ಮಂಗಳೂರು ಪುರಭವನದಲ್ಲಿ ಶ್ರಾವ್ಯ ಬಿ.ಎಸ್. ಅವರ ಭರತನಾಟ್ಯ ರಂಗಪ್ರವೇಶ – ಕಲಾಭಿಮಾನಿಗಳ ಮನಸೂರೆಗೊಂಡ ನೃತ್ಯ ವೈಭವ
“ಶ್ರಾವ್ಯಳ ನೃತ್ಯದಲ್ಲಿ ಶಾಂತಲೆಯ ಕಲಾನೈಪುಣ್ಯದ ಛಾಯೆ ಕಂಡಿತು” – ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಆಧ್ಯಾತ್ಮಿಕತೆಯ ಸೊಬಗನ್ನು ಪ್ರತಿಬಿಂಬಿಸುವ ಭರತನಾಟ್ಯವು ಕೇವಲ ಮನರಂಜನೆಯ ಕಲೆಯಲ್ಲ; ಅದು ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿದೆ. ಮಂಗಳೂರು ಪುರಭವನದಲ್ಲಿ ಅಕ್ಟೋಬರ್ 23ರಂದು ಭಾನುವಾರ ನಡೆದ ಶ್ರಾವ್ಯ ಬಿ.ಎಸ್. ಅವರ ಭರತನಾಟ್ಯ ರಂಗಪ್ರವೇಶ ಸಮಾರಂಭದಲ್ಲಿ ನೃತ್ಯದ ಲಯ, ಭಾವ ಮತ್ತು ಅಭಿವ್ಯಕ್ತಿಯ ಸೊಬಗು ಕಲಾಭಿಮಾನಿಗಳ ಮನಸೂರೆಗೊಂಡಿತು. ಸೌರಭ ಸಂಗೀತ ನೃತ್ಯ ಕಲಾ ಪ್ರತಿಷ್ಠಾನದ ವತಿಯಿಂದ, ನೃತ್ಯ […]













