ₹1.35 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. 2026ರ ಅಕ್ಟೋಬರ್ 18ರಂದು ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಟಿ.ಎಂ.ಎ. ಪೈ ಹಾಲ್‌ನಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮೂರೂವರೆ ವರ್ಷದ […]

You cannot copy content of this page